»   » ರಚಿತಾರಾಮ್ ನಟನೆಯ 'ಭರ್ಜರಿ' ಚಿತ್ರದ 'ಪುಟ್ಟಗೌರಿ' ಹಾಡು ನೋಡಿ

ರಚಿತಾರಾಮ್ ನಟನೆಯ 'ಭರ್ಜರಿ' ಚಿತ್ರದ 'ಪುಟ್ಟಗೌರಿ' ಹಾಡು ನೋಡಿ

Written By:
Subscribe to Filmibeat Kannada

'ಭರ್ಜರಿ' ಸಿನಿಮಾದ ಟೈಟಲ್ ಸಾಂಗ್ ಈ ಹಿಂದೆ ರಿಲೀಸ್ ಆಗಿ ದೊಡ್ಡ ಮಟ್ಟದ ಹಿಟ್ ಆಗಿತ್ತು. ಈಗ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಹಾಡು ಕೂಡ ಈಗ ಯೂಟ್ಯೂಬ್ ನಲ್ಲಿ ಸಖತ್ ಹಿಟ್ಸ್ ಪಡೆಯುತ್ತಿದೆ.

ಚಿತ್ರದಲ್ಲಿ ರಚಿತಾರಾಮ್ ಪಾತ್ರದ ಹೆಸರು 'ಪುಟ್ಟಗೌರಿ'. ಈ 'ಪುಟ್ಟಗೌರಿ'ಯ ಸ್ಪೆಷಲ್ ಸಾಂಗ್ ಇದಾಗಿದೆ. ಧ್ರುವ ಸರ್ಜಾ ಮತ್ತು ರಚಿತಾ ರಾಮ್ ತುಂಬ ಸ್ಟೈಲಿಶ್ ಆಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಫಾರಿನ್ ಲೊಕೇಶನ್ ನಲ್ಲಿ ಆಕ್ಷನ್ ಪ್ರಿನ್ಸ್ ಮತ್ತು ಡಿಂಪಲ್ ಕ್ವೀನ್ ಮಿಂಚಿದ್ದಾರೆ. ಹಾಡಿನ ಮೇಕಿಂಗ್ ರಿಚ್ ಆಗಿದೆ. ಈ ಹಾಡು ನೋಡುಗರಿಗೆ 'ಬಹದ್ದೂರ್' ಚಿತ್ರದ 'ಆರಾಮಾಗಿರಿ ಸುಬ್ಬಲಕ್ಷ್ಮಿ..' ಹಾಡನ್ನು ನೆನಪಿಸುತ್ತದೆ.

'Bharjari' movie 2nd video song released

'ಭರ್ಜರಿ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ಧ್ವನಿ ಹಾಡಿನ ಹೈಲೆಟ್ ಆಗಿದೆ. ಸದ್ಯ ರಿಲೀಸ್ ಆಗಿರುವ ಈ ಹಾಡು ಯೂಟ್ಯೂಬ್ ನಲ್ಲಿ ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಅಂದಹಾಗೆ, 'ಭರ್ಜರಿ' ಸಿನಿಮಾ ಇದೇ ತಿಂಗಳು 15ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

English summary
Dhruva Sarja and Rachita Ram staring 'Bharjari' kannada movie 2nd video song released. the movie is directed by Chethan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada