»   »  'ದಿಲ್ದಾರ' ಧ್ವನಿಸುರುಳಿ ಮಾರುಕಟ್ಟೆಗೆ

'ದಿಲ್ದಾರ' ಧ್ವನಿಸುರುಳಿ ಮಾರುಕಟ್ಟೆಗೆ

Posted By:
Subscribe to Filmibeat Kannada

ಜನಪ್ರಿಯ ಗಾಯಕ ಮತ್ತು ಸಂಗೀತಗಾರ ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶನದ ಚೊಚ್ಚಲ ಚಿತ್ರ 'ದಿಲ್ದಾರ'. ಈ ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳನ್ನು ಸಂಗೀತ ನಿರ್ದೇಶಕ ವಿ ಮನೋಹರ್ ಬುಧವಾರ(ಅ.21) ಬಿಡುಗಡೆ ಮಾಡಿದರು. ಅಮರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಿತ್ರದ ನಾಯಕ ನಟನೂ ಆಗಿರುವ ಅಮನ್ ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ರೇಷ್ಮಾ ಚೆಂಗಪ್ಪ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.

ಬಾನುಲಿಯಲ್ಲಿ ಚಿತ್ರಗೀತೆಗಳನ್ನು ಪ್ರಸಾರ ಮಾಡುವಾಗ ಸಂಗೀತ ನಿರ್ದೇಶಕ, ಗೀತಸಾಹಿತಿ, ಗಾಯಕ ಮತ್ತು ಚಿತ್ರದ ಹೆಸರನ್ನು ದಯವಿಟ್ಟು ಪ್ರಕಟಿಸಿ ಎಂದು ವಿ ಮನೋಹರ್ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು. ಪ್ರವೀಣ್ ಡಿ ರಾವ್ ಅವರು ಸರಳ ಮತ್ತು ಸುಮಧುರ ಸಂಗೀತಕ್ಕೆ ಹೆಸರಾದವರು. ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಮನೋಹರ್ ಹೇಳಿದರು.

ದಿಲ್ದಾರ ಚಿತ್ರದ ನಿರ್ದೇಶಕ ಅಮರ್ ಅವರು ಬಂಗಾರಪೇಟೆ ಮೂಲದವರು. ಪ್ರೇಕ್ಷಕರು ಏನು ಬಯಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಚಿತ್ರಕತೆಯನ್ನು ರಚಿಸಿರುವುದಾಗಿ ಎಂದು ಅವರು ತಿಳಿಸಿದರು. ಪ್ರವೀಣ್ ಡಿ ರಾವ್ ಸಂಯೋಜಿಸಿದ ಒಟ್ಟು 18 ಟ್ಯೂನ್ ಗಳಲ್ಲಿ ಐದನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅಮರ್ ವಿವರ ನೀಡಿದರು.

ಚಿತ್ರದ ನಾಯಕ ನಟರೂ ಆಗಿರುವ ಅಮನ್ ಇದೇ ಮೊದಲ ಬಾರಿಗೆ ದಿಲ್ದಾರ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿನ ಐದು ಹಾಡುಗಳನ್ನು ಸ್ನೇಹರಾಜ್ ಪ್ರವೀಣ್, ಪುನೀತ್ ಆರ್ಯ, ಮೈಕೊ ನಾಗರಾಜ್, ಅಜಯ್ ವಾರಿಯರ್ ಸುಶ್ರಾವ್ಯವಾಗಿ ಹಾಡಿದ್ದಾರೆ ಎಂದು ಲಹರಿ ವೇಲು ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada