»   »  ಮುಂಬೈ ಕನ್ನಡಿಗರಿಗಾಗಿ ಸಿ.ಅಶ್ವಥ್ ಗಾನ ಸುಧೆ

ಮುಂಬೈ ಕನ್ನಡಿಗರಿಗಾಗಿ ಸಿ.ಅಶ್ವಥ್ ಗಾನ ಸುಧೆ

Subscribe to Filmibeat Kannada
C.Ashwath in Mumbai mega musical evening
ಸುಗಮ ಸಂಗೀತ ಗಾಯಕ ಸಿ.ಅಶ್ವಥ್ ಇದೇ ಮೊದಲ ಬಾರಿಗೆ ಮುಂಬೈ ಕನ್ನಡಿಗರಿಗಾಗಿ ರಸಸಂಜೆಯೊಂದನ್ನು ನಡೆಸಿಕೊಡಲಿದ್ದಾರೆ. ಮುಂಬೈ ಕರ್ನಾಟಕ ಸಂಘ ಏಪ್ರಿಲ್ 19ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಬೃಹತ್ ಸಂಗೀತ ಸಂಜೆ ಕಾರ್ಯಕ್ರಮಕ್ಕಾಗಿ ಶಣ್ಮುಖಾನಂದ ಸಭಾಂಗಣ ಮುಂಬೈನಲ್ಲಿ ಸಿಂಗಾರವಾಗಿದೆ.

'ಮುಂಬೈನಲ್ಲಿ ಸಿ.ಅಶ್ವಥ್' ಎಂಬ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅಶ್ವಥ್ ಈಗಾಗಲೇ 54 ಸದಸ್ಯರ ತಂಡವನ್ನು ಸಿದ್ಧಪಡಿಸಿಕೊಂಡಿದ್ದಾರೆ. ರಸಸಂಜೆ ಕಾರ್ಯಕ್ರಮದಲ್ಲಿ ಆಯ್ದ 24 ಗೀತೆಗಳಿಂದ ಮೂರುವರೆ ಗಂಟೆಗಳ ಕಾಲ ಮುಂಬೈ ಕನ್ನಡಿಗರನ್ನು ಗಾನಸುಧೆಯಲ್ಲಿ ಮೈಮರೆಸಲಿದ್ದಾರೆ. ಅಶ್ವಥ್ ರೊಂದಿಗೆ ಎಂ ಡಿ ಪಲ್ಲವಿ, ಸುಪ್ರಿಯಾ ಮತ್ತು ಮಂಗಳ ಸಹ ಗಾನ ಸುಧೆ ಹರಿಸಲಿದ್ದಾರೆ. ಗಾಯಕಿ ಸಂಗೀತ ಕಟ್ಟಿ ವಿಶೇಷ ಹಾಡೊಂದನ್ನು ಹಾಡಲಿದ್ದಾರೆ.

ಎಪ್ಪತ್ತರ ಇಳಿವಯಸ್ಸಿನಲ್ಲೂ ಸಿ.ಅಶ್ವಥ್ ಹೊಸ ಹುರುಪಿನಲ್ಲಿ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಿರುವುದು ವಿಶೇಷ. ಏಪ್ರಿಲ್ 18ರಂದು ವಿಮಾನ ನಿಲ್ದಾಣದಲ್ಲಿ ಬೆಳಗಿನ ತಿಂಡಿಗೆ ಏನು ತೆಗೆದುಕೊಳ್ಳಬೇಕು ಎಂಬುದನ್ನೂ ಅವರು ಈಗಾಗಲೇ ನಿರ್ಧರಿಸಿದ್ದಾರೆ. ಕುವೆಂಪು, ನರಸಿಂಹಸ್ವಾಮಿ, ಗೋಪಾಲಕೃಷ್ಣಅಡಿಗ, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಎಚ್.ಎಚ್.ವೆಂಕಟೇಶಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ, ವ್ಯಾಸರಾವ್...ಮುಂತಾದವರ ಕವನಗಳು ಮುಂಬೈನಲ್ಲಿ ಪ್ರತಿಧ್ವನಿಸಲಿವೆ.

ಶ ನಿವಾರ(ಮಾರ್ಚ್28) ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಂಬೈ ಕನ್ನಡ ಸಂಘದ ಅಧ್ಯಕ್ಷ ಮನೋಹರ್ ಎಂ ಕೋರಿ, ಉಪಾಧ್ಯಕ್ಷ ಭರತ್ ಕುಮಾರ್ ಪೊಲಿಪು ಉಪಸ್ಥಿತರಿದ್ದರು. ಮುಂಬೈನಲ್ಲಿ ಸಿ.ಅಶ್ವಥ್ ಸಂಗೀತ ಸಂಜೆ ಕಾರ್ಯಕ್ರಮದ ಬಗ್ಗೆ ಅವರು ವಿವರ ನೀಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಕೃಪಾಕರ ಎಂಬ ಸಂಗೀತ ನಿರ್ದೇಶಕರ ವೃತ್ತಾಂತ
ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!
ಸಂಗೀತ ಸಿನಿಮಾಗೆ ಕಿಟಕಿ ಇದ್ದಂತೆ: ಸುರೇಶ್ ಕೃಷ್ಣ
ಕನ್ನಡಕ್ಕೆ ಬಂದ ಹೊಸ ಕೋಗಿಲೆ ಶ್ರೇಯಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada