»   » ಆಡಿಯೋ ವಿಮರ್ಶೆ: 'ರಾಟೆ' ಹೊಸ ಏಟಿನ ತಮಟೆ

ಆಡಿಯೋ ವಿಮರ್ಶೆ: 'ರಾಟೆ' ಹೊಸ ಏಟಿನ ತಮಟೆ

By: ರವೀಂದ್ರ ಕೊಟಕಿ
Subscribe to Filmibeat Kannada

ವಿ.ಹರಿಕೃಷ್ಣ ರಥಸಾರಥಿ (ನಿರ್ಮಾಪಕನಾಗಿ)ಯಾಗಿ ಎ.ಪಿ.ಅರ್ಜುನ ತಿರುಗಿಸುತ್ತಿರುವ (ನಿರ್ದೇಶನ) 'ರಾಟೆ'ಯಲ್ಲಿ ತನ್ನ 'ಗಾಂಢೀವ' (ನಟನೆ) ಮೂಲಕ ಧನಂಜಯ (ನಾಯಕ) ರಾಜನಾಗಿ ಶ್ರುತಿ ಹರಿಹರಿನ್ (ನಾಯಕಿ) ಎಂಬ ರಾಣಿಯನ್ನು ಹೇಗೆ ಗೆದ್ದ ಅನ್ನೋದನ್ನ ತೆರೆಯ ಮೇಲೆ ನೋಡಬೇಕಿದೆ.

ಆದರೆ ಅದಕ್ಕೂ ಮೊದಲು ಅರ್ಜುನನ ರಾಟೆಯಲ್ಲಿ ಯಾವ ರಾಗಗಳು ಸರಾಗವಾಗಿದೆ, ವಿರಾಗವಾಗಿದೆ ಅನ್ನೋದು ನೋಡೋಣ. ಅರಿವಿನ ಮಾರಮ್ಮನ ಕೃಪೆ, ದರ್ಶನ್ ಅರ್ಪಣೆಯೊಂದಿಗೆ ಅಂಬಾರಿ, ಅದ್ದೂರಿಗಳ ನಂತರ ಅರ್ಜುನ್ ನಿರ್ದೇಶಿಸುತ್ತಿರುವ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮೊದಲ ಬಾರಿಗೆ ನಿರ್ಮಾಪಕನಾಗಿ ನಿರ್ಮಾಣವಾಗಿರುವ ರಾಟೆಯ ಹಾಡುಗಳನ್ನು ಡಿ ಬಿಟ್ಸ್ ಸಂಸ್ಥೆ ಹೊರತಂದಿದ್ದೆ. [ಸಿದ್ದಾರ್ಥ ಆಡಿಯೋ ವಿಮರ್ಶೆ]

ವಿ ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಇದರಲ್ಲಿ ಐದು ಹಾಡುಗಳನ್ನು ನಿರ್ದೇಶಕ ಎ.ಪಿ.ಅರ್ಜುನ್ ರಚಿಸಿದ್ದು ಉಳಿದೊಂದು ಗೀತೆಯನ್ನು ತಡಬಡುವಿಲ್ಲದ ಸಾಹಿತ್ಯಕ್ಕೆ ಕೇರಫ್ ಅಡ್ರಸ್ ಆಗಿರೋ ಯೋಗರಾಜ್ ಭಟ್ ಬರೆದಿದ್ದಾರೆ. ಸಿಡಿಯಲ್ಲಿ ಆರು ಹಾಡುಗಳನ್ನು ಕಿವಿಗೆ ಹಾಕಿಕೊಂಡಾಗ ಅನ್ನಿಸಿದ ಅಭಿಪ್ರಾಯವಿದು.

ಪಾತ್ರವರ್ಗ: ಧನಂಜಯ್, ಶ್ರುತಿ ಹರಿಹರನ್
ಸಂಗೀತ: ವಿ ಹರಿಕೃಷ್ಣ
ನಿರ್ದೇಶನ: ಎಪಿ ಅರ್ಜುನ್
ನಿರ್ಮಾಪಕರು: ವಿ ಹರಿಕೃಷ್ಣ
ಛಾಯಾಗ್ರಹಣ: ಸತ್ಯ ಹೆಗಡೆ

ರಟ್ಟುಪುಟ: ಮತ್ತೆಮತ್ತೆ ಕೇಳಬೇಕೆನಿಸುವ ಹಾಡು

ಸಿಡಿಯಲ್ಲಿ ಮೊದಲನೇ ಹಾಡಾಗಿ ಸಿನಿಮಾದ ಟೈಟಲ್ 'ರಾಟೆ'ಗೆ ಅನುಸಂಧಾನವಾಗಿ ವಾಣಿಹರಿಕೃಷ್ಣ, ಸಂತೋಷ್ ವೆಂಕಿ ಧ್ವನಿಯಲ್ಲಿ "ರಟ್ಟುಪುಟ" ಹಾಡು ಕೇಳಿ ಬರುತ್ತದೆ. ಹಳ್ಳಿ ಸೊಗಡಿನ ಪ್ರೀತಿ-ಪ್ರೇಮ ಸಾಹಿತ್ಯದಲ್ಲಿ ನಿಚ್ಚಳವಾಗಿ ಎದ್ದು ಕಾಣುತ್ತದೆ. ಒಂದು ಸಲ ಕೇಳಿದರೆ ಹೆಚ್ಚಿನ ಪ್ರಭಾವ ಬೀರದ್ದರೂ ಮತ್ತೆಮತ್ತೆ ಕೇಳಿದರೆ ಅಪ್ಯಾಯಮಾನವೆನ್ನಿಸುತ್ತದೆ.

ರಾಜ-ರಾಣಿಯಂತೆ ನೀನು-ನಾನು

ರಾಟೆ ರಾಜ-ರಾಣಿ ಕಥೆ ಎಂದು ಸಿಡಿ ಕವರ್ ಮೇಲೆ ಹೈಲೆಟ್ ಮಾಡಲಾಗಿದೆ. ಮೊದಲನೆಯ ಹಾಡು 'ರಾಟೆ'ಯಿಂದ ಪ್ರೀತಿಯ ಕಡೆಗೆ ಮುಖ ಮಾಡಿದರೆ ಎರಡನೇ ಹಾಡು "ರಾಜ-ರಾಣಿಯಂತೆ ನೀನು-ನಾನು" ಅಂತೇಳಿ ಮೇಲೋಡಿಯಾಗಿ ಸಂತೋಷ್ ವೆಂಕಿ ಹಾಡಿದ್ದಾರೆ. ಈ ಸ್ಲೋ ಮೇಲೋಡಿ ಗೀತೆಯಲ್ಲಿ "ನೀನು ಇರಬೇಕು ನನಗೆ ಮಗುವಾಗಿ" "ಜೊತೆಗೆ ಬರುವೆ ಎಂದೆಂದೂ ನೆರೆಳಿಗೆ ಬದಲಾಗಿ" ಪ್ರಯೋಗಗಳು ಚೆನ್ನಾಗಿದೆ.

ಜೋಡ್ ಹಕ್ಕಿ: ಪದಪ್ರಯೋಗ ಸೊಗಸಾಗಿದೆ

ಕಿಚ್ಚ ಸುದೀಪ್ ಕಠಸಿರದಲ್ಲಿ ಮೂಡಿಬಂದಿರುವ 'ಜೋಡಕ್ಕಿ ಗೂಡ್ ಕಟ್ಕೊಂತವೇ' ಮೇಲ್ಮೋಟಕ್ಕೆ ಫ್ಯಾಥೋ ಹಾಡು ಅಂತ ನಿರ್ಣಯಿಸಿ ಬಿಡಬಹುದು. ಅಪರೂಪಕ್ಕೆ ಸಿಗುವ ಅಮೃತಬಳ್ಳಿಯಂತೆ ಜೋಡಕ್ಕಿ ಹಾಡಿನ ಸಾಹಿತ್ಯದಲ್ಲಿ ಪದಪ್ರಯೋಗಳು ಚೆನ್ನಾಗಿವೆ. ಸುದೀಪ್ ಧ್ವನಿ ಕೂಡ ಅದಕ್ಕೆ ಸರಿಯಾಗಿ ಧ್ವನಿಗೂಡಿದೆ. ಬಾಡಿಗೆ ಕಟ್ಟೋ ಚಿಂತಿಯಿಲ್ಲದೇ ಗೂಡು ಕಟ್ಟಿಕೊಂಡ ಬಡವ-ಬಡವಿಯ ಪ್ರೀತಿಯ ಹಾಡು ಇದು.

ಭಟ್ಟರೇ ಏನು ನಿಮ್ಮ ಹಾಡುಗಳ ಲೀಲೆ

ಅಪರೂಪಕ್ಕೆ ಯೋಗರಾಜ್ ಭಟ್ ತಮ್ಮ ತಡಬುಡವಿಲ್ಲದ ಸಾಹಿತ್ಯದಿಂದ ಹೊರಬಂದು "ನನ್ನ ಬೆನ್ನಲ್ಲಿನ ಕಣ್ಣೆಲ್ಲಾ ಅವಳ ಕಡೆ, ಉಸಿರು ಕಟ್ಟೋದು ನಿಂತಲ್ಲೇ ನಿಂತ ಕಡೆ" ಅಂದರೆ "ಈ ಒಂಟಿ ರಾತ್ರಿಯಲಿ ಅವಳ ಗುಂಗೂ ನನಗೇಕೋ ಕೇಳಿಸದು ನನ್ನ ಕೂಗು" ಅಂತ ಧ್ವನಿಯಾಗಿದ್ದಾರೆ ಸೋನ್ ನಿಗಮ್. ಅನುರಾಗದ ನೋವು, ಕೆಂಪು ಕಿರುಬೆರಳು, ಒಲವೆಂಬುವುದು ಮಳೆಗಾಲ ಅಂತ ಪದಗಳನ್ನು ಕೇಳಿದಾಗ ಭಟ್‍ರ ಮುಂಗಾರ ಮಳೆಯೇ ಏನು ನಿನ್ನ ಲೀಲೆ ಹಾಡು ನೆನಪಾಗುತ್ತದೆ. ಒಟ್ಟಲ್ಲಿ ಭಟ್ಟರೇ ಏನು ನಿಮ್ಮ ಹಾಡುಗಳ ಲೀಲೆ.

ಮತ್ತೊಂದು ಮೆಲೋಡಿ ಹಾಡು

ರಾಟೆ ರಾಜ-ರಾಣಿ ಕಥೆ ಎಂದು ಸಿಡಿ ಕವರ್ ಮೇಲೆ ನಮೂದು ಮಾಡಲಾಗಿದೆ. ಮೊದಲನೆಯ ಹಾಡು ರಾಟೆಯಿಂದ ಪ್ರೀತಿಯ ಕಡೆಗೆ ಮುಖ ಮಾಡಿದರೆ ಎರಡನೇ ಹಾಡು ರಾಜ-ರಾಣಿಯಂತೆ ನೀನು-ನಾನು ಅಂತೇಳಿ ಮೇಲೋಡಿಯಾಗಿ ಸಂತೋಷ್ ವೆಂಕಿ ಹಾಡಿದ್ದಾರೆ. ಅದೇ ಹಾಡು ಮತ್ತೆ ಫೀಮೇಲ್ ಫೀಲ್ ನಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದಾರೆ. ಹೀಗಾಗಿ ಎರಡನೇ ಹಾಡಿಗೆ ಹೇಳಿದ ಮಾತುಗಳೇ ಇದ್ದಕ್ಕೂ ಅನ್ವಯಿಸುತ್ತದೆ.

ದೇವರು ಇಲ್ಲದ ಗುಡಿಯ ಬದಲಾಗಿ

"ದೇವರು ಇಲ್ಲದ ಗುಡಿಯ ಬದಲಾಗಿ" ಕೊನೆಯಲ್ಲಿ ಸಂತೋಷ್ ವೆಂಕಿ ಹಾಡಿದ್ದಾರೆ. ಇದು ಕೂಡ ರಾಜ-ರಾಣಿ ಹಾಡಿನ ಮುಂದುವರಿದ ಭಾಗದ ನಾಲ್ಕು ಸಾಲುಗಳು ಮಾತ್ರ. ಒಟ್ಟಲ್ಲಿ ಎಲ್ಲಾ ಹಾಡುಗಳು 'ರಾಟೆ'ಯ ರಾಜ-ರಾಣಿಯರ ಕಥೆ ಅಂತ ಒತ್ತಿ ಒತ್ತಿ ಹೇಳುತ್ತದೆ.

ಡಬಲ್ ಮೀನಿಂಗ್ ಇಲ್ಲದ ಸದಭಿರುಚಿಯ ರಾಟೆ

ಒಟ್ಟಾರೆ ಹಾಡುಗಳ ವಿಷಯಕ್ಕೆ ಬಂದರೆ ಅದ್ಭುತ ಅಂತ ಹೇಳುವುದ್ದಕ್ಕೇ ಸಾಧ್ಯವಾಗದೇ ಹೋದರು ಉತ್ತಮವಾಗಿದೆ, ಡಬಲ್ ಮೀನಿಂಗ್ ಜಮಾನದಲ್ಲೂ ಸದಭಿರುಚಿಯೊಂದಿಗೆ ಮೂಡಿಬಂದಿವೆ ಅಂತ ಹೇಳಬಹುದು.

English summary
Read Kannada movie 'Raate' music review by Ravindra Kotaki. The author says, songs are tasteful and melodious. The Title song "Raate' sung by Vani Harikrishna and Santhosh Venki and lyrics by AP Arjun is sweet toned. Music by V Harikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada