For Quick Alerts
  ALLOW NOTIFICATIONS  
  For Daily Alerts

  ಎ ಆರ್ ರೆಹಮಾನ್ ಆಸ್ಕರ್ ಪಾರಿತೋಷಕಗಳು ಎಲ್ಲಿ?

  By Rajendra
  |

  "ನನ್ನ ಆಸ್ಕರ್ ಪಾರಿತೋಷಕಗಳು ಎಲ್ಲಿ ಇವೆಯೋ ನನಗೇ ಗೊತ್ತಿಲ್ಲ" ಎಂದು ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಹೇಳಿ ಅಭಿಮಾನಿ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. 'ಸ್ಲಂಡಾಗ್ ಮಿಲಿಯನೇರ್' ಚಿತ್ರಕ್ಕಾಗಿ 2009ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಮತ್ತು "ಜೈ ಹೋ..." ಅತ್ಯುತ್ತಮ ಗೀತರಚನೆಕಾರ ಎರಡು ಆಸ್ಕರ್ ಪ್ರಶಸ್ತಿಗಳು ರೆಹಮಾನ್‌ಗೆ ಒಲಿದಿದ್ದವು.

  ಪ್ರಸ್ತುತ ಡ್ಯಾನಿ ಬಾಯ್ಲ್ ಜೊತೆ ಕೈಜೋಡಿಸಿ '127 hours' ಎಂಬ ಚಿತ್ರವನ್ನು ರೆಹಮಾನ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಮಾತನಾಡುತ್ತಾ, ತಮ್ಮ ಆಸ್ಕರ್ ಪಾರಿತೋಷಕಗಳ ಬಗ್ಗೆ ಪ್ರಸ್ತಾಪಿಸಿದರು. ಅವುಗಳನ್ನು ಎಲ್ಲಿ ಇಡಲಾಗಿದೆಯೋ ನನಗೇ ಗೊತ್ತಿಲ್ಲ ಎಂದು ಹೇಳಿ ಅಭಿಮಾನಿಗಳನ್ನು ಕ್ಷಣ ಕಾಲ ತಬ್ಬಿಬ್ಬುಗೊಳಿಸಿದರು.

  ಬಳಿಕ ಮುಗುಳ್ನಗುತ್ತಾ, ನನ್ನ ತಾಯಿ ಅವುಗಳನ್ನು ಬಚ್ಚಿಟ್ಟಿದ್ದಾರೆ! ಏಕೆಂದರೆ ಮನೆಗೆ ಬಂದ ಪ್ರತಿಯೊಬ್ಬರು ಅವುಗಳ ಫೋಟೋ ತೆಗೆಯುತ್ತಿದ್ದರು. ಹಾಗಾಗಿ ಅಮ್ಮ ಅವುಗಳನ್ನು ಸೂಟ್‌ಕೇಸ್ ಒಂದರಲ್ಲಿ ಹಾಕಿ ಎಲ್ಲಿಯೋ ಬಚ್ಚಿಟ್ಟಿದ್ದಾರೆ. ಅವುಗಳನ್ನು ಎಲ್ಲಿಟ್ಟಿದ್ದಾರೆ ಎಂಬುದು ನಿಜವಾಗಿಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

  English summary
  Music maestro AR Rahman reveals that he doesn"t know whereabouts of his Oscar trophies! He won two Oscars for Slumdog Millionaire in 2009 for Best score and Best song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X