»   »  ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ

ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ

Posted By:
Subscribe to Filmibeat Kannada
Raaj The Showman audio super hit
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜ್ 'ಚಿತ್ರದ ಧ್ವನಿಸುರುಳಿಗಳು ಬಿಸಿ ದೋಸೆಯಂತೆ ಬಿಕರಿಯಾಗುತ್ತಿವೆ. ಧ್ವನಿಸುರುಳಿ ಬಿಡುಗಡೆಯಾದ ಎರಡು ದಿನಗಳಲ್ಲೇ ಸುಮಾರು 1 ಲಕ್ಷಆಡಿಯೋಗಳು ಖರ್ಚಾಗಿವೆ. ಹಾಗಾಗಿ ಅಶ್ವಿನಿ ಆಡಿಯೋ ಕಂಪನಿಯಲ್ಲಿ ಈಗ ಪಾಳಿ ಮೀರಿದ ಕೆಲಸ.

ಈ ಸಿಹಿಸುದ್ದಿಯನ್ನು ಹಂಚಿಕೊಳ್ಳಲು ರಾಜ್ ಚಿತ್ರದ ನಿರ್ದೇಶಕ ಪ್ರೇಮ್ ಮಾಧ್ಯಮ ಪ್ರತಿನಿಧಿಗಳನ್ನು ಹಾಗೂ ವಿತರಕರನ್ನು ಆಹ್ವಾನಿಸಿದ್ದರು. ಶ್ರೀನಿವಾಸ್, ಅಶೋಕ್ ಕುಮಾರ್, ಧನುಷ್, ಕುಮಾರ್, ಹರೀಶ್ ಮುಂತಾದ ವಿತರಕರು ವಿವಿಧ ಸ್ಥಳಗಳಿಂದ ಆಗಮಿಸಿದ್ದು ವಿಶೇಷವಾಗಿತ್ತು.

ಚಿತ್ರಮಂದಿರದ ಬಳಿ ಟಿಕೆಟ್ ಗಾಗಿ ಸಾಲುಗಟ್ಟಿ ನಿಲ್ಲುವುದನ್ನು ನೋಡಿದ್ದೇವೆ. ಆದರೆ ಅಶ್ವಿನಿ ಆಡಿಯೋ ಮುಂದೆ ವಿತರಕರು ಸಾಲುಗಟ್ಟಿ ನಿಲ್ಲುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತ್ತದೆ ಎಂದರು ರಾಜ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಸುರೇಶ್ ಗೌಡ. ಕೃಷ್ಣಪ್ಪನವರ ಪ್ರಕಾರ ದಿನದಿಂದ ದಿನಕ್ಕೆ ರಾಜ್ ಧ್ವನಿಸುರುಳಿಗಳ ಮಾರಾಟ ಹೆಚ್ಚುತ್ತಿದೆಯಂತೆ. ಚಿತ್ರ ಬಿಡುಗಡೆ ಸಮಯಕ್ಕೆ 2 ಲಕ್ಷ ಧ್ವನಿಸುರುಳಿಗಳು ಮಾರಾಟವಾಗಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ರಾಜ್ ಚಿತ್ರದ ಸಿಡಿಯಲ್ಲಿ ಕೊಟ್ಟಿರುವ ಕಾರ್ಡ್ ನಕ್ಷತ್ರಾಕಾರದಲ್ಲಿದ್ದು, ಇದನ್ನು ರು.10ಕ್ಕೆ ಮಾರಾಟ ಮಾಡಲಾಗುತ್ತಿದೆ. ನಕ್ಷತ್ರದ ಐದು ಕೋನಗಳಲ್ಲಿ ಡಾ.ರಾಜ್, ಡಾ.ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಮತ್ತು ಶಂಕರನಾಗ್ ಚಿತ್ರಗಳನ್ನು ಮುದ್ರಿಸಲಾಗಿದೆ ಎಂದು ಪ್ರೇಮ್ ವಿವರ ನೀಡಿದರು. ಚಿತ್ರಗಳಿಗೆನಾಗೇಂದ್ರ ಪ್ರಸಾದ್, ಪ್ರೇಮ್ ಮತ್ತು ಕವಿರಾಜ್ ಸಾಹಿತ್ಯ ವಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ (ಏಪ್ರಿಲ್ 24)ರಾಜ್ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!
ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್
ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada