»   » ಬೆಳ್ಳಿತೆರೆಗೆ ನಟ ಕಲ್ಯಾಣ್ ಕುಮಾರ್ ಪುತ್ರ ಭರತ್

ಬೆಳ್ಳಿತೆರೆಗೆ ನಟ ಕಲ್ಯಾಣ್ ಕುಮಾರ್ ಪುತ್ರ ಭರತ್

Posted By:
Subscribe to Filmibeat Kannada

'ಎಕ್ಕ'....ಇದು ಇಸ್ಪೀಟ್ ಅಲ್ಲಾ ಗುರು ಅಂತಿದ್ದಾರೆ ಚಿತ್ರದ ನಿರ್ದೇಶಕ ನಾಗನಾಥ ಜೋಶಿ. ಹಾಗಿದ್ದರೆ ಯಕ್ಕ ಅಂದ್ರೆ ಏನು ಗುರು ಅಂತ ಕೇಳಿದ್ರೆ ಚಿತ್ರ ಬಿಡುಗಡೆಯಾಗುವವರೆಗೂ ವಸು ತಡ್ಕೊ ಗುರು ಅಂತಾರೆ ನಾಗನಾಥ ಜೋಶಿ. ಈ ಚಿತ್ರದ ಮೂಲಕ ಕನ್ನಡದ ಹಿರಿಯ ನಟ ಕಲ್ಯಾಣ್ ಕುಮಾರ್ ಅವರ ಮಗ ಭರತ್ ಕಲ್ಯಾಣ್ ಚಿತ್ರರಂಗಕ್ಕೆ ಪರಿಯಚಯವಾಗುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಧ್ವನಿಸುರುಳಿಗಳು ಗ್ರೀನ್ ಹೌಸ್ ರಾಜ್ ಮಿಲನದಲ್ಲಿ ಬಿಡುಗಡೆಯಾದವು. ಚಿತ್ರದ ನಿರ್ಮಾಪಕರು ಮುಂಬೈನ ರಮೇಶ್ ಪವಾರ್. ಈ ಹಿಂದೆ ನಾಗನಾಥ ಜೋಶಿ 'ಜಾಲ' ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರ ಗೆಲುವಿಗೆ ದೂರವಾದ ಕಾರಣ ಇದೀಗ 'ಎಕ್ಕ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಧ್ವನಿಸುರಿಳಿಯೇನೋ ಬಿಡುಗಡೆಯಾಯಿತು. ಆದರೆ ಮಾರುಕಟ್ಟೆ ಮಾಡಲು ಯಾರು ಮುಂದೆ ಬರಲಿಲ್ಲ.ಹಾಗಾಗಿ ನಿರ್ದೇಶಕ ಜೋಶಿ ಅವರು A3 ಆಡಿಯೋ ಕಂಪನಿಯನ್ನು ಹುಟ್ಟಿಹಾಕಿದ್ದಾರೆ.

ಎಂ ಎನ್ ಕೃಪಾಕರ್ ಅವರ ಸಂಗೀತ ಚಿತ್ರಕ್ಕಿದ್ದು 'ಎಕ್ಕ'ಧ್ವನಿಸುರುಳಿಯನ್ನು ಕಲ್ಯಾಣ್ ಕುಮಾರ್ ಅವರ ಧರ್ಮಪತ್ನಿ ರೇವತಿ ಕಲ್ಯಾಣ್ ಕುಮಾರ್ ಬಿಡುಗಡೆ ಮಾಡಿದರು. ಯಕ್ಕ ಚಿತ್ರದ ಮೂಲಕ ಸುಭಾಷಿಣಿ ಎಂಬ ಹೊಸ ಚೆಲುವೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 'ಎಕ್ಕ' ಚಿತ್ರದ ಬಹುತೇಕ ಚಿತ್ರೀಕರಣ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದ ವಾಡಿಯೊಂದಲ್ಲಿ ನಡೆದಿದೆ. ಎರಡು ಹಾಡುಗಳನ್ನು ಎಂಟು ಎಕರೆ ಪ್ರದೇಶದ ವಾಡೆಯಲ್ಲಿ ಚಿತ್ರೀಕರಿಸಿರುವುದು ವಿಶೇಷ. ಉಳಿದ ಹಾಡುಗಳನ್ನು ಗೌರಿಬಿದನೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಚಿತ್ರೀಕರಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada