»   » ತೆಲುಗಿನಲ್ಲಿ ವಿ ಹರಿಕೃಷ್ಣ ಗಾನಾ ಬಜಾನಾ

ತೆಲುಗಿನಲ್ಲಿ ವಿ ಹರಿಕೃಷ್ಣ ಗಾನಾ ಬಜಾನಾ

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ತೆಲುಗು ಚಿತ್ರರಂಗಕ್ಕೆ ಜಂಪ್ ಆಗಿದ್ದಾರೆ! 'ಚಾಲಾಕಿ' ಎಂಬ ತೆಲುಗು ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುವುದರಲ್ಲಿ ಸದ್ಯಕ್ಕೆ ಹರಿಕೃಷ್ಣ ಬ್ಯುಸಿ ಬ್ಯುಸಿ. ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರದ ನಿರ್ದೇಶಕ ಮಾದೇಶ್ 'ಚಾಲಾಕಿ' ಚಿತ್ರದ ನಿರ್ದೇಶಕರು.

'ರಾಮ್' ಚಿತ್ರಕ್ಕೆ ಹರಿಕೃಷ್ಣ ಅವರೇ ಸಂಗೀತ ಸಂಯೋಜಿಸಿದ್ದರು. ಒಂದೇ ವರ್ಷದಲ್ಲಿ ಹತ್ತು ಚಿತ್ರಗಳಿಗೆ ಸಂಗೀತ ನೀಡುವುದರ ಜೊತೆಗೆ ರೀರೆಕಾರ್ಡಿಂಗ್ ಮಾಡಿದ ಹೆಚ್ಚುಗಾರಿಕೆ ಹರಿಕೃಷ್ಣ ಅವರದು. ಇಷ್ಟೆಲ್ಲಾ ಮಾಡಿದರೂ ಅವರ ಬೇಡಿಕೆ ಮಾತ್ರ ಕನ್ನಡದಲ್ಲಿ ಹುಲ್ಲು ಕಡ್ಡಿಯಷ್ಟು ಕಡಿಮೆಯಾಗಲಿಲ್ಲ; ಅಷ್ಟರ ಮಟ್ಟಿಗೆ ಮೆಲೋಡಿಯನ್ನು ಕಾಪಾಡಿಕೊಂಡು ಬಂದಿದ್ದರು ಹರಿಕೃಷ್ಣ.

ಹರಿಕೃಷ್ಣ ಸಂಗೀತ ನಿರ್ದೇಶನದ 'ಪೊರ್ಕಿ' ಮತ್ತು 'ಚೆಲುವೆಯೇ ನಿನ್ನೇ ನೋಡಲು' ಚಿತ್ರಗಳು ತೆರೆಕಾಣಬೇಕಾಗಿವೆ. ಕಳೆದ ವರ್ಷ ಹರಿಕೃಷ್ಣ ಸಂಗೀತ ನೀಡಿದ್ದ ಅಂಬಾರಿ, ರಾಜ್ ದ ಶೋ ಮ್ಯಾನ್, ಜಂಗ್ಲಿ, ಮಳೆಯಲಿ ಜೊತೆಯಲಿ ಚಿತ್ರಗಳು ಸಂಗೀತದಲ್ಲಿ ಗೆದ್ದಿದ್ದವು.

ಕ್ರೇಜಿಸ್ಟಾರ್ ವಿ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ಗರಡಿಯಲ್ಲಿ ಹರಿಕೃಷ್ಣ ಪಳಗಿದವರು. ಕನ್ನಡ ಚಿತ್ರರಂಗದಲ್ಲಿ ಸಂಗೀತದ ಹೊಸ ಅಲೆ ಎಬ್ಬಿಸಿದ ಖ್ಯಾತಿ ಹರಿಕೃಷ್ಣ ಅವರದು. ಜೊತೆ ಜೊತೆಯಲಿ ಚಿತ್ರದ ಮೂಲಕ ಮನಮುಟ್ಟುವ, ಹೃದಯ ತಟ್ಟುವ ಹಾಡುಗಳನ್ನು ಕೊಟ್ಟವರು. ತೆಲುಗು ಚಿತ್ರರಂಗಲ್ಲೂ ಹರಿಕೃಷ್ಣ ಹೊಸ ವರಸೆ ನೀಡಲಿ ಎಂದು ಆಶಿಸೋಣ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada