ಕನ್ನಡದಲ್ಲಿ ಹಂಸಲೇಖ ಅವರಿಗೆ ಮತ್ತೆ ಬೇಡಿಕೆ

ಸದ್ಯಕ್ಕೆ ಹಂಸಲೇಖ ಕೈಯಲ್ಲಿ ಏನಿಲ್ಲವೆಂದರೂ ನಾಲ್ಕು ಚಿತ್ರಗಳಿವೆ. ಯೋಧ, ಪ್ರೇಮಿಸಂ, ರಜನಿ ಮತ್ತು ದೇವರು ಕೊಟ್ಟ ತಂಗಿ. ನಾಲ್ಕೂ ನಾಲ್ಕು ಬಗೆಯ ಚಿತ್ರಗಳು. ಒಂದೆರಡು ಚಿತ್ರಗಳಲ್ಲಿ ಹಾಗೆ ಬಂದು ಹೋಗಿದ್ದ ಹಂಸಲೇಖ ಹೇಳಿಕೊಳ್ಳುವಂತಹ ಸಂಗೀತವನ್ನು ನೀಡಿರಲಿಲ್ಲ. ಈಗ ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಹಿಂತಿರುಗಿದ್ದಾರೆ.
ವಿ ಮನೋಹರ್ ಎರಡು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಮನೋಮೂರ್ತಿ ತಮ್ಮ ಚಿತ್ರಗಳು ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದಾರೆ. ಗುರುಕಿರಣ್ ವಿಶ್ರಾಂತಿಯಲ್ಲಿದ್ದಾರೆ. ಹಂಸಲೇಖ ಮಾತ್ರ ಹೊಸ ಉತ್ಸಾಹದಲ್ಲಿ ಮತ್ತೆ ಫಾರ್ಮ್ ಗೆ ಬಂದಿರುವುದು ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
kannada movies kannada music ಸಂಗೀತ ರಜನಿ rajani ಹಂಸಲೇಖ ಯೋಧ yodha ದೇವರು ಕೊಟ್ಟ ತಂಗಿ devaru kotta thangi premism ಕನ್ನಡ ಸಿನಿಮಾ ಪ್ರೇಮಿಸಂ hanaslekha


Click it and Unblock the Notifications