»   » ಸಿಡಿ ರೂಪದಲ್ಲಿ ಪಿ ಕಾಳಿಂಗರಾಯರ ಹಾಡುಗಳು

ಸಿಡಿ ರೂಪದಲ್ಲಿ ಪಿ ಕಾಳಿಂಗರಾಯರ ಹಾಡುಗಳು

Posted By:
Subscribe to Filmibeat Kannada
P. Kalinga Rao
ಕನ್ನಡ ಸುಗಮ ಸಂಗೀತ ಕ್ಷೇತ್ರದ ಪಿತಾಮಹ ಪಿ ಕಾಳಿಂಗರಾಯರ ಹಾಡುಗಳನ್ನು ಲಹರಿ ರೆಕಾರ್ಡಿಂಗ್ ಕಂಪನಿ ಸಿಡಿ ರೂಪದಲ್ಲಿ ಹೊರತಂದಿದೆ. 'ಮರೆಯದ ಹಾಡು' ಹೆಸರಿನಲ್ಲಿ ಒಟ್ಟು 90 ಹಾಡುಗಳುಳ್ಳ ಒಂಬತ್ತು ಸಿಡಿಗಳನ್ನು ಹೊರತರಲಾಗಿದೆ. ಒಂಬತ್ತು ಸಿಡಿಗಳ ಒಟ್ಟು ಬೆಲೆ ರು.270.

ಪ್ರತಿಯೊಂದು ಸಿಡಿಗೂ ಒಂದೊಂದು ಹೆಸರನ್ನು ಇಡಲಾಗಿದೆ. ಉದಾಹರಣೆಗೆ ಉದಯವಾಯಿತು ಚೆಲುವ ಕನ್ನಡ ನಾಡು...ಹೀಗೆ ಹೆಸರುಗಳನ್ನ್ನು ಇಡಲಾಗಿದೆ.ಶ್ರೋತೃಗಳಿಗೆ ಪಿ ಕಾಳಿಂಗರಾಯರ ಹಾಡುಗಳನ್ನು ಕೇಳುವ ಸೌಭಾಗ್ಯ ಲಹರಿ ಆಡಿಯೋ ಕಂಪನಿ ಕಲ್ಪಿಸಿದೆ.

ಓಂ ನಮೋ ನಾರಾಯಣ(ಕೈವಾರ ಮಹಾತ್ಮೆ), ತಾಯಿ ದೇವಿಯನು ಕಾಣೆ ಹಂಬಲಿಸಿ (ಕಿತ್ತೂರು ಚೆನ್ನಮ್ಮ) ಮೊದಲಾದ ಜನಪ್ರಿಯ ಗೀತೆಗಳನ್ನು ತಮ್ಮ ಕಂಠಸಿರಿಯಿಂದ ಬೆಳ್ಳಿತೆರೆಗೆ ನೀಡಿದ ರಾಯರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಅವರ ಪ್ರಸಿದ್ಧ ಗೀತೆ 'ಅಂತಿಂಥ ಹೆಣ್ಣು ನಾನಲ್ಲ'ವನ್ನು ಅವರೇ ಹಾಡುತ್ತಿರುವಂತೆ 'ತುಂಬಿದ ಕೊಡ' ಚಿತ್ರದಲ್ಲಿ ತೋರಿಸಲಾಗಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada