»   »  ಹಳೆ ಕನ್ನಡ ಚಿತ್ರಗೀತೆ ಸಂಗೀತ ಕಾರಂಜಿ

ಹಳೆ ಕನ್ನಡ ಚಿತ್ರಗೀತೆ ಸಂಗೀತ ಕಾರಂಜಿ

Subscribe to Filmibeat Kannada
ಕನ್ನಡ ಬೆಳ್ಳಿತೆರೆಯ ಕಪ್ಪು ಬಿಳುಪು ಚಿತ್ರಗಳಿಂದ ಆಯ್ದ ಸುಮಧುರ ಗೀತೆಗಳನ್ನು ಕೇಳಬೇಕೆ? ನಿಮ್ಮ ನೆಚ್ಚಿನ ಹಳೆಯ ಕನ್ನಡ ಚಿತ್ರಗೀತೆಗಳ ಸಂಗೀತ ಕಾರಂಜಿ 'ಮಧುರ ಮಧುರವೀ ಮಂಜುಳಗಾನ' ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದೆ ಪ್ರಸಾರ ಭಾರತಿ, ದೂರದರ್ಶನ ಕೇಂದ್ರ, ಬೆಂಗಳೂರು.

ಯಶವಂತ ಹಳಿಬಂಡಿ, ಮಂಜುಳಾ ಪರಮೇಶ್, ಚಂದ್ರಿಕಾ ಗುರುರಾಜ್, ಎಸ್.ಹೆಚ್.ಹರ್ಷ, ಬಿ.ವಿ.ಮೋಹನ್, ಗುರುರಾಜ್, ಮಹೇಶ್ ಜೋಷಿ, ಟಿ.ರಾಜಾರಾಂ, ರಾಮಮೂರ್ತಿ, ಎಂ.ಮುನಿರಾಜು,ಹೆಚ್.ಪಿ.ಭರತೀಶ್, ಜಯಸಿಂಹ, ಬಾಣಾವರ ಮಂಜುನಾಥ್, ಶಶಿಕಲಾ ಪ್ರಸಾದ್, ಕುಶಾಲ, ಕೆ.ಎಸ್.ಚೈತ್ರ, ಆಕಾಂಕ್ಷಾ ಬಾದಾಮಿ ಮುಂತಾದ ಗಾಯಕರು ಸುಮಧುರ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ.

'ಮಧುರ ಮಧುರವೀ ಮಂಜುಳಗಾನ' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಾಹಿತಿಗಳು ಡಾ.ದೊಡ್ಡರಂಗೇಗೌಡ ಆಗಮಿಸಲಿದ್ದಾರೆ. ರಾಜನ್ (ಖ್ಯಾತ ರಾಜನ್ ನಾಗೇಂದ್ರ ಜೋಡಿ), ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್; ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ(ರವಿ); ಚಲನಚಿತ್ರ ವಿತರಕ ಗಣೇಶ್ ಕಾಸರಗೋಡು ಕಾರ್ಯಕ್ರಮದ ವಿಶೇಷ ಆಹ್ವಾನಿತರು.

ಈ ಕಾರ್ಯಕ್ರಮ ದೂರದರ್ಶನ ಪ್ರಾದೇಶಿಕ ಜಾಲ ಹಾಗೂ ಚಂದನವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಸುಮಾರು 52 ವಿದೇಶಗಳಲ್ಲಿಯೂ ಏಕಕಾಲದಲ್ಲಿ ಪ್ರಸಾರವಾಗುತ್ತದೆ. ಮೊದಲ ಬಂದವರಿಗೆ ಮೊದಲ ಆದ್ಯತೆ.

ಸ್ಥಳ:ಕುವೆಂಪು ಕಲಾಕ್ಷೇತ್ರ, ವಿಶ್ವೇಶ್ವರಪುರಂ, ಕೃಷ್ಣರಾಜ ರಸ್ತೆ, ಬೆಂಗಳೂರು-560 004.

ಸಮಯ: ಸಂಜೆ 4.00 ಗಂಟೆ

ದಿನಾಂಕ: ಭಾನುವಾರ 22 ನೇ ಫೆಬ್ರವರಿ 2009.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada