»   »  ಮಾರುಕಟ್ಟೆಗೆ ವಾಯುಪುತ್ರ ಧ್ವನಿಸುರುಳಿ

ಮಾರುಕಟ್ಟೆಗೆ ವಾಯುಪುತ್ರ ಧ್ವನಿಸುರುಳಿ

Subscribe to Filmibeat Kannada

'ವಾಯುಪುತ್ರ' ಧ್ವನಿಸುರುಳಿ ಮತ್ತು ಸಿಡಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ! ವಾಯುಪುತ್ರ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಸೋಮವಾರ(ಆ.17) ಸಂಜೆ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶಕ್ತಿ ಪ್ರಸಾದ್ ಮತ್ತು ಕಿಶೋರ್ ಸರ್ಜಾ ಅವರನ್ನು ಸ್ಮರಿಸಲಾಯಿತು. ಈ ಎರಡೂ ಕಾರ್ಯಕ್ರಮಗಳಿಗೆ ಕನ್ನಡ ಚಿತ್ರೋದ್ಯಮದ ಬಹುತೇಕರು ಆಗಮಿಸಿದ್ದು ವಿಶೇಷವಾಗಿತ್ತು.

ವಾಯುಪುತ್ರ ಧ್ವನಿಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು. ಧ್ವನಿಸುರುಳಿ ಮತ್ತು ಸಿಡಿಗಳನ್ನು ಆಕಾಶ್ ಆಡಿಯೋ ಹೊರತಂದಿದೆ. ಪುನೀತ್ ಮಾತನಾಡುತ್ತಾ, ನಾನು ಅರ್ಜುನ್ ಸರ್ಜಾ ಅವರ ಅಭಿಮಾನಿ. ಅವರ ಸಾಹಸ ಪ್ರಧಾನ ಚಿತ್ರಗಳೆಂದರೆ ನನಗೆ ಇಷ್ಟ. ಅವರ ಎಲ್ಲಾ ಚಿತ್ರಗಳನ್ನು ನೋಡಿರುವುದಾಗಿ ತಿಳಿಸಿದರು.

ಸುಂದರವಾದ ಸಂಜೆ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಅರ್ಜುನ್ ಸರ್ಜಾ ಅವರನ್ನು ನಟ ಸುದೀಪ್ ಅಭಿನಂದಿಸಿದರು. ವಾಯುಪುತ್ರದ ಚಿತ್ರದ ನಾಯಕ ನಟ ಚಿರಂಜೀವಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾಗೂ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಟಿ ಐಂದ್ರಿತಾ ರೇ ಮಾತನಾಡುತ್ತಾ, ಇದೊಂದು ಭಾವನಾತ್ಮಕ ಚಿತ್ರ. ಇಂತಹ ಅದ್ಭುತ ಚಿತ್ರವನ್ನು ಕೊಟ್ಟಂತಹ ನಿರ್ದೇಶಕ ಕಿಶೋರ್ ಸರ್ಜ ಇಂದು ನಮ್ಮೊಂದಿಗಿಲ್ಲದಿರುವುದು ನೋವಿನ ಸಂಗತಿ ಎಂದರು.

ಮಧು ಬಂಗಾರಪ್ಪ ಆಯೋಜಿಸಿದ್ದ ಸುಂದರ ಸಂಜೆ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್, ಸುದೀಪ್, ದ್ವಾರಕೀಶ್, ಶ್ರೀನಿವಾಸಮೂರ್ತಿ, ಜಯಂತಿ, ಸುಮಲತ ಅಂಬರೀಶ್, ಅಭಿಷೇಕ್ ಅಂಬರೀಶ್, ಹಂಸಲೇಖ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ಪ್ರೇಮಾ, ರಾಕ್ ಲೈನ್ ವೆಂಕಟೇಶ್, ಕೆ ಮಂಜು, ರಮೇಶ್ ಯಾದವ್, ಆದಿತ್ಯಾ, ಯೋಗರಾಜಭಟ್, ಸಾಧು ಕೋಕಿಲ, ರಾಜೇಶ್, ಯಶ್, ಧರ್ಮ ಕೀರ್ತಿರಾಜ್ ಮುಂತಾದವರು ಆಗಮಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada