»   »  ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಹೊಸ ದಾಖಲೆ

ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಹೊಸ ದಾಖಲೆ

Posted By:
Subscribe to Filmibeat Kannada

ಕೇವಲ ಒಂಬತ್ತೇ ದಿನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್' ಚಿತ್ರ ಹೊಸ ದಾಖಲೆಗೆ ಕಾರಣವಾಗಿದೆ. ಈ ಚಿತ್ರದ ಪ್ಲಾಟಿನಂ ಡಿಸ್ಕ್ ಬಿಡುಗಡೆಯಾಗಿದ್ದು ಚಿತ್ರತಂಡ ಸಂಭ್ರಮದಲ್ಲಿ ತೇಲಾಡುತ್ತಿದೆ.

ಕರ್ನಾಟಕದ ಹಂಗಾಮಿ ರಾಜ್ಯಪಾಲ ರೋಸಯ್ಯ ಅವರು ಪ್ಲಾಟಿನಂ ಡಿಸ್ಕ್ ಬುಧವಾರ (ಜು.9) ಬಿಡುಗಡೆ ಮಾಡಿದರು. ಲಹರಿ ಕಂಪನಿಯ ವೇಲು ಈ ಚಿತ್ರದ ಸಿಡಿಗಳು ಬಿಸಿಬಿಸಿ ಇಡ್ಲಿ ತರಹ ಬಿಕರಿಯಾಗುತ್ತಿರುವ ಬಗ್ಗೆ, ಆಡಿಯೋಗಳಿಗೆ ಮಾರ್ಕೆಟ್ ಇಲ್ಲ ಎನ್ನುವವರಿಗೆ 'ಪವರ್' ಹೊಸ ಉತ್ತರ ಎಂದರು.

Kannada movie Power Star Platinam Disc released

ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾದ ಬಳಿಕ ಪ್ಲಾಟಿನಂ ಡಿಸ್ಕ್ ಬಿಡುಗಡೆಯಾಗುವುದು ಪರಿಪಾಠ. ಆದರೆ ಪವರ್ ಚಿತ್ರ ಬಿಡುಗಡೆಗೂ ಮುನ್ನವೇ ಹೊಸ ದಾಖಲೆಗೆ ನಾಂದಿಹಾಡಿದೆ. ಈಗಾಗಲೆ ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ 1,20000 ಸಂಖ್ಯೆಯಲ್ಲಿ ಡೌನ್ ಲೋಡ್ ಆಗಿದೆ.

ಸಿಡಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದ್ದು ಹತ್ತಿರ ಹತ್ತಿರ ಮೂವತ್ತು ಸಾವಿರದಷ್ಟಾಗಿದೆ ಎನ್ನುತ್ತಾರೆ ಲಹರಿ ವೇಲು. ಚಿತ್ರದ ಧ್ವನಿಮುದ್ರಿಕೆಯನ್ನು ಬಳ್ಳಾರಿಯಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು.

ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ (ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. (ಏಜೆನ್ಸೀಸ್)

English summary
Power Star Puneeth Rajkumar upcoming movie 'Power ***' creates new record before release. Platinum disc released by Rosaiah, Governor of Karnataka. SS Thaman composed the music. 
Please Wait while comments are loading...