Just In
Don't Miss!
- News
ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಂಪೇಗೌಡ ಹಾಡುಗಳು ಹರ ಹರ ಶಂಕರ ಶಶಿಧರ
ಕಿಚ್ಚ ಸುದೀಪ್ ನಾಯಕ ಮತ್ತು ಖುದ್ದು ನಿರ್ದೇಶಿಸುತ್ತಿರುವ ತಮಿಳಿನ ಯಶಸ್ವಿ 'ಸಿಂಗಂ' ಚಿತ್ರದ ರಿಮೇಕ್ 'ಕೆಂಪೇಗೌಡ'. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎರಡು ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿದರೆ, ಯೋಗರಾಜ್ ಭಟ್, ಘೌಸ್ ಪೀರ್ ಮತ್ತು ಕವಿರಾಜ್ ತಲಾ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆಲ್ಬಮ್ ನಲ್ಲಿ ಒಟ್ಟು ಐದು ಹಾಡುಗಳಿದ್ದು ಸುದೀಪ್ ಒಂದು ಹಾಡಿಗೆ ಧ್ವನಿಗೂಡಿಸಿದ್ದಾರೆ.
1. ಹಳೆ ರೇಡಿಯೋ ಹಾಕಿ ಹಾಡು ಕೇಳುವಾ : ಯೋಗರಾಜ್ ಭಟ್ ಬರೆದಿರುವ ಈ ಹಾಡಿನಲ್ಲಿ ಅಂತಹ ವಿಶೇಷವೇನೂ ಇಲ್ಲ. ಹಾಡಿನ ಮಧ್ಯೆ ಆಕಾಶವಾಣಿಯಲ್ಲಿ ಬರುವ ಹವಾಮಾನ ವರದಿಯಂತೆ ಪ್ರೀತಿ ಬಗ್ಗೆ ಕೆಲವೊಂದು ನುಡಿಮುತ್ತುಗಳಿವೆ. ಹಾಗೆ ಸುಮ್ಮನೆ ಗೀಚಿದಂತಿದೆ ಯೋಗರಾಜ್ ಭಟ್ ಸಾಹಿತ್ಯ. ಸುದೀಪ್, ಶಮಿತಾ ಧ್ವನಿಗೂಡಿಸಿರುವುದೇ ಈ ಹಾಡಿನ ವಿಶೇಷ.
2. ತರತರ ಹಿಡಿಸಿದೆ ಮನಸಿಗೆ ನೀನು: ತೆಲುಗು ಸಾಹಿತ್ಯದೊಂದಿಗೆ ಶುರುವಾಗುವ ಹಾಡು. ಸಾಹಿತ್ಯ ಕೇಳದಷ್ಟು ಮಟ್ಟಿಗೆ ಸಂಗೀತ ಅಬ್ಬರಿಸಿದರೂ ಟೋನ್ ಇಂಪಾಗಿದ್ದು, ಡ್ಯುಯಟ್ ಹಾಡಿಗೆ ಪ್ರೇಕ್ಷಕರು 'ಜೈ ಹೋ' ಅನ್ನಲು ಅಡ್ಡಿಯಿಲ್ಲ. ವಿಜಯ್ ಪ್ರಕಾಶ್ ಮತ್ತು ಶ್ರೇಯಾ ಘೋಷಾಲ್ ಈ ಹಾಡನ್ನು ಹಾಡಿದ್ದಾರೆ.
3. ಶ್ರೀ ರಾಮ ಜೈರಾಮ ಹೋಗಾರೆ ಹಂಗಾಮ: ಪಕ್ಕಾ ತಪಾಂಗುಚಿ ಹಾಡು. ಶಂಕರ್ ಮಹಾದೇವನ್ ತನ್ನ ಎಂದಿನ ಶೈಲಿಯಲ್ಲಿ ಹಾಡಿದ್ದಾರೆ. ಈ ರೀತಿಯ ಟೋನ್‌ಗಳು ಈಗಾಗಲೆ ಬಹಳಷ್ಟು ಬಂದು ಹೋಗಿವೆ. ಆ ಸಾಲಿಗೆ ಈ ಹಾಡನ್ನ್ನು ಸೇರಿಸಬಹುದು.
4. ವಯಸ್ಸು ನನಗೆ ಹದಿನೆಂಟು ಆಯಿತು, ಗೆಳೆಯನೇ: ನಾಗೇಂದ್ರ ಪ್ರಸಾದ್ ಹಾಡಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ. ಸಂಗೀತ ನಿರ್ದೇಶಕರು ಉತ್ತಮ ಟ್ಯೂನ್ ನೀಡಿದ್ದರೂ ಸೋನು ಶ್ರೇಯಾ ಧ್ವನಿಗೆ ಹೊಂದುಕೊಂಡ ನಮ್ಮ ಕನ್ನಡಿಗರಿಗೆ ಈ ಜೋಡಿ ಧ್ವನಿ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ನರೇಶ್ ಐಯ್ಯರ್, ಲಕ್ಷ್ಮೀ ಮನಮೋಹನ್ ಹಾಡಿರುವ ಹಾಡು. -
5. ಹರ ಹರ ಶಂಕರ ಶಶಿಧರ: ನಾಯಕನ ಬಗ್ಗೆ ಹೇಳಿಕೊಳ್ಳುವಂತಹ ಹಾಡು. ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಅಷ್ಟೇನೂ ಮೆಚ್ಚಿಕೊಳ್ಳುವಂತದ್ದೂ ಇಲ್ಲಾ. ಈ ಹಾಡನ್ನು ರವಿ ಶಂಕರ್ ಹಾಡಿದ್ದಾರೆ. ಒಟ್ಟಿನಲ್ಲಿ ಐದು ಹಾಡುಗಳ ಪೈಕಿ ಎರಡು ಹಾಡು ಓಕೆ, ಮಿಕ್ಕಿದ್ದು ಅಷ್ಟಕಷ್ಟೆ.