»   » ಸಮಾಜ ಸುಧಾರಕನಾಗಿ ಅಯ್ಯಂಗಾರ್ ಐಪಿಎಸ್

ಸಮಾಜ ಸುಧಾರಕನಾಗಿ ಅಯ್ಯಂಗಾರ್ ಐಪಿಎಸ್

Subscribe to Filmibeat Kannada
Iyengar IPS, Movie still
ಸಾಧಾರಣವಾಗಿ ಅಯ್ಯಂಗಾರಿ ಸಮುದಾಯ ಎಂದ ಕೂಡಲೆ ಪುಳಿಯೋಗರೆ ಮತ್ತು ಸಕ್ಕರೆ ಪೊಂಗಲ್ ತಟ್ಟನೆ ನೆನಪಾಗುತ್ತವೆ. ಆದರೆ ಇಲ್ಲೊಬ್ಬ ಅಯ್ಯಂಗಾರರು ಅಸ್ಪೃಶ್ಯತೆ, ಜಾತಿ ಪದ್ಧತಿಯಂತಹ ಸಾಮಾಜಿಕ ದುಷ್ಟ ಪದ್ದ್ಧತಿಗಳನ್ನು ನಿವಾರಿಸಲು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಐಪಿಎಸ್ ಅಧಿಕಾರಿಯಾಗಿ ಬರುತ್ತಿದ್ದಾರೆ. 'ಅಯ್ಯಂಗಾರ್ ಐಪಿಎಸ್' ಚಿತ್ರದ ಧ್ವನಿಸುರುಳಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಮಾಜಿ ಕೌನ್ಸಿಲರ್ ಎಚ್.ರವೀಂದ್ರ ಚಿತ್ರದ ನಾಯಕ. ರಾಜಕೀಯದಲ್ಲಿ ಯಶಸ್ವಿಯಾದ ನಂತರ ಈಗ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಬಂದಿದ್ದಾರೆ. ಅದರ ಫಲವೆ 'ಅಯ್ಯಂಗಾರ್ ಐಪಿಎಸ್' ಚಿತ್ರ. ತಮ್ಮ ರಾಜಕೀಯ ಸಹವರ್ತಿ ಪುಟ್ಟರಾಜು ಅವರಿಗೂ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಕೊಟ್ಟು ಕೃತಾರ್ಥರಾಗಿದ್ದಾರೆ.

ಇದೊಂದು ಸಾಮಾಜಿಕ ಚಿತ್ರವಾಗಿದ್ದು, ಇದರಲ್ಲಿನ ನಾಯಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ ಎಂದರು ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಟ ರವೀಂದ್ರ. ಆರು ಹಾಡುಗಳನ್ನು ಒಳಗೊಂಡಿರುವ ಅಯ್ಯಂಗಾರ್ ಐಪಿಎಸ್ ಚಿತ್ರಕ್ಕೆ ಪ್ರದೀಪ್ ರಾಜ ಸಂಗೀತ ಸಂಯೋಜಿಸಿದ್ದಾರೆ. ಮನೋರಂಜನ್ ಆಡಿಯೋ ಮೂಲಕ ಸೀಡಿ ಮತ್ತು ಧ್ವನಿಸುರುಳಿಗಳು ಡಿಸೆಂಬರ್ 22ರಂದು ಬಿಡುಗಡೆಯಾದವು. ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಮತ್ತು ನಿರ್ಮಾಪಕ ಸಾ.ರಾ.ಗೋವಿಂದು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada