For Quick Alerts
  ALLOW NOTIFICATIONS  
  For Daily Alerts

  ಪಾಕ್ ನಲ್ಲೂ ನನಗೆ ಅಭಿಮಾನಿಗಳಿದ್ದಾರೆ; ರೆಹಮಾನ್

  By Rajendra
  |

  ಜನಪ್ರಿಯ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರಂತೆ. ಪಾಕಿಸ್ತ್ತಾನ ಮತ್ತು ಭಾರತ ನಡುವೆ ಶಾಂತಿ ನೆಲೆಸುವಂತೆ ಮಾಡುವ ಶಕ್ತಿ ಸಂಗೀತಕ್ಕಿದೆಯೇ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ರೆಹಮಾನ್ ಉತ್ತರಿಸುತ್ತಾ ಮಂಗಳವಾರ ಲಂಡನ್ ನಲ್ಲಿ ಹೀಗೆ ಹೇಳಿದರು.

  ನುಸ್ರತ್ ಫತೆ ಆಲಿ ಖಾನ್ ರಂತಹ ಸಾಕಷ್ಟು ಪಾಕಿಸ್ತಾನಿ ಸಂಗೀತಗಾರರು ಭಾರತಕ್ಕೆ ಬಂದಿದ್ದಾರೆ. ನನ್ನ ಸಂಗೀತ ಪಾಕಿಸ್ತಾನದ ಬಹಳಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ನ್ಯೂಯಾರ್ಕ್ ನ ನನ್ನ ಪ್ರದರ್ಶನಕ್ಕೆ ಬಹಳಷ್ಟು ಪಾಕಿಸ್ತಾನಿಯರು ಆಗಮಿಸಿದ್ದರು. ನಾನೊಬ್ಬ ಸಂಗೀತಗಾರ, ಶಾಂತಿ ನೆಲೆಸುವಂತೆ ಮಾಡುವುದೇ ನನ್ನ ಕಾಯಕ ಎಂದು ರೆಹಮಾನ್ ಹೇಳಿದ್ದಾರೆ.

  ರಾಜಕೀಯ ಎಂದರೆ ಸಿನಿಮಾ ಮಂದಿ ಸ್ವರ್ಗವೆಂದೆ ಭಾವಿಸುತ್ತಾರೆ. ಆದರೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮಾತ್ರ ಇದೊಂದು ನರಕ. ನಾನು ಇದರಿಂದ ದೂರವಿರುತ್ತೇನೆ ಎನ್ನುತ್ತಾರೆ. ರಾಜಕೀಯ ಎಂದರೇನೆ ನರಕ. ಅಲ್ಲಿ ಕ್ರಿಯಾಶೀಲತೆ ಎಂಬುದು ಶೂನ್ಯ, ಅದು ಇನ್ನೊಂದು ನರಕವಿದ್ದಂತೆ ಎಂದಿದ್ದಾರೆ.

  "Jai Ho Concert: The Journey Home World Tour" ಎಂಬ ಕಾರ್ಯಕ್ರಮದಲ್ಲಿ ಭಾವಹಿಸುವ ಸಲುವಾಗಿ ಅವರು ಲಂಡನ್ ಗೆ ಆಗಮಿಸಿದ್ದಾರೆ. ನನ್ನ 18 ವರ್ಷಗಳ ವೃತ್ತಿ ಜೀವನದಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮ. ಪಾಶ್ಚಾತ್ಯ ಮತ್ತು ಪೌರ್ವಾತ್ಯ ಸಂಗೀತಗಳ ಸಂಗಮವಿದ್ದಂತೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X