For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ 'ಕಾಂಜಿಪಿಂಚಿ' ಹಾಡಿಗೆ ಕಿಟ್ಟಿ ಡ್ಯಾನ್ಸ್

  By Rajendra
  |

  ಭರವಸೆಯ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಗೀತ ಸಾಹಿತ್ಯದಲ್ಲೂ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗವರು "ಕಾಂಜಿಪಿಂಜಿ" ಹಾಡೊಂದನ್ನು ಬರೆದಿದ್ದಾರೆ! ಈ ಹಾಡಿಗೆ 'ಕಿಲಾಡಿ ಕಿಟ್ಟಿ' ಕುಣಿದಿರುವುದು ಇನ್ನೊಂದು ಅಚ್ಚರಿ!

  ನೇರವಾಗಿ ವಿಷಯಕ್ಕೆ ಬರುವುದಾದರೆ ಎಸ್.ವಿ.ಶಿವಕುಮಾರ್ ಅವರು ನಿರ್ಮಿಸುತ್ತಿರುವ 'ಕಿಲಾಡಿ ಕಿಟ್ಟಿ' ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಹಾಡೊಂದನ್ನು ಬರೆದಿದ್ದಾರೆ. ಅದರ ಸಾಹಿತ್ಯ ಹೀಗೆ ಸಾಗುತ್ತದೆ... "ಕಾಂಜಿಪಿಂಜಿ ಹಾಡು ಹಾಡೋದಿಲ್ಲ ನಾವು ಯಾರು ಎದ್ದು ಹೋಗಬೇಡ್ರಪ್ಪಾ...". ವಿಷಯ ಇಷ್ಟೇ.

  ಈ ಹಾಡಿನ ಚಿತ್ರೀಕರಣ ಸ್ಯಾಂಡಲ್‌ವುಡ್ ಸ್ಟುಡಿಯೋದಲ್ಲಿ ನಡೆದಿದೆ. ಹರ್ಷ ನೃತ್ಯ ನಿರ್ದೇಶನ ಮಾಡಿದ ಈ ಹಾಡಿನ ಚಿತ್ರೀಕರಣದಲ್ಲಿ ಶ್ರೀನಗರ ಕಿಟ್ಟಿ, ಹರಿಪ್ರಿಯ, ಸ್ಮಿತಾ(ನಿವೇದಿತಾ), ಮಾನ್ಸಿ, ಶರಣ್, ದಿಲೀಪ್, ಆನಂದ್, ಸತ್ಯಜಿತ್, ಸಂಗೀತ ಮುಂತಾದವರು ಅಭಿನಯಿಸಿದ್ದರು.

  ಅನಂತರಾಜು ನಿರ್ದೇಶನದ ಈ ಚಿತ್ರಕ್ಕೆ ರವಿಕುಮಾರ್ ಸಾನಾರ ಛಾಯಾಗ್ರಹಣವಿದೆ. ಜೋ.ನಿ.ಹರ್ಷ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಜೆಸಿಗಿಫ್ಟ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಹರಿಪ್ರಿಯ, ಸ್ಮಿತಾ (ನಿವೇದಿತಾ), ಮಾನ್ಸಿ, ಶರಣ್, ದಿಲೀಪ್, ಆನಂದ್, ಸತ್ಯಜಿತ್, ಸಂಗೀತ, ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ಬಿ.ಜಯಮ್ಮ, ವೀಣಾಸುಂದರ್, ರಮೇಶ್ ಪಂಡಿತ್, ಬ್ರಹ್ಮಾವರ್, ವಿ.ಮನೋಹರ್ ಮುಂತಾದವರನ್ನೊಳಗೊಂಡಿದೆ. (ಒನ್‌ಇಂಡಿಯಾ ಕನ್ನಡ)

  English summary
  A prominent Kannada film director, producer, screenwriter Yograj Bhat also recognised as a lyricist. He rendered lyrics to Sringara Kitty's upcoming film 'Kiladi Kitty'. Recently the song picturised at Sandalwood studio. Jassie Gift scores music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X