»   »  ಪರಿಚಯದಲ್ಲಿ ವಲಸೆ ಕೋಗಿಲೆಗಳ ಕಲರವ!

ಪರಿಚಯದಲ್ಲಿ ವಲಸೆ ಕೋಗಿಲೆಗಳ ಕಲರವ!

Subscribe to Filmibeat Kannada
ಸ್ಯಾಂಡಲ್ ವುಡ್ ತೋಟದಲ್ಲಿ ವಲಸೆ ಕೋಗಿಲೆಗಳ ಕಲರವ ಮತ್ತೆ ಹೆಚ್ಚಾಗಿದೆ! ಮುಂಬೈನ ಟಾಪ್ ರ್ಯಾಂಕಿಂಗ್ ಗಾಯಕರಾದ ಬಾಬಾ ಸೆಹಗಲ್, ಬ್ಲಾಜಿ ಮತ್ತು ಅಲಿಶಾ ಚಿನೈ 'ಪರಿಚಯ'ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯಕ್ಕೆ ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿದ್ದರು.

ಜೀಯೋ ಜೀಯೋ...ಎಂಬ ಹಾಡನ್ನು ಬಾಬಾ ಸೆಹಗಲ್ ಹಾಡಿದರೆ, ಎದೆಯಲ್ಲಿ ಕನಸು...ಹಾಡನ್ನು ಶಾನ್, ಬ್ಲಾಜಿ, ಅಲಿಶಾ ಚಿನೈ ಹಾಡಿದರು, ಕುಡಿನೋಟವೇ ರೋಮಾಂಚನ...ಶಾನ್ ಮತ್ತು ಶ್ರೇಯಾ ಗೋಶಾಲ್ ಹಾಡಿದ ಹಾಡನ್ನು ಸಂಗೀತ ನಿರ್ದೇಶಕ ಜಾಸಿ ಗಿಫ್ಟ್ ಧ್ವನಿ ಮುದ್ರಿಸಿಕೊಂಡರು.

'ಪರಿಚಯ'ವನ್ನು ಎಸ್.ಜಿ.ಕೃಷ್ಣಮೂರ್ತಿ ಎಸ್ ಜಿ ಕೆ ಪ್ರೊಡಕ್ಷನ್ಸ್ ಬ್ಯಾನರಿನಡಿ ನಿರ್ಮಿಸುತ್ತಿದ್ದಾರೆ. ಕೆ.ಸಂಜಯ್ ನಿರ್ದೇಶನವಿರುವ ಚಿತ್ರದ ಪ್ರಮುಖ ತಾರಾಗಣದಲ್ಲಿ ತರುಣ್ ಮತ್ತು ರೇಖಾ ನಟಿಸುತ್ತಿದ್ದಾರೆ. ಚಿತ್ರದ ಇತರೆ ಸಹಕಲಾವಿದರು ಶೋಭರಾಜ್, ಸುಧಾ ಬೆಳವಾಡಿ, ಕಾಶಿ, ಕೋಮಲ್ ಕುಮಾರ್, ಕರಿಬಸವಯ್ಯ, ಭಾರ್ಗವಿ ನಾರಾಯಣ್, ಸಿಂಧು, ಸ್ಮಿತಾ, ಮೋನೀಶಾ. ಛಾಯಾಗ್ರಹಣ ಪಿಕೆಎಚ್ ದಾಸ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada