For Quick Alerts
  ALLOW NOTIFICATIONS  
  For Daily Alerts

  ಜನವರಿ 1 ರಂದು ಸರ್ಪ್ರೈಸ್ ನೀಡಲಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

  |

  15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರ್ಜುನ್ ಜನ್ಯ ಮ್ಯಾಜಿಕಲ್ ಕಂಪೋಸರ್ ಎಂದೇ ಗುರುತಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಅರ್ಜುನ್ ಜನ್ಯ ಲೈಫೇ ಬದಲಾಯಿತು.

  ಸ್ಟಾರ್ ನಟರ ಚಿತ್ರಗಳಿಗೆ ಬೇಡಿಕೆಯ ಸಂಗೀತ ನಿರ್ದೇಶಕ ಆಗಿಬಿಟ್ಟರು. ನೋಡು ನೋಡುತ್ತಲೇ ನೂರು ಸಿನಿಮಾಗಳಿಗೆ ಮ್ಯೂಸಿಕ್ ಮಾಡಿದ ನಿರ್ದೇಶಕರ ಪಟ್ಟಿ ಸೇರಿದರು. ವರ್ಷದಿಂದ ವರ್ಷಕ್ಕೆ ಅರ್ಜುನ್ ಜನ್ಯ ಖ್ಯಾತಿ ಹೆಚ್ಚಾಯಿತು.

  ಅರ್ಜುನ್ ಜನ್ಯ ಹುಟ್ಟುಹಬ್ಬ: 'ನಿಮ್ಮ ಏಳು-ಬೀಳು ಎರಡನ್ನೂ ನೋಡಿದ್ದೇನೆ' ಎಂದ ಕಿಚ್ಚನಿಗೆ ಅರ್ಜುನ್ ಹೇಳಿದ್ದೇನು?ಅರ್ಜುನ್ ಜನ್ಯ ಹುಟ್ಟುಹಬ್ಬ: 'ನಿಮ್ಮ ಏಳು-ಬೀಳು ಎರಡನ್ನೂ ನೋಡಿದ್ದೇನೆ' ಎಂದ ಕಿಚ್ಚನಿಗೆ ಅರ್ಜುನ್ ಹೇಳಿದ್ದೇನು?

  ಪ್ರಸ್ತುತ ಕನ್ನಡದ ನಂಬರ್ ವನ್ ಸಂಗೀತ ನಿರ್ದೇಶಕ ಯಾರು ಎಂದು ಕೇಳಿದ್ರೆ ಫಟ್ ಅಂತ ಅರ್ಜುನ್ ಜನ್ಯ ಎನ್ನುವಷ್ಟು ಸಕ್ಸಸ್ ಕಂಡಿದ್ದಾರೆ. ಇಂತಹ ಅರ್ಜುನ್ ಜನ್ಯ ಈಗ ಹೊಸ ಹೆಜ್ಜೆಯಿಟ್ಟಿದ್ದಾರೆ.

  ಇಷ್ಟು ದಿನ ಕಮರ್ಷಿಯಲ್ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದ ಜನ್ಯ ಮೊಟ್ಟ ಮೊದಲ ಬಾರಿ ಭಕ್ತಿಗೀತೆಗಳ ಕಡೆ ಗಮನ ನೀಡಿದ್ದಾರೆ. ಸಂಪೂರ್ಣವಾಗಿ ದೇವರ ಕುರಿತು ಆಲ್ಬಂ ರಚಿಸಿದ್ದಾರೆ. ಓಂ ಶಕ್ತಿ ದೇವರ ಬಗ್ಗೆ ಆಲ್ಬಂ ರಚಿಸಿದ್ದು ಹೊಸ ವರ್ಷದ ಪ್ರಯುಕ್ತ ಲೋಕಾರ್ಪಣೆ ಮಾಡುತ್ತಿದ್ದಾರೆ.

  ಇವರ್ಯಾರೋ ಹೊಸ ಸ್ವಾಮೀಜಿ ಅಂತ ಕನ್ಫೂಸ್ ಆಗ್ಬೇಡಿ, ಹೊಸ ಗೆಟಪ್ ಅಷ್ಟೇಇವರ್ಯಾರೋ ಹೊಸ ಸ್ವಾಮೀಜಿ ಅಂತ ಕನ್ಫೂಸ್ ಆಗ್ಬೇಡಿ, ಹೊಸ ಗೆಟಪ್ ಅಷ್ಟೇ

  ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ಅರ್ಜುನ್ ಜನ್ಯ ''ನನ್ನ ಮೊದಲ ಭಕ್ತಿಗೀತೆಗಳ ಆಲ್ಬಂ ಬಿಡುಗಡೆ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಜನವರಿ 1 ರಂದು ನನ್ನದೇ ಯ್ಯೂಟ್ಯೂಬ್ ಚಾನಲ್‌ನಲ್ಲಿ ಹಾಡುಗಳು ಬಿಡುಗಡೆಯಾಗಲಿದೆ'' ಎಂದು ಮಾಹಿತಿ ನೀಡಿದ್ದಾರೆ.

  Arjun Janya announced his first Devotional Album on Om Sakthi

  ಇನ್ನುಳಿದಂತೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಕೋಟಿಗೊಬ್ಬ 3, ಮದಗಜ, ರಾಜಮಾರ್ತಾಂಡ, ರಾಬರ್ಟ್, ಗಾಳಿಪಟ 2, ರೆಮೋ, ವಿಂಡೋ ಸೀಟ್ ಚಿತ್ರಗಳು ಬಿಡುಗಡೆಯಾಗಬೇಕಿದೆ.

  English summary
  Kannada music director Arjun Janya announced his first Devotional Album on Om Sakthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion