»   » ಆಸ್ಕರ್ ರೇಸ್ ನಲ್ಲಿ ಸಂಗೀತ ನಿರ್ದೇಶಕ ರೆಹಮಾನ್

ಆಸ್ಕರ್ ರೇಸ್ ನಲ್ಲಿ ಸಂಗೀತ ನಿರ್ದೇಶಕ ರೆಹಮಾನ್

Posted By:
Subscribe to Filmibeat Kannada

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಈ ಸಲವೂ ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಸ್ಲಂಡಾಗ್ ಮಿಲಿಯನೇರ್' ಚಿತ್ರ ರೆಹಮಾನ್ ಅವರಿಗೆ ಎರಡು ಆಸ್ಕರ್ ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು.

ಎ ಆರ್ ರೆಹಮಾನ್ ಚೊಚ್ಚಲ ನಿರ್ದೇಶನದ ಹಾಲಿವುಡ್ ಚಿತ್ರ 'ಕಪಲ್ಸ್ ರಿಟ್ರೀಟ್'ನ ತಮಿಳು ಹಾಡು 'ನಾ ನಾ...' ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ತಮಿಳಿನ ಈ ಮೂಲ ಹಾಡಿಗೆ ರೆಹಮಾನ್ ಅವರ 6 ವರ್ಷದ ಮಗ ಇದೇ ಮೊದಲ ಬಾರಿಗೆ ಧ್ವನಿಗೂಡಿಸಿದ್ದಾರೆ.

ರೆಹಮಾನ್ ನ 'ನಾ ನಾ...' ಹಾಡಿನ ಜೊತೆ ಪ್ರಶಸ್ತಿಗಾಗಿ ಆಸ್ಕರ್ ನ ಮೂಲಗೀತೆ ವಿಭಾಗದಲ್ಲಿ 62 ಹಾಡುಗಳು ಸ್ಪರ್ಧೆಯಲ್ಲಿವೆ. ಸ್ವತಃ ಈ ಹಾಡನ್ನು ಬ್ಲೇಜ್ ಮತ್ತು ವಿವಿಯನ್ ಚೈಕ್ಸ್ ಅವರೊಂದಿಗೆ ರೆಹಮಾನ್ ರಚಿಸಿದ್ದಾರೆ. 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ 'ಜೈ ಹೋ...' ಮೂಲಗೀತೆಗೆ ಜೊತೆಗೆ ಅತ್ಯುತ್ತಮ ಸಂಗೀತ ಸಂಯೋಜನೆ ಪ್ರಶಸ್ತಿಯನ್ನ್ನು ರೆಹಮಾನ್ ಕಳೆದ ವರ್ಷ ಪಡೆದಿದ್ದರು.

Please Wait while comments are loading...