»   » ತಿಪಟೂರಿನಲ್ಲಿ 'ಒಲವೇ ವಿಸ್ಮಯ' ಧ್ವನಿಸುರುಳಿ

ತಿಪಟೂರಿನಲ್ಲಿ 'ಒಲವೇ ವಿಸ್ಮಯ' ಧ್ವನಿಸುರುಳಿ

Posted By:
Subscribe to Filmibeat Kannada

ತೆಂಗಿನ ನಾಡು ತಿಪಟೂರಿನಲ್ಲಿ 'ಒಲವೇ ವಿಸ್ಮಯ' ಸಿಡಿ ಮತ್ತು ಧ್ವನಿಸುರುಳಿಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳನ್ನು ಬಿಡುಗಡೆ ಮಾಡಿದರು. ಚಿತ್ರದ ನಿರ್ಮಾಪಕ ಲಿಂಗರಾಜು ಅವರ ಹುಟ್ಟೂರು ತಿಪಟೂರು. ಹಾಗಾಗಿ ಧ್ವನಿಸುರುಳಿ ಮತ್ತು ಸಿಡಿಗಳನ್ನು ಅಲ್ಲೇ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ನಿರ್ದೇಶಕ ನಾಗೇಶ್ ಕುಮಾರ್ ಹೇಳಿದ ಕತೆ ಲಿಂಗರಾಜು ಅವರಿಗೆ ಹಿಡಿಸಿತಂತೆ. ಚಿತ್ರಕತೆ ಪ್ರೆಶ್ ಆಗಿದ್ದ ಕಾರಣ 'ಒಲವೇ ವಿಸ್ಮಯ' ಮಾಡಿದ್ದಾಗಿ ಲಿಂಗರಾಜು ಹೇಳಿದ್ದಾರೆ. ಧ್ವನಿಸುರುಳಿ ಬಿಡುಗಡೆಯಾದ ದಿನವೇ ತಿಪಟೂರಿನಲ್ಲಿ 5000 ಸಿಡಿಗಳು ಮತ್ತು 1000 ಧ್ವನಿಸುರುಳಿಗಳು ಮಾರಟವಾಗಿದ್ದಾಗಿ ನಿರ್ದೇಶಕ ನಾಗೇಶ್ ಕುಮಾರ್ ತಿಳಿಸಿದ್ದಾರೆ.

ವಿಭಿನ್ನವಾಗಿರುವ 'ಒಲವೇ ವಿಸ್ಮಯ' ಬಾಕ್ಸಾಫೀಸ್ ನಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ನಿರ್ದೇಶಕರು ವಕ್ತಪಡಿಸಿದ್ದಾರೆ. ತಮ್ಮ ಹಿಂದಿನ ಚಿತ್ರಗಳಿಗಿಂತ 'ಒಲವೇ ವಿಸ್ಮಯ' ಚಿತ್ರದ ಸಂಗೀತ ವಿಭಿನ್ನವಾಗಿದೆ ಎಂದು ಸಂಗೀತ ನಿರ್ದೇಶಕ ವೀರ ಸಮರ್ಥ ಹೇಳಿದ್ದಾರೆ.

ನಾಯಕ ನಟನಾಗಿ ಧರ್ಮ ಕೀರ್ತಿರಾಜ್ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಚಿತ್ರದ ನಾಯಕಿ ಪ್ರತಿಭಾ ರಾಣಿ ಸಹ ಒಲವೇ ವಿಸ್ಮಯ ಬಗ್ಗೆ ಮೆಚ್ಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ಪಾತ್ರದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾಗಿ ಪ್ರತಿಭಾ ರಾಣಿ ತಿಳಿಸಿದರು. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಮುಗಿದಿದ್ದು ಉಳಿದ ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada