»   » ಸಂಗೀತಗಾರರ ಸನ್ಮಾನದೊಂದಿಗೆ ಸಿ ಮ್ಯೂಸಿಕ್ ಲೋಕಾರ್ಪಣೆ

ಸಂಗೀತಗಾರರ ಸನ್ಮಾನದೊಂದಿಗೆ ಸಿ ಮ್ಯೂಸಿಕ್ ಲೋಕಾರ್ಪಣೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಳೆದ ಏಳು ವರ್ಷಗಳಿಂದ ಯಶಸ್ವಿಯಾಗಿ ಜನಮನವನ್ನು ತಲುಪುತ್ತಿರುವ ಚಿತ್ತಾರ ಏಳನೇ ವಸಂತಕ್ಕೆ ಕಾಲಿರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಹೊಸ ಕೊಡುಗೆಯನ್ನು ನೀಡಲು ಮುಂದಾಗಿದೆ.

  ಚಿತ್ತಾರ ಸಿನಿ ಮಾಸಿಕದ ಹೊಸ ಕೂಸು, ಹೊಸ ಕನಸು ಸೋಮವಾರ ಸಂಜೆ (ಸೆ.21) ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಲೋಕಾರ್ಪಣೆಯಾಗಲು ವೇದಿಕೆ ಸಜ್ಜಾಗಿದೆ. ಸಂಗೀತ ಲೋಕದ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಚಿತ್ರರಂಗದ ಗಣ್ಯರು, ಚಿತ್ರರಂಗದ ತಾರೆಯರು ಹಾಗೂ ಕಲಾಪೋಷಕರಾದ ಚಿತ್ರರಸಿಕರು ಸಾಕ್ಷಿಯಾಗಲಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ನಲ್ಲಿ ಸುದ್ದಿ ಓದಿರುತ್ತೀರಿ.[ಇನ್ನಷ್ಟು ಓದಿಗೆ]

  ಚಿತ್ತಾರ ಸಿನಿ ಮಾಸಿಕ ತನ್ನ ಎಲ್ಲಾ ಸಮಾರಂಭಗಳನ್ನು ಒಂದಿಲ್ಲೊಂದು ವಿಶೇಷತೆಯನ್ನು ನೀಡುತ್ತಲೇ ಬಂದಿದೆ. ಕನ್ನಡ ಚಿತ್ರರಂಗದ ಆಡಿಯೋ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಕನಸಿನೊಂದಿಗೆ ಈ ಯೋಜನೆಗೆ ಚಾಲನೆ ನೀಡುತ್ತಿದೆ.

  ಕನ್ನಡ ಸಂಗೀತಲೋಕಕ್ಕೆ ತಮ್ಮ ಅದ್ಭುತ ಸಂಗೀತದಿಂದ, ಅರ್ಥಪೂರ್ಣ ಸಾಹಿತ್ಯದಿಂದ, ಮಾಧುರ್ಯ ಭರಿತ ಹಾಡುಗಳಿಂದ ವಿಶೇಷ ಕೊಡುಗೆ ನೀಡಿದ ಆ ಮೂಲಕ ಕನ್ನಡ ಚಿತ್ರರಂಗದ ಸಂಗೀತ ಲೋಕಕ್ಕೆ ಮತ್ತಷ್ಟು ಹೊಳಪು ತಂದ ಸಾಧಕರನ್ನು ಚಿತ್ತಾರ ಸಿನಿ ಮಾಸಿಕ ಸಿ ಮ್ಯೂಸಿಕ್ ಉದ್ಘಾಟನೆಯ ಶುಭ ಸಂದರ್ಭದಲ್ಲಿ ತುಂಬು ಅಭಿಮಾನದಿಂದ ಸನ್ಮಾನಿಸುತ್ತಿದೆ.

  C Music to felicitate Musicians Lyricists Singers

  ಸನ್ಮಾನಿತರು:
  * ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ರಾಜೇಶ್ ರಾಮನಾಥ್. ವಿ. ಶ್ರೀಧರ್ ಸಂಭ್ರಮ್, ಅಭಿಮನ್ ರಾಯ್, ಅಜನೀಶ್ ಲೋಕನಾಥ್ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.

  * ಖ್ಯಾತ ಚಿತ್ರಸಾಹಿತಿಗಳಾದ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್, ಪ್ರೇಮಕವಿ ಕೆ. ಕಲ್ಯಾಣ್, ಪದಕಣಜ ಅರಸು ಅಂತಾರೆ ಅವರನ್ನು ಸನ್ಮಾನಿಸಲಾಗುತ್ತದೆ.

  * ಖ್ಯಾತ ಹಿನ್ನೆಲೆ ಗಾಯಕರಾದ ಎಲ್. ಎನ್. ಶಾಸ್ತ್ರಿ, ಅನುರಾಧ ಭಟ್, ಶಮಿತಾ ಮಲ್ನಾಡ್, ವಾಣಿ ಹರಿಕೃಷ್ಣ ಅವರನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.

  'ಹಾದಿ ಬೀದಿ ಲವ್ ಸ್ಟೋರಿ' ಚಿತ್ರದ ಹಾಡುಗಳು ಲೋಕಾರ್ಪಣೆ:ಇದೇ ವಿಶೇಷ ಸಂದರ್ಭದಲ್ಲಿಸಿ ಮ್ಯೂಸಿಕ್ ಸಂಸ್ಥೆಯಿಂದ ಹೊರಬರುತ್ತಿರುವ ಚೊಚ್ಚಲ ಆಡಿಯೋವಾಗಿ ಚಂದ್ರಶೇಖರ್ ಮಾವಿನಕುಂಟೆ ನಿರ್ದೇಶನದ, ಎಚ್. ಎಂ. ಸುಧೀರ್ ಗೌಡ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಹಾದಿ ಬೀದಿ ಲವ್ ಸ್ಟೋರಿ' ಚಿತ್ರದ ಹಾಡುಗಳು ಲೋಕಾರ್ಪಣೆಯಾಗಲಿದೆ.

  ಸಿ.ಆರ್. ಬಾಬಿ ಸಂಯೋಜನೆಯಲ್ಲಿ ಮೂಡಿ ಬಂದಿರುವ ಮನಮೋಹಕ ಗೀತೆಗಳು ನಿಮ್ಮ ಮೈ ಮನವನ್ನು ತಣಿಸಲಿದೆ. ಬನ್ನಿ, ಚಿತ್ರರಂಗದ ತಾರೆಗಳ ನಡುವಲ್ಲಿ ನಿಮ್ಮನ್ನು ರಂಜಿಸಲಿರುವ ಈ ಸಂಗೀತ ಸಂಜೆಯನ್ನು ಕಣ್ತುಂಬಿಕೊಳ್ಳಿ. ಸಿ ಮ್ಯೂಸಿಕ್ ಕಂಪನಿಯ ಫೇಸ್ ಬುಕ್ ಪುಟ ಇಲ್ಲಿದೆ.

  English summary
  Chittara Cine and Lifestyle Kannada Monthly magazine team has announced that it will be launching 'C' Music- a dedicated company for Kannada Songs. During the 'C' Music launching ceremony team will be felicitating noted Musicians Lyricists, Singers from Kannada Film Industry. The event scheduled to be held on 21st September 2015 at Chowdaiah Memorial hall, Bengaluru.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more