»   » ಜ.24ಕ್ಕೆ ಅಶ್ವತ್ಥ್ ಕನಸು ನನಸು ಸಂಗೀತೋತ್ಸವ

ಜ.24ಕ್ಕೆ ಅಶ್ವತ್ಥ್ ಕನಸು ನನಸು ಸಂಗೀತೋತ್ಸವ

Posted By:
Subscribe to Filmibeat Kannada
ಡಾ. ಸಿ. ಅಶ್ವತ್ಥ್ ಬಳಗ ಹಾಗೂ ನಿರ್ಮಾಣ್ ಶೆಲ್ಟರ್‍ಸ್ ಸಹಯೋಗದಲ್ಲಿ 'ಅಶ್ವತ್ಥ್ ಕನಸು-ನನಸು" ಸಂಗೀತೋತ್ಸವವನ್ನು ಜ.24ರಂದು ಆಯೋಜಿಸಲಾಗಿದೆ. ಹಿರಿಯ ಗಾಯಕ ಸಿ.ಅಶ್ವತ್ಥ್ ಅವರ 71ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಡಿ.27ರಿಂದ 29ರವರೆಗೆ ಮೂರು ದಿನಗಳ ಸಂಗೀತ ಉತ್ಸವ ಆಯೋಜಿಸಬೇಕೆಂಬುದು ಅಶ್ವತ್ಥ್ ಅವರ ಕನಸಾಗಿತ್ತು. ಆದರೆ, ವಿಧಿ ಇದಕ್ಕೆ ಅವಕಾಶನೀಡಲಿಲ್ಲ.

ಅವರ ಕನಸನ್ನು ಒಂದು ದಿನದ ಮಟ್ಟಿಗಾದರೂ ನನಸು ಮಾಡುವ ಉದ್ದೇಶದಿಂದ, ಅವರಕುಟುಂಬವರ್ಗ, ಶಿಷ್ಯಂದಿರು ಹಾಗೂ ಸ್ನೇಹಿತರು 'ಅಶ್ವತ್ಥ್ ಕನಸು-ನನಸು" ಸಂಗೀತ ಕಾರ್ಯಕ್ರಮವನ್ನು ಡಾ. ಸಿ. ಅಶ್ವತ್ಥ್ ಬಳಗದವತಿಯಿಂದ ಆಯೋ ಜಿಸಿದ್ದರು. ಅಂದೇ ಅಶ್ವತ್ಥ್ ವಿಧಿವಶರಾದ್ದ ರಿಂದ, ಈ ಕಾರ್ಯಕ್ರಮ ಜ.24ರಂದು ಆಯೋಜಿಸಿ, ಸಂಗೀತ ಗೌರವ
ಸಲ್ಲಿಸಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ, ಆದರ್ಶ ಸಂಗೀತ ಅಕಾಡೆಮಿ ಕಲಾವಿದರು ಹಾಗೂ ಖ್ಯಾತಗಾಯಕರು ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಹಾಡುಗಳನ್ನು ಹಾಡಲಿದ್ದಾರೆ. ಅಶ್ವತ್ಥ್-70 ಗೌರವ ಗ್ರಂಥ, ಅವರ ಹಾಡುಗಳನ್ನು ಆಧಿರಿಸಿ ಋತು ಕಾವ್ಯ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.

ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯ ರಾಮರಾಜೇ ಅರಸ್, ಸಾಹಿತಿಗಳಾದ ವೆಂಕಟೇಶಮೂರ್ತಿ,
ಡಾ. ನರಹಳ್ಳಿ ಬಾಲ ಸುಬ್ರಹ್ಮಣ್ಯ, ಬಿ.ಆರ್. ಲಕ್ಷ್ಮಣ ರಾವ್,ಎಂ.ಎನ್. ವ್ಯಾಸರಾವ್,ಶ್ರೀನಿವಾಸ ಜಿ. ಕಪ್ಪಣ್ಣ, ವೇಮಗಲ್ ನಾರಾಯಣ ಸ್ವಾಮಿ, ಲಹರಿ ವೇಲು ಹಾಗೂ ನಿರ್ಮಾಣ್ ಶೆಲ್ಟರ್‍ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿ. ಲಕ್ಷ್ಮೀನಾರಾಯಣ ಪಾಲ್ಗೊಳ್ಳಲಿದ್ದಾರೆ. (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada