»   » ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ

Subscribe to Filmibeat Kannada
Purandara Dasa
ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ ಎಂಬುದು ಬದುಕಿನ ನಶ್ವರತೆಯನ್ನು ಸಾರುವ ದಾಸರ ಪದ. ಪುರಂದರ ದಾಸರು ರಚಿಸಿರುವ ಈ ಕೀರ್ತನೆ ಬದುಕಿನ ಬಗ್ಗೆ ನಾನಾ ಅರ್ಥಗಳನ್ನು ಹೊಮ್ಮಿಸುತ್ತದೆ. ಇತ್ತೀಚೆಗೆ ಟಿ.ಎನ್.ಸೀತಾರಾಮ್ ಅವರು ತಮ್ಮ ಮೆಗಾ ಧಾರಾವಾಹಿ ಶೀರ್ಷಿಕೆಯ ಜತೆಗೆ ದಾಸರ ಪದವನ್ನು ಬಳಸಿಕೊಂಡಿರುವುದು ವಿಶೇಷ.

ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ
ಜೋಡು ಹೆಂಡಿರಂಜಿ, ಓಡಿ ಹೋಗುವಾಗ‌
ಗೋಡೆ ಬಿದ್ದು ಬಯಲಾಯಿತಲ್ಲ

ಎಚ್ಚರಗೊಳಲಿಲ್ಲಾ , ಮನವೇ ಹುಚ್ಚನಾದೆನಲ್ಲಾ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದುಹೋಯಿತಲ್ಲಾ

ಮುಪ್ಪು ಬಂದಿತಲ್ಲಾ , ಪಾಯಸ ತಪ್ಪದೆ ಉಣಲಿಲ್ಲಾ
ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ
ಧೊಪ್ಪಗೆ ಬಿತ್ತಲ್ಲಾ

ಯೋಗವು ಬಂತಲ್ಲಾ , ಬದುಕು ವಿಭಾಗವಾಯಿತಲ್ಲಾ
ಭೋಗಿಶಯನ ಶ್ರೀ ಪುರಂದರವಿಠಲನ
ಆಗ ನೆನೆಯಲಿಲ್ಲಾ

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada