For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 29ರಂದು ಕನ್ನಡವೇ ಸತ್ಯ, ಅಶ್ವತ್ಥ್ ನಿತ್ಯ

By Rajendra
|

ಸುಗಮ ಸಂಗೀತ ಕ್ಷೇತ್ರದ ಗಾರುಡಿಗ ಸಿ ಅಶ್ವತ್ಥ್ ಅವರ ಸವಿನೆನಪಿಗಾಗಿ ಅವರ ಜನ್ಮ ದಿನವಾದ ಡಿ.29ರಂದು "ಕನ್ನಡವೇ ಸತ್ಯ-ಅಶ್ವತ್ಥ್ ನಿತ್ಯ" ಎಂಬ ವಿನೂತನ ಕಾರ್ಯಕ್ರಮವನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಈ ಸುಗಮ ಸಂಗೀತ ಯಾತ್ರೆಯನ್ನು ಆದರ್ಶ ಸುಗಮ ಸಂಗೀತ ಟ್ರಸ್ಟ್ ನಡೆಸಿಕೊಡಲಿದೆ. ರಾಜ್ಯದ 30 ಜಿಲ್ಲೆಗಳ ಸುಮಾರು 3 ಸಾವಿರ ಗಾಯಕರು ಈ ಕಾರ್ಯಕ್ರಮದಲ್ಲಿ ಸಮೂಹ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ. ಇದೊಂದು ವಿಭಿನ್ನ ಕಾರ್ಯಕ್ರಮವಾಗಿದೆ ಎಂದು ಆದರ್ಶ ಸುಗಮ ಸಂಗೀತ ಟ್ರಸ್ಟ್ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಗೆ ಸಂಚರಿಸಿ 3 ಸಾವಿರ ಗಾಯಕ, ಗಾಯಕಿಯರಿಗೆ ತರಬೇತಿ ನೀಡಲಾಗಿದೆ. ಕೇವಲ ರಾಜ್ಯದವರಷ್ಟೇ ಅಲ್ಲದೆ ವಿದೇಶಗಳಿಂದಲೂ ಗಾಯಕ, ಗಾಯಕಿಯರು ಈ ಕಾರ್ಯಕ್ರಮದಲ್ಲಿ ಗಾನಸುಧೆಯನ್ನು ಪ್ರಸ್ತುತಪಡಿಸಲಿದ್ದಾರೆ.

ಮೂರು ಸಾವಿರ ಕಲಾವಿದರನ್ನು ಒಂದೇ ವೇದಿಕೆಗೆ ಆಹ್ವಾನಿಸಿ ಹಾಡಿಸಬೇಕು ಎಂಬುದು ಸಿ ಅಶ್ವತ್ಥ್ ಅವರ ಕನಸಾಗಿತ್ತು. ಅವರ ಹಠಾತ್ ನಿಧನದಿಂದ ಅವರ ಕನಸು ಈಡೇರಿರಲಿಲ್ಲ. ಈಗ ಅವರ ಪ್ರೀತಿಯ ಶಿಷ್ಯರೂ ಆಗಿರುವ ಕಿಕ್ಕೇರಿ ಕೃಷ್ಣಮೂರ್ತಿಗಳು ಆ ಕೆಲಸಕ್ಕೆ ಕೈಹಾಕುತ್ತಿದ್ದಾರೆ.

ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

ಡಿಸೆಂಬರ್ 29ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, ಡಾ.ಶಾಂತವೀರಸ್ವಾಮೀಜಿ, ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ, ಖ್ಯಾತ ಕವಿಗಳಾದ ಹೆಚ್ ಎಸ್ ವೆಂಕಟೇಶಮೂರ್ತಿ, ಲಕ್ಷ್ಮಿನಾರಾಯಣಭಟ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಪಾಸ್‍ಗಳ ಮೂಲಕ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಸುಮಾರು 25 ಸಾವಿರ ಪ್ರೇಕ್ಷಕರು ಈ ವಿಭಿನ್ನ ಕಾರ್ಯಕ್ರಮವನ್ನು ಸವಿಯಬಹುದು. ಹಲವರು ನೆರವಿನಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಸುಮಾರು ರು.80 ಲಕ್ಷ ವೆಚ್ಚ ಮಾಡಲಾಗಿದೆ.

ಉಚಿತ ಪಾಸ್‌ಗಳಿಗಾಗಿ ದೂರವಾಣಿ ಸಂಖ್ಯೆಗಳು ಹೀಗಿವೆ: 94480 00245, 99003 66711, 94482 38463, 98455 40487, 94480 46816, 94482 38461. ಪತ್ರಿಕಾಗೋಷ್ಠಿಯಲ್ಲಿ ಲಹರಿ ವೇಲು, ಗಾಯಕಿ ವೃಂದಾ ಎಸ್ ರಾವ್, ಸಂಗೀತಗಾರರಾದ ಎಂ ಎಸ್ ಪ್ರಸಾದ್, ಸುದರ್ಶನ್, ರಂಗ ಸಂಘಟಕ ಶ್ರೀನಿವಾಸ್ ಜಿ ಕಪ್ಪಣ್ಣ ಉಪಸ್ಥಿತರಿದ್ದರು. [ಸಿ ಅಶ್ವತ್ಥ್]

English summary
Kannadave Sathya-Ashwath Nithya concert to be held on 29th December at Basavanagudi National college stadium, Bangalore. About 3,000 singers to be participated in this mega event by Adarsha Sugama Sangeetha Trust. The programme starts at 5.30 pm, entry free.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more