»   »  ಸಂಗೀತ ನಿರ್ದೇಶಕ ಹರಿಕೃಷ್ಣಗೆ ಆರ್ ಎನ್ ಜೆ ಪ್ರಶಸ್ತಿ

ಸಂಗೀತ ನಿರ್ದೇಶಕ ಹರಿಕೃಷ್ಣಗೆ ಆರ್ ಎನ್ ಜೆ ಪ್ರಶಸ್ತಿ

Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಗೀತ ಸಾಹಿತಿ, ಸಂಗೀತ ನಿರ್ದೇಶಕ ದಿವಂಗತ ಆರ್ ಎನ್ ಜಯಗೋಪಾಲ್ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷದಿಂದಲೇ ಈ ಪ್ರಶಸ್ತಿಯನ್ನು ಗೀತ ಸಾಹಿತಿಗಳು ಮತ್ತು ಸಂಗೀತ ನಿರ್ದೇಶಕರಿಗೆ ನೀಡಿ ಗೌರವಿಸಲಾಗುತ್ತಿದೆ.

ಚೊಚ್ಚಲ ಪ್ರಶಸ್ತಿ ಜನಪ್ರಿಯ ಗೀತ ಸಾಹಿತಿಗಳಾದ ಸಿವಿ ಶಿವಶಂಕರ್, ಕವಿರಾಜ್ ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರನ್ನು ವರಿಸಿದೆ. ಇಬ್ಬರು ಗೀತಸಾಹಿತಿಗಳು ಮತ್ತು ಒಬ್ಬ ಸಂಗೀತ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನು ನೀಡುವ ಮೂಲಕ ಆರ್ ಎನ್ ಜಯಗೋಪಾಲ್ ಅವರ ಅಪೂರ್ಣಕನಸುಗಳನ್ನು ಆರ್ ಎನ್ ಜೆ ಪ್ರೊಡಕ್ಷನ್ಸ್ ನೆರವೇರಿಸಿದಂತಾಗಿದೆ.

ಪ್ರಶಸ್ತಿಯನ್ನು ಜುಲೈ 16, 2009ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ಸಿನಿಮಾ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ ರಮ್ಯ ಸಾಂಸ್ಕೃತಿಕ ತಂಡದಿಂದಆರ್ ಎನ್ ಜೆ ಅವರ ಜನಪ್ರಿಯ ಗೀತೆಗಳ ಗಾಯನವನ್ನು ಏರ್ಪಡಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada