»   » 'ಶಿವಯೋಗಿ ಪುಟ್ಟಯ್ಯಜ್ಜ' ಧ್ವನಿ ಸುರುಳಿ ಬಿಡುಗಡೆ

'ಶಿವಯೋಗಿ ಪುಟ್ಟಯ್ಯಜ್ಜ' ಧ್ವನಿ ಸುರುಳಿ ಬಿಡುಗಡೆ

Posted By:
Subscribe to Filmibeat Kannada

ಗದುಗಿನ ವೀರೇಶ್ವರ ಪುಣ್ಯಾಶ್ರಮ, ಗಾನಕೋಗಿಲೆ ಶ್ರೀ.ಪುಟ್ಟರಾಜ ಗವಾಯಿಗಳು ಬೆಳೆಸಿದ ಈ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಕೇವಲ 5 ತಿಂಗಳ ಮಗುವಿದ್ದಾಗಲೇ ತನ್ನ ಕಣ್ಣುಗಳನ್ನು ಕಳೆದುಕೊಂಡು ಅಂಧರಾಗಿದ್ದ ಪುಟ್ಟಯ್ಯಜ್ಜರ ಈ ಸಂಸ್ಥೆಯಲ್ಲಿ ಕಲಿತ ನೂರಾರು ಪ್ರತಿಭೆಗಳು ದೇಶದುದ್ದಗಲಕ್ಕೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಂಥ ಮಹಾಪುರುಷರ ಜೀವನಕಥೆ ಈಗ ಬೆಳ್ಳಿ ತೆರೆಯ ಮೇಲೆ ಮೂಡಿಬರುತ್ತಿರುವುದು ಎಲ್ಲಿರಿಗೂ ಗೊತ್ತಿರುವ ವಿಷಯ. ಹಿರಿಯ ನಟ ಉದಯ್‍ಕುಮಾರ್ ಅವರ ಮೊಮ್ಮಗಳಾದ ಹಂಸ ವಿಜೇತ ನಿರ್ದೇಶನದಲ್ಲಿ ತಯಾರಾಗಿರುವ 'ಶಿವಯೋಗಿ ಪುಟ್ಟಯ್ಯಜ್ಜ' ಹೆಸರಿನ ಈ ಚಿತ್ರದಲ್ಲಿ ನಟ ವಿಜಯರಾಘವೇಂದ್ರ ಪುಟ್ಟರಾಜರಾಗಿ ಅಭಿನಯಿಸಿದ್ದಾರೆ. ದಶಕಗಳ ಹಿಂದೆ ತೆರೆಕಂಡ ಪಂಚಾಕ್ಷರಿ ಗವಾಯಿಗಳು ಚಿತ್ರದಲ್ಲಿಯೂ ಅಭಿನಯಿಸಿದ್ದರು. ['ಶಿವಯೋಗಿ ಪುಟ್ಟಯ್ಯಜ್ಜ'ನಾಗಿ ವಿಜಯರಾಘವೇಂದ್ರ]


ಅಮರ ಪ್ರಿಯರ ಸಂಗೀತ ಸಂಯೋಜನೆಯಲ್ಲಿರುವ ಈ ಚಿತ್ರದ ಆರು ಸುಮಧುರ ಗೀತೆಗಳುಳ್ಳ ಧ್ವನಿಸುರುಳಿ ಇತ್ತೀಚೆಗೆ ಆನಂದ್ ಆಡಿಯೋ ಸಂಸ್ಥೆ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂರು ಹಾಡುಗಳಿಗೆ ಪುಟ್ಟಯ್ಯಜ್ಜರ ಸಾಹಿತ್ಯ, ಒಂದು ಹಾಡಿಗೆ ಶಿಶುನಾಳ ಶರೀಫರ ಸಾಹಿತ್ಯ ಬಳಸಿಕೊಳ್ಳಲಾಗಿದ್ದು ಸಂಗೀತ ನಿರ್ದೇಶಕ ಅಮರ ಪ್ರಿಯ ಅವರು 3 ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

2014 ಅವರ ಜನ್ಮ ಶತಮಾನೋತ್ಸವ ವರ್ಷ ಇದರ ಸವಿನೆನಪಿಗಾಗಿ ಗವಾಯಿಗಳ ಸಾಧನೆ, ಸೇವೆ ಹಾಗೂ ಜೀವನ ಚರಿತ್ರೆಯನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂಬ ಉದ್ದೇಶದಿಂದ ನಿರ್ಮಾಪಕರಾದ ಶ್ಯಾಮ್ ಮುಕುಂದ ನವಲೆ ಈ ಚಿತ್ರದ ನಿರ್ಮಾಪಕರು. [ಗದಗದಲ್ಲಿ ಪುಟ್ಟರಾಜರ ಶತಮಾನೋತ್ಸವ ಸಮಾರಂಭ]

ಗಾನಯೋಗಿ ಪಂಚಾಕ್ಷರ ಗವಾಯಿಗಳ ಪರಮ ಶಿಷ್ಯರಾದ ಪುಟ್ಟಯ್ಯಜ್ಜರು ಉತ್ತಮ ಕವಿ ಹಾಗೂ ಹಾಡುಗಾರರಾಗಿದ್ದರಲ್ಲದೆ ಸಾರಂಗಿ, ಹಾರ್ಮೋನಿಯಂ, ಪಿಟೀಲು ಹಾಗೂ ತಬಲಾದಲ್ಲಿ ಪರಿಣತಿ ಹೊಂದಿದ್ದಾರೆ. ಮೇ ಅಂತ್ಯದಲ್ಲಿ ಅಥವಾ ಜೂನ್ ಮೊದಲವಾರ ಈ ಚಿತ್ರ ಬಿಡುಗಡೆಯಾಗಲಿದೆ.

ಉಮೇಶ ಪುರಾಣಿಕ್ ಕಥೆ - ಚಿತ್ರಕಥೆ ಬರೆದಿದ್ದು ಸತೀಶ್‍ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ವಿಜಯ ರಾಘವೇಂದ್ರ, ಶ್ರುತಿ, ಅಭಿಜಿತ್, ಶಶಿಕುಮಾರ್, ಭವ್ಯಶ್ರೀ ರೈ, ಅನುಪ್ರಭಾಕರ್, ಉಮೇಶ್ ನವಲೆ, ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actor Vijay Raghavendra lead Kannada movie 'Shivayogi Puttaiahjja', which is based on the life and times of Puttaraj Gawai, audio released. Vijay plays Pandit Puttaraj Gawai in the movie directed by Late actor Vishwavijetha's daughter Hamsavijetha. 
Please Wait while comments are loading...