For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಚಿತ್ರಕ್ಕೆ ರೆಹಮಾನ್‌‍ಗೆ ಭಾರಿ ಸಂಭಾವನೆ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಗಾಡ್ ಫಾದರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿರುವುದು ಗೊತ್ತೆ ಇದೆ. ಈ ಚಿತ್ರಕ್ಕೆ ರೆಹಮಾನ್‌ಗೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತೆ? ಚಿತ್ರ ನಿರ್ಮಾಪಕ ಕೆ ಮಂಜು ಅವರನ್ನು ಕೇಳಿದರೆ ಅವರು ಹಾರಿಕೆಯ ಉತ್ತರ ನೀಡುತ್ತಾರೆ. ಒಟ್ಟಿನಲ್ಲಿ ಎಂಟು ಅಂಕೆಯಲ್ಲಿದೆ ಎನ್ನುತ್ತವೆ ಮೂಲಗಳು.

  ಇಷ್ಟಕ್ಕೂ ರೆಹಮಾನ್ ಸಂಭಾವನೆ ಎಷ್ಟು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ, ಅಂದಾಜು ರು.1.50 ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.ತಮಿಳು ಚಿತ್ರವೊಂದಕ್ಕೆ ತೆಗೆದುಕೊಳ್ಳುವ ಸಂಭಾವನೆಯಲ್ಲಿ ಅರ್ಧದಷ್ಟನ್ನು ಅವರು ಕನ್ನಡದಲ್ಲಿ ತೆಗೆದುಕೊಂಡಿದ್ದಾರಂತೆ. ಚಿತ್ರದಲ್ಲಿ ಒಟ್ಟು ಹಾಡುಗಳಿದ್ದು ಎಲ್ಲವನ್ನೂ ಹೊಸದಾಗಿ ಸಂಯೋಜಿಸುತ್ತಿರುವುದು ವಿಶೇಷ.

  ತಮಿಳಿನ ಯಶಸ್ವಿ ಚಿತ್ರ ವರಲಾರು ರೀಮೇಕ್ ಚಿತ್ರ ಇದಾಗಿದೆ. ಅದೇ ಚಿತ್ರದ ಹಾಡುಗಳಿಗೆ ಬದಲಾಗಿ ಹೊಸ ಸಂಗೀತವನ್ನು ಇಲ್ಲಿ ರೆಹಮಾನ್ ನೀಡಲಿದ್ದಾರೆ. ಚಿತ್ರದ ಹಾಡುಗಳನ್ನು ಉಪೇಂದ್ರ ಹಾಗೂ ಯೋಗರಾಜ್ ಭಟ್ ಹೆಣೆಯುತ್ತಿದ್ದು, ಆಡಿಯೋ ಬಿಡುಗಡೆಗೆ ರೆಹಮಾನ್ ಅವರನ್ನು ಕರೆಸಲು ಉದ್ದೇಶಿಸಲಾಗಿದೆ ಎಂದು ಕೆ ಮಂಜು ತಿಳಿಸಿದ್ದಾರೆ.

  ಹಿಂದಿಯ ವಾಂಟೆಡ್, ಮಿಲೇಂಗೆ ಮಿಲೇಂಗೆ ಹಾಗೂ ತೇರೆ ಸಂಗ್ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಸೇತು ಶ್ರೀರಾಮ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ನಲವತ್ತು ಪುಟಗಳ ಸುದೀರ್ಘ ಒಪ್ಪಂದ ಪತ್ರಕ್ಕೆ ರೆಹಮಾನ್ ಚಿತ್ರದ ಮುಹೂರ್ತಕ್ಕೂ ಮುನ್ನ ಸಹಿಹಾಕಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಸೌಂದರ್ಯ ಜಯಮಾಲಾ ಆಯ್ಕೆ ಖಚಿತವಾಗಿದೆ. ಸಿಮ್ರಾನ್ ಹಾಗೂ ಭೂಮಿಕಾ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.

  English summary
  Sources revealed that Oscar Award winner music composer AR Rahman remuneration is said to be only half of what the maestro charges for a Tamil film. The remuneration is Rs 1.5 crore, Rahman and the producer K Manju was signed just 15 days before the muharat of the film Godfather last week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X