»   »  ಗಾಯಕಿ ಎಸ್ ಜಾನಕಿಗೆ ಗೌರವ ಡಾಕ್ಟರೇಟ್?

ಗಾಯಕಿ ಎಸ್ ಜಾನಕಿಗೆ ಗೌರವ ಡಾಕ್ಟರೇಟ್?

Subscribe to Filmibeat Kannada
Mysore varsity doctorate to S Janaki?
ಮೈಸೂರು ವಿಶ್ವವಿದ್ಯಾಲಯ 89ನೇ ವಾರ್ಷಿಕ ಘಟಿಕೋತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಸೇರಿದಂತೆ ಹಲವಾರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣ, ವಿಶ್ರಾಂತ ಕುಲಪತಿ ಪ್ರೊ.ಷೇಕ್ ಅಲಿ, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಪರಿಷತ್ ಸದಸ್ಯ ಡಾ.ಜಿ.ಕೆ.ಛಡ್ಡಾ ಹಾಗೂ ಅನ್ವಯಿಕ ಭೌತಶಾಸ್ತ್ರ ವಿಜ್ಞಾನಿ ಡಾ.ಆರ್.ಕೆ.ಸಿನ್ಹಾ, ಅವರ ಹೆಸರುಗಳು ಸಭೆಯಲ್ಲಿ ಚರ್ಚೆಯಾದವು.

ಮೈಸೂರು ವಿವಿ ಮಾ.7ರಂದು ಘಟಿಕೋತ್ಸವ ನಡೆಸಲು ತೀರ್ಮಾನಿಸಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷ ಸುಖದೇವ್ ಥೋರಟ್ ಅವರನ್ನು ಘಟಿಕೋತ್ಸವಕ್ಕೆ ಆಹ್ವಾನಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಯಿತು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada