For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಕಾಳಿದಾಸ ಕನ್ನಡ ಮೇಷ್ಟ್ರು'!

  |

  ನವರಸ ನಾಯಕ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದೆ. ಟ್ರೈಲರ್ ಮಾತ್ರದಿಂದಲೇ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೆ ಈ ಚಿತ್ರದ ಟ್ರೈಲರ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದರು. ಇದರ ಜೊತೆಗೆ ಇದೀಗ ಚಿತ್ರದ ಪ್ರಪೋಷನಲ್ ಸಾಂಗ್ ರಿಲೀಸ್ ಆಗಿದೆ.

  'ಈ ಭೂಮಿ ಮೇಲೆ ಯಾರೂ ಮಕ್ಕಳಾಗಂತೂ ಹುಟ್ಟಲೇಬಾರದು..' ಎಂದು ಶುರುವಾಗುವ ಹಾಡು ಔಟ್ ಆಗಿದ್ದು, ಇದರಲ್ಲಿ ಕನ್ನಡ ಚಿತ್ರರಂಗದ ಹತ್ತೊಂಬತ್ತು ನಾಯಕಿಯರು ಕಾಣಿಸಿಕೊಂಡಿರುವುದು ಸೂಪರ್ ಸ್ಪೆಷಲ್.

  ಹೌದು, ಶಾಲೆಗೆ ಹೋಗುವ ಮಕ್ಕಳ ಗೋಳಿನ ಕುರಿತು ರಚಿಸಿರುವ ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ಹರಿಪ್ರಿಯಾ, ಅಮೂಲ್ಯ, ಶುಭಾ ಪೂಂಜಾ, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಸಂಯುಕ್ತ ಹೊರನಾಡು, ಹರ್ಷಿಕಾ ಪೂಣಚ್ಚ, ನಿಶ್ವಿಕಾ ನಾಯ್ಡು, ಸಿಂಧು ಲೋಕನಾಥ್, ಕೃಷಿ ತಾಪಂಡ, ವೈಭವಿ ಜೈಜಗದೀಶ್, ವೈನಿಧಿ ಜಗದೀಶ್, ವೈಸಿರಿ ಜಗದೀಶ್, ಅನುಪಮಾ ಗೌಡ, ಕಾರುಣ್ಯ ರಾಮ್, ರೂಪಿಕಾ, ದಿಶಾ ಪೂವಯ್ಯ ಸೇರಿದಂತೆ ಒಟ್ಟು 19 ನಾಯಕಿಯರು 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಪ್ರಮೋಷನ್ ಹಾಡಿನಲ್ಲಿದ್ದಾರೆ.

  ಅಂದ್ಹಾಗೆ, 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಚಿತ್ರ ಸಾಹಿತಿ ಕವಿರಾಜ್. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಬಳಿಕ ಕವಿರಾಜ್ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಈ ಚಿತ್ರದಲ್ಲೇ. ಕವಿರಾಜ್ ಕರೆಗೆ ಓಗೊಟ್ಟು ಈ ಸಿನಿಮಾದ ಪ್ರಮೋಷನಲ್ ಹಾಡಿನಲ್ಲಿ 19 ನಾಯಕಿಯರು ಕಾಣಿಸಿಕೊಂಡಿದ್ದಾರೆ.

  'ಕಾಳಿದಾಸ ಕನ್ನಡ ಮೇಷ್ಟ್ರು' ಶಾಲೆ ಸೇರಿದ 21 ನಟಿಯರು'ಕಾಳಿದಾಸ ಕನ್ನಡ ಮೇಷ್ಟ್ರು' ಶಾಲೆ ಸೇರಿದ 21 ನಟಿಯರು

  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದೇ ಹಾಡಿನಲ್ಲಿ 19 ನಾಯಕಿಯರು ಕಾಣಿಸಿಕೊಂಡಿರುವುದು ಇದೇ ಮೊದಲು. ಅಲ್ಲಿಗೆ, ಸ್ಯಾಂಡಲ್ ವುಡ್ ಹಿಸ್ಟ್ರಿಯಲ್ಲಿ 'ಕಾಳಿದಾಸ ಕನ್ನಡ ಮೇಷ್ಟ್ರು' ಹೊಸ ದಾಖಲೆ ಬರೆದಿದೆ.

  ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹಾಸ್ಯಮಯವಾಗಿ ಹೇಳಲು ಹೊರಟಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿ ಜಗ್ಗೇಶ್ ಜೊತೆಗೆ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ನವೆಂಬರ್ 22 ರಂದು ಈ ಚಿತ್ರ ತೆರೆಗೆ ಬರಲಿದೆ.

  English summary
  Kalidasa Kannada Meshtru song features 19 heroines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X