»   » ಸೆರೆಮನೆ ಹಕ್ಕಿಗಳ ಜತೆ ಹಾಡುಹಕ್ಕಿ ರಘು ದೀಕ್ಷಿತ್

ಸೆರೆಮನೆ ಹಕ್ಕಿಗಳ ಜತೆ ಹಾಡುಹಕ್ಕಿ ರಘು ದೀಕ್ಷಿತ್

Subscribe to Filmibeat Kannada

'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಎನ್ನುವ ಜನಪ್ರಿಯ ಹಾಡಿನ ಮೂಲಕ ಮನೆಮಾತಾಗಿರುವ ರಘು ದೀಕ್ಷಿತ್ ತನ್ನ 36ನೇ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು. ಗುರುವಾರ (ನ.12) ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಹಬ್ಬದ ವಾತಾವರಣ.

ಜೈಲಿನ ಮೈದಾನದಲ್ಲಿ ರಘು ಸಂತ ಶಿಶುನಾಳ ಷರೀಫರ ಹಾಡನ್ನು ತನ್ನದೇ ವಿಶಿಷ್ಟ ರಾಕ್ ಮ್ಯೂಸಿಕ್ ಶೈಲಿಯಲ್ಲಿ ಹಾಡುತ್ತಿದ್ದರೆ ಖೈದಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕನ್ನಡ ಹಾಡುಗಳನ್ನು ರಾಕ್ ಮ್ಯೂಸಿಕ್ ಶೈಲಿಯಲ್ಲಿ ಕೊಂಡುಹೋದ ರಘು ದೀಕ್ಷಿತ್ ತನ್ನ ಹುಟ್ಟಿದ ಹಬ್ಬವನ್ನು ಜೈಲಿನ ಹಕ್ಕಿಗಳೊಂದಿಗೆ ವಿಭಿನ್ನವಾಗಿ ಆಚರಿಸಿಕೊಂಡರು.

ಕಬ್ಬನ್ ಪಾರ್ಕ್ ಮುಂತಾದ ಕಡೆ ಉತ್ತಮ ಕಲಾವಿದರಿಗೆ ವೇದಿಕೆ ಒದಗಿಸಿಕೊಂಡು ಬರುತ್ತಿರುವ ಪ್ರಕೃತಿ ಸ್ವಯಂ ಸೇವಾ ಸಂಸ್ಥೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ವೇದಿಕೆ ಆಯೋಜಿಸಿತ್ತು. ರಘು ತನ್ನ ತಂಡದ ಸದಸ್ಯರೊಂದಿಗೆ ಸುಮಾರು ಒಂದುವರೆ ಗಂಟೆಗಳ ಕಾಲ ವಿವಿಧ ಶೈಲಿಯ ಹಾಡುಗಳನ್ನು ಹಾಡಿ ಖೈದಿಗಳನ್ನು ರಂಜಿಸಿದರು. ಹಾಡು ಹಕ್ಕಿ ರಘು ದೀಕ್ಷಿತ್ ಶೈಲಿಗೆ ಜೈಲು ಹಕ್ಕಿಗಳು ತಲೆ ತೂಗಿದವು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada