ಯೂಟ್ಯೂಬಲ್ಲಿ 'ವಿಜಲ್' ಹಾಕಿದ ಫಳಫಳ ಹಾಡು
ಚಿರಂಜೀವಿ ಸರ್ಜಾ, ಪ್ರಣೀತಾ, ಗುರುದತ್, ಗುರುಪ್ರಸಾದ್ ಮುಖ್ಯಭೂಮಿಕೆಯಲ್ಲಿರುವ ವಿಜಲ್ ಚಿತ್ರದಲ್ಲಿ ಮೂರು ಹಾಡುಗಳಿವೆ. ಅವುಗಳಲ್ಲಿ ಫಳಫಳ ಕಂಗಳ ತಿಳಿತಿಳಿ ಬೆಳದಿಂಗಳ ಹಾಡು ಯೂಟ್ಯೂಬ್ ನಲ್ಲಿ ನಿಧಾನಕ್ಕೆ ಟೇಕ್ ಆಫ್ ಆಗುತ್ತಿದೆ. (ವಿಡಿಯೋ ನೋಡಿ)
ಕವಿರಾಜ್ ಅವರ ಸಾಹಿತ್ಯ ಈ ಗೀತೆಗಿದ್ದು ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಹರ್ ಚರಣ್ ಹಾಗೂ ರಮ್ಯಾ ಅವರ ಸುಮಧುರ ಕಂಠದಲ್ಲಿ ಹಾಡು ಇಂಪಾಗಿದ್ದು ಕೇಳುಗರ ಹೃದಯವೀಣೆಯನ್ನು ಮೀಟುತ್ತಿದೆ.
ಹಾಡಿನ ಒಂದು ಚರಣ ಹೀಗಿದೆ... ಫಳಫಳ ಕಂಗಳ ತಿಳಿತಿಳಿ ಬೆಳದಿಂಗಳ ಹೃದಯಕೆ ಎರೆದಳು...ವಿಸ್ಮಿತನಾದೆ ನಾನು...ಕಿಲಕಿಲ ನಗುವಿನ ಘಮಘಮ ಪರಿಮಳ ಮನಸ್ಸಿಗೆ ಸುರಿದಳು...ಕಳೆದೆ ಹೋದೆನು ನಾನು...ಈ ಹಾಡು ನಿಧಾನಕ್ಕೆ ಕಿಕ್ ಕೊಡುತ್ತಿದ್ದು ಮುಂದೊಂದು ದಿನ ಹ್ಯಾಂಗೋವರ್ ಗೂ ಕಾರಣವಾಗಬಹುದೇನೋ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಕಡ್ಡಿಪುಡಿ ಚಿತ್ರದ ಬಳಿಕ ವಿಜಲ್ ಚಿತ್ರವನ್ನು ತೆರೆಗೆ ತರುವ ಸಿದ್ಧತೆಗಳು ನಡೆಯುತ್ತಿವೆ. ಚಿತ್ರ ನಿರ್ಮಾಣ ನಂತರದ ಕೆಲಸಗಳು ಭರದಿಂದ ಸಾಗುತ್ತಿವೆ. (ಏಜೆನ್ಸೀಸ್)


Click it and Unblock the Notifications












