»   »  ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!

ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!

Subscribe to Filmibeat Kannada
Raghu Dixit
ಸೈಕೋ ಚಿತ್ರದಲ್ಲಿ ನಿನ್ನ ಪೂಜೆಗೆ ಬಂದ ಮಹದೇಶ್ವರಾ...ಎಂದು ಸಂಗೀತ ಸುಧೆ ಹರಿಸಿದ ರಘು ದೀಕ್ಷಿತ್ ಪ್ರಸ್ತುತ ಚಿತ್ರವೊಂದಕ್ಕೆ ಎಷ್ಟು ಚಾರ್ಜ್ ಮಾಡುತ್ತಾರೆ? ಗಾಂಧಿನಗರದ ಮೂಲಗಳ ಪ್ರಕಾರ ರಘು ಉಳಿದ ಸಂಗೀತ ನಿರ್ದೇಶಕರಿಗಿಂತ ಸಖತ್ ದುಬಾರಿ ಅಂತೆ!

ಚಿತ್ರವೊಂದಕ್ಕೆ ರಘು ವಿಧಿಸುವ ಚಾರ್ಜ್ಎಷ್ಟು?ಎಂದು ಕೇಳಿದರೆ, ''ಅವರಿಗೆ ಸದ್ಯಕ್ಕೆ ಬಿಡುವಿಲ್ಲ, 2012ರವೆಗೂ ಡೇಟ್ಸ್ ಸಿಗುವುದಿಲ್ಲ. ಚಿತ್ರವೊಂದಕ್ಕೆ ಅವರು ರು.1 ಕೋಟಿ ಚಾರ್ಜ್ ಮಾಡುತ್ತಾರೆ.'' ಎಂದು ಗಾಂಧಿನಗರದಲ್ಲಿ ಇವರ ಮ್ಯಾನೇಜರ್ ಎಂದು ಹೇಳಿಕೊಂಡು ತಿರುಗುವ ವ್ಯಕ್ತಿಯೊಬ್ಬ ಅವರ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿದ್ದಾನೆ. ಇದನ್ನು ಕೇಳಿ ಸ್ವತಃ ರಘು ಅವರೇ ಗಾಬರಿಯಾಗಿದ್ದಾರೆ. ಇದೂ ಒಂಥರಾ ಒಳ್ಳೇದೆ ಬಿಡಿ ಎನ್ನುತ್ತಾರೆ.

ಪ್ರಸ್ತುತ 'ಸೂಪರ್ ಮ್ಯಾನ್' ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವ ರಘು ಮಾತನಾಡುತ್ತಾ, ನಾನು ಚಿತ್ರವೊಂದಕ್ಕೆ ರು.35 ಲಕ್ಷ ಸಂಭಾವನೆ ಪಡೆಯುತ್ತೇನೆ. ಇದು ಕನ್ನಡ ಚಿತ್ರೋದ್ಯಮದಲ್ಲಿ ಸಂಗೀತ ಸಂಯೋಜಕನಿಗೆ ನೀಡುತ್ತಿರುವ ಸದ್ಯದ ಮಾರುಕಟ್ಟೆ ಬೆಲೆ. ನನ್ನ ವ್ಯವಹಾರವನ್ನು ನಾನೇ ನೋಡಿಕೊಳ್ಳುತ್ತೇನೆ. ನನಗೆ ಯಾವ ಮ್ಯಾನೇಜರು ಬೇಕಾಗಿಲ್ಲ. ಸದ್ಯಕ್ಕೆ ನನ್ನ ಕೈಯಲ್ಲಿ ಸೂಪರ್ ಮ್ಯಾನ್ ಚಿತ್ರವಿದೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಷರೀಫಜ್ಜನ ಸೋರುತಿಹುದು ಮನೆಯ ಮಾಳಿಗಿ
ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ(ವಿಮರ್ಶೆ)
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada