»   » ಧ್ವನಿಸುರುಳಿ ವಿಮರ್ಶೆ: ಸುದೀಪ್ ಅಭಿನಯದ ಕೋಟಿಗೊಬ್ಬ 2

ಧ್ವನಿಸುರುಳಿ ವಿಮರ್ಶೆ: ಸುದೀಪ್ ಅಭಿನಯದ ಕೋಟಿಗೊಬ್ಬ 2

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ಡಾ. ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಚಿತ್ರದ ಹೆಸರನ್ನೇ ಇಟ್ಟುಕೊಂಡು ಮುಂದಿನ ಭಾಗವಾಗಿ ಬರುತ್ತಿರುವ ಕೋಟಿಗೊಬ್ಬ - 2 ಚಿತ್ರ ಹಲವಾರು ಕಾರಣಗಳಿಂದ ಸುದ್ದಿ ಮಾಡುತ್ತಿದೆ.

'ವಿಷ್ಣುವರ್ಧನ' ಚಿತ್ರದ ನಂತರ ವಿಷ್ಣುರವರ ಲಿಂಕ್ ಇರುವ ಚಿತ್ರ ಇದು ಎನ್ನುವುದು ಒಂದು ಕಡೆಯಾದರೆ, ಸುದೀಪ್ ಅಭಿನಯದ ಚಿತ್ರ ಬಹಳ ದಿನಗಳ ನಂತರ ಬರುತ್ತಿರುವುದು ಇನ್ನೊಂದೆಡೆ.

ತಮಿಳಿನ ಖ್ಯಾತ ಕೆ ಎಸ್ ರವಿಕುಮಾರ್ ನಿರ್ದೇಶನದ ಚಿತ್ರ ಇದು ಎನ್ನುವುದು ಇನ್ನೊಂದು ಪ್ಲಸ್ ಪಾಯಿಂಟ್. (ನಮ್ ಕಿಚ್ಚ ಅವ್ರದ್ದು ಅದೇನ್ ಸ್ಟೈಲ್ ಅಂತೀರಾ)

Audio review of Kichcha Sudeep starer, K S Ravikumar directed Kotigobba 2

ಅಂತೆಯೇ ಇಮ್ಮನ್ ಅವರ ಸಂಗೀತ ಯುವ ಜನರನ್ನು ಈ ಹಿಂದೆಯೂ ಮೋಡಿ ಮಾಡಿದೆ. ಈ ಸಂಗೀತ ನಿರ್ದೇಶಕರು ಕನ್ನಡದಲ್ಲಿ ಸಂಗೀತ ನೀಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಆಲ್ಬಂನ ಎಲ್ಲಾ ಹಾಡುಗಳಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿದ್ದಾರೆ. ಚಿತ್ರದ ಹಾಡುಗಳ ಹೇಗಿವೆ?

ಕೋಟಿಗೊಬ್ಬ
ಗಾಯಕರು: ವಿಜಯ್ ಪ್ರಕಾಶ್

ನಾಗೇಂದ್ರ ಪ್ರಸಾದ್ ಈ ರೀತಿಯ ಗೀತೆಗಳನ್ನು ಸುಲಭವಾಗಿ ಬರೆಯಬಹುದು ಎನಿಸುವ ಮಟ್ಟಿಗೆ ಆರಾಮವಾಗಿ ಸಾಹಿತ್ಯ, ಸಂಗೀತದೊಂದಿಗೆ ಬೆರೆತಿದೆ. ವಿಜಯ್ ಪ್ರಕಾಶ್ ಈ ಧಾಟಿಯ ಹಾಡಿಗೆ ಹೇಳಿ ಮಾಡಿಸಿದ ಗಾಯಕ. ಸಂಗೀತ ಹಾಗೂ ವಾದ್ಯ ಸಂಯೋಜನೆಯಲ್ಲಿ ಇಮ್ಮಾನ್ ಶೈಲಿಯಿದೆ. ಎಂದಿನ ನಾಯಕನ ಸ್ವಭಾವ ಮತ್ತು ಸಿದ್ದಾಂತವನ್ನು ವಿವರಿಸುವ ಗೀತೆ.

ಸಾಲುತ್ತಿಲ್ಲವೇ
ಗಾಯಕರು: ವಿಜಯ್ ಪ್ರಕಾಶ್, ಶ್ರೇಯಾ ಘೋಷಾಲ್

ಗೀತೆಯ ಸಂಗೀತ ಹಾಗೂ ವಾದ್ಯ ಸಂಯೋಜನೆ ಚೆನ್ನಾಗಿದೆ. ಹಳೆಯ ಇಳಯರಾಜರ ಗೀತೆಗಳನ್ನು ನೆನಪಿಸುತ್ತದೆ. ಶ್ರೇಯಾ ಹಾಗೂ ವಿಜಯ್ ಪ್ರಕಾಶ್ ಅವರಂತಹ ನುರಿತ ಗಾಯಕರ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಸಾಹಿತ್ಯ ಉತ್ತಮವಾಗಿದೆ, ಹಿಟ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಗೀತೆ.

Audio review of Kichcha Sudeep starer, K S Ravikumar directed Kotigobba 2

ಹೂನ ಹೂನ
ಗಾಯಕರು: ಜಿತಿನ್ ರಾಜ್, ಶಾಶ ತಿರುಪತಿ

ಕನ್ನಡಕ್ಕೆ ತೀರ ಹೊಸದಲ್ಲದಿದ್ದರೂ ವಿಭಿನ್ನವೆನಿಸುವ ಗೀತೆ. ಇಮ್ಮನ್ ಅವರ ಸಂಗೀತದ ಮೋಡಿ ಹಾಡಿನಲ್ಲಿ ಸೆಳೆಯುತ್ತದೆ. ಗಾಯಕರ ತನ್ಮತೆಯೂ ಮೆಚ್ಚುವಂತಿದೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಇಂಗ್ಲಿಷ್ ಪದಗಳ ಮೆರವಣಿಗೆಯಿದೆ, ಕನ್ನಡ ಪದಗಳು ಬಂದು ಹೋಗುತ್ತವೆ. ಆದರೆ ಸಂಗೀತದ ಶೈಲಿಯೇ ಹೀಗಿರುವಾಗ ದೂರುಗಳಿಗೆ ಅವಕಾಶವಿಲ್ಲ. ಯುವ ಕೇಳುಗರಿಗೆ ಖಂಡಿತ ಇಷ್ಟವಾಗಬಹುದು.

ಪರಪಂಚ ಸೇನೆ
ಗಾಯಕರು: ಶಂಕರ್ ಮಹಾದೇವನ್

ನಾಗೇಂದ್ರ ಪ್ರಸಾದ್ ಸಾಹಿತ್ಯ, ಶಂಕರ್ ಮಹಾದೇವನ್ ಜೋಡಿ ಹಲವು ಶಕ್ತಿಯುತವಾದ ಮತ್ತು ಸತ್ವಪೂರ್ಣ ಹಾಡುಗಳನ್ನು ಕನ್ನಡಕ್ಕೆ ಈ ಹಿಂದೆ ನೀಡಿದೆ. ಈ ಜೋಡಿಗೆ ವಿಭಿನ್ನ ಎನ್ನಿಸುವಂತಹ ಸಂಗೀತ ಇಲ್ಲಿ ಮೂಡಿಬಂದಿರುವುದರಿಂದ ಬೇರೆಯದೇ ಗಾಯನ ಇಲ್ಲಿದೆ ಮತ್ತು ಚೆನ್ನಾಗಿದೆ. ಇಮ್ಮನ್ ಮತ್ತೊಮ್ಮೆ ಮೆಚ್ಚುಗೆ ಗಳಿಸುತ್ತಾರೆ.

Audio review of Kichcha Sudeep starer, K S Ravikumar directed Kotigobba 2

ಹಲೋ ಮಿಸ್ಟರ್
ಗಾಯಕರು: ನೀತಿ ಮೋಹನ್, ಸ್ನಿಗ್ಧ ಚಂದ್ರ

ರಾಕ್ ಎಂಡ್ ರೋಲ್ ಶೈಲಿಯ ಗೀತೆಗೆ ಸಕ್ಕತ್ತಾಗಿಯೇ ಸಂಗೀತ ನೀಡಿದ್ದಾರೆ ಇಮ್ಮನ್. ವಾದ್ಯ ಸಂಯೋಜನೆಗೆ ತಕ್ಕಂತೆ ಗಾಯನವೂ ಇರುವುದರಿಂದ ಸಾಹಿತ್ಯ ಹಿಂದಿನ ಬೆಂಚಿನಲ್ಲಿ ಕೂತು ತನ್ನ ಪಾಡಿಗೆ ಇರುವಂತೆ ಅನಿಸುತ್ತದೆ. ತೆರೆಯ ಮೇಲೆ ಹೇಗೆ ಮೂಡಿ ಬಂದಿರಬಹುದು ಎನ್ನುವುದು ಕುತೂಹಲ ಇದ್ದೇ ಇದೆ.

English summary
Audio review of Kichcha Sudeep, Nithya Menon starer, K S Ravikumar directed Kotigobba 2. Noted Musician D Imman has composed the songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada