»   » ಒಲವೆ ಜೀವನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ

Posted By: Staff
Subscribe to Filmibeat Kannada


1971ರಲ್ಲಿ ತೆರೆಕಂಡ ಘಟಾನುಘಟಿಗಳನ್ನು ಹೊಂದಿದ್ದ ಈ ಚಿತ್ರ, ಬಾಕ್ಸಾಫೀಸಲ್ಲಿ ಗೆಲ್ಲಲಿಲ್ಲ. ಆದರೆ ಇಂದಿಗೂ ಪ್ರೇಕ್ಷಕರ ಮನದಲ್ಲಿ ಸದಾ ಅಚ್ಚಹಸಿರು. ಡಾ.ರಾಜ್ ಕುಮಾರ್, ಜಮುನಾ, ಪೃಥ್ವಿರಾಜ್ ಕಪೂರ್, ಆರ್.ನಾಗೇಂದ್ರರಾವ್ ತಾರಾಗಣದ ಈ ಚಿತ್ರದ ನಿರ್ದೇಶಕರು ;ಪುಟ್ಟಣ್ಣ ಕಣಗಾಲ್. ಚಿತ್ರದ ಹಾಡುಗಳು ಕಣಗಾಲ್ ಪ್ರಭಾಕರ ಶಾಸ್ತ್ರಿ ಸಾಹಿತ್ಯ, ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಎಂದೆಂದೂ ಘಮ್ಮೆನ್ನುತ್ತವೆ.

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ


ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದು೦ಭಿಯ ಹಾಡಿನ ಝೇ೦ಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತು೦ಬಿದೆ ಒಲವಿನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ವಸ೦ತ ಕೋಗಿಲೆ ಪ೦ಚ ಮನೋಹರ
ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ಒಲವಿನ ಪೂಜೆಗೆ ಒಲವೆ ಮ೦ದಾರ
ಒಲವೆ ಬದುಕಿನ ಬ೦ಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada