ನೂರರ ಸಂಭ್ರಮದಲ್ಲಿ 'ಬೆಲ್ ಬಾಟಂ' ವಿಶೇಷ ಹಾಡು ಬಿಡುಗಡೆ
'ಬೆಲ್ ಬಾಟಂ' ಸಿನಿಮಾ ಈ ವರ್ಷ ನೂರು ದಿನ ಪೂರೈಸಿದ ಮೊದಲ ಚಿತ್ರವಾಗಿದೆ. ಈ ಸಂತಸದಲ್ಲಿ ಸಿನಿಮಾದ ಬಹು ಮುಖ್ಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
'ಆದಿ ಜ್ಯೋತಿ ಬನ್ಯೋ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಹೊರ ಬಂದಿದೆ. ಸಿನಿಮಾದ ಬಹುಮುಖ್ಯವಾಗಿರುವ ಈ ಹಾಡನ್ನು ಯೂಟ್ಯೂಬ್ ನಲ್ಲಿಯೂ ಈಗ ನೋಡಬಹುದಾಗಿದೆ. ಚಿತ್ರದ ದೊಡ್ಡ ತಿರುವು ಈ ಹಾಡಿನಲ್ಲಿ ನಡೆಯಲಿದ್ದು, ಈ ಕಾರಣ ಇದುವರೆಗೆ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿರಲಿಲ್ಲ.

ಅಂದಹಾಗೆ, ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಜನಪದ ಹಾಡನ್ನು ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಕಡಬಗೆರೆ ಮುನಿರಾಜು ಎಂಬ ಜನಪದ ಗಾಯಕ ಈ ಹಾಡನ್ನು ಹಾಡಿದ್ದಾರೆ.
ಸದ್ಯಕ್ಕೆ, ಯೂಟ್ಯೂಬ್ ನಲ್ಲಿ ಕಡಿಮೆ ಹಿಟ್ಸ್ ಸಿಕ್ಕಿದ್ದರೂ ಹಾಡು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಡಿನ ಅರ್ಥವನ್ನು ಕೊಂಡಾಡಿದ್ದಾರೆ. ರಂಗಭೂಮಿ ಹಾಗೂ ಜನಪದದ ಬಗ್ಗೆ ಆಗಾದ ಪ್ರೀತಿ ಹೊಂದಿರುವ ನಿರ್ದೇಶಕ ಜಯತೀರ್ಥ ಈ ಹಾಡನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದಾರೆ.
'ಬೆಲ್ ಬಾಟಂ' ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಟನೆಯ ಸಿನಿಮಾವಾಗಿದ್ದು, ಮೇ 24 ಕ್ಕೆ ಸರಿಯಾಗಿ ಚಿತ್ರ ನೂರು ದಿನ ಪೂರೈಸಿತ್ತು.


Click it and Unblock the Notifications











