»   » ಭಟ್ರ ಸಾಹಿತ್ಯಕ್ಕೆ ಗಾನ ಸುಧೆ ಹರಿಸಿದ ಹುಚ್ಚ ವೆಂಕಟ್.!

ಭಟ್ರ ಸಾಹಿತ್ಯಕ್ಕೆ ಗಾನ ಸುಧೆ ಹರಿಸಿದ ಹುಚ್ಚ ವೆಂಕಟ್.!

Posted By:
Subscribe to Filmibeat Kannada

ಅದೃಷ್ಟ ಅಂದ್ರೆ ಇದು ನೋಡಿ...ಒಂದ್ಕಾಲದಲ್ಲಿ 'ಹುಚ್ಚ ವೆಂಕಟ್' ಸಿನಿಮಾ ಅಂದ್ರೆ ಮೂಗು ಮುರಿದವರು ಅದೆಷ್ಟೋ ಜನ. ಈಗ ಅದೇ ಸಿನಿಮಾ ರೀ ರಿಲೀಸ್ ಆಗ್ತಿದೆ.

ಹಾಗೆ, ಹುಚ್ಚ ವೆಂಕಟ್ ''ಕಾವೇರಿ...'' ಅಂತ ಹಾಡು ಹಾಡ್ತಿದ್ರೆ ಎಷ್ಟು ಮಂದಿ ಮುಖ ಕಿವುಚಿದ್ರೋ ಬಿಟ್ರೋ...ಯೋಗರಾಜ್ ಭಟ್ರಿಗೆ ಮಾತ್ರ ಹುಚ್ಚ ವೆಂಕಟ್ ವಾಯ್ಸ್ ನಲ್ಲಿ ಮಿಂಚು ನೋಡಿದ ಅನುಭವ ಆಗಿರ್ಬೇಕು.! [ಅಲೌಕಿಕ ತಲೆಗೇರಿದಾಗ ನೀರಮಲು ಹಾಲಮಲು 'ಪರಪಂಚ' ಅಮಲು]

huccha-venkat

ಅದಕ್ಕೆ ತಮ್ಮ ನಿರ್ಮಾಣ 'ಪರಪಂಚ' ಸಿನಿಮಾದಲ್ಲಿನ ಹಾಡೊಂದನ್ನ ಹುಚ್ಚ ವೆಂಕಟ್ ರಿಂದ ಹಾಡಿಸಿದ್ದಾರೆ. ಸ್ವತಃ ಯೋಗರಾಜ್ ಭಟ್ರೇ ಬರೆದಿರುವ ''ಬಾಯ್ ಬಸಳೆ ಸೊಪ್ಪು..ಆಲೂಗಡ್ಡೆ ಈರುಳ್ಳಿ..ಮೈಸೂರು ಸ್ಯಾಂಡಲ್ ಸೋಪು..ಕೊಬ್ರಿ ಎಣ್ಣೆ ಕೊತ್ತಂಬ್ರಿ..'' ಹಾಡಿಗೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗಾನಸುಧೆ ಹರಿಸಿದ್ದಾರೆ.

huccha-venkat

ಇನ್ನೂ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, 'ಪರಪಂಚ' ಚಿತ್ರದ ಇದೇ ಹಾಡಲ್ಲಿ ಹುಚ್ಚ ವೆಂಕಟ್ ಕಾಣಿಸಿಕೊಳ್ತಿದ್ದಾರೆ.! ಸದ್ಯದಲ್ಲೇ 'ಪರಪಂಚ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. [ರಾಗಿಣಿ 'ಪರಪಂಚ'ದೊಳ್ ಏನೇನೈತಿ?]

ಕಿಶ್ ಜೋಶಿ ಈ ಚಿತ್ರದ ನಿರ್ದೇಶಕ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ರಾಗಿಣಿ ದ್ವಿವೇದಿ, ದಿಗಂತ್, ಯೋಗರಾಜ್ ಭಟ್ ಸೇರಿದಂತೆ ಹಲವರು 'ಪರಪಂಚ' ತಾರಾಬಳಗದಲ್ಲಿದ್ದಾರೆ.

English summary
YouTube Star Huccha Venkat turns singer for Yogaraj Bhat production Kannada Movie 'Parapancha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada