For Quick Alerts
  ALLOW NOTIFICATIONS  
  For Daily Alerts

  "ಮಡದಿಯೋ ಗೆಳತಿಯೋ ಏನೆಂದು ಕರೆಯಲಿ ನಿನ್ನ": ಪತ್ನಿ ಬರ್ತಡೇಗೆ ಸುದೀಪ್ ಭರ್ಜರಿ ಗಿಫ್ಟ್

  |

  ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರಿಯಾ ಬರ್ತಡೇ ಪ್ರಯುಕ್ತ ಕಿಚ್ಚನ ಅಭಿಮಾನಿಗಳ ಕಾಮನ್ ಡಿಪಿ ಸಿದ್ಧ ಮಾಡಿದ್ದು, ಮಲಯಾಳಂ ನಟಿ ಮಂಜು ವಾರಿಯರ್ ಈ ಡಿಪಿ ರಿಲೀಸ್ ಮಾಡಿದ್ದರು. ಕನ್ನಡದ ಹಲವು ಕಲಾವಿದರು ಪ್ರಿಯಾ ಅವರಿಗೆ ವಿಶ್ ಶುಭಕೋರಿದ್ದಾರೆ.

  ಪ್ರತಿವರ್ಷವೂ ಪ್ರಿಯಾ ಅವರ ಹುಟ್ಟುಹಬ್ಬಕ್ಕೆ ಹೃದಯಪೂರ್ವಕವಾಗಿ ಶುಭಕೋರುತ್ತಿದ್ದ ನಟ ಸುದೀಪ್, ಈ ಸಲ ಭರ್ಜರಿ ಉಡುಗೊರೆ ನೀಡಿದ್ದಾರೆ. ಬಹುಶಃ ಇಷ್ಟು ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದು ಬಹಳ ವಿಶೇಷ ಎನಿಸಿಕೊಂಡಿರಬಹುದು.

  ಪ್ರಿಯಾ ಬರ್ತಡೇಗಾಗಿ ಮಲಯಾಳಂ ನಟಿ ತೆಗೆದುಕೊಂಡ ತೊಂದರೆಗೆ ಧನ್ಯವಾದ ಹೇಳಿದ ಸುದೀಪ್

  ಪ್ರಿಯಾ ಅವರ ಹುಟ್ಟುಹಬ್ಬಕ್ಕಾಗಿ ಸುದೀಪ್ ಹಾಡೊಂದನ್ನು ತಯಾರಿಸಿ ಗಿಫ್ಟ್ ಮಾಡಿದ್ದಾರೆ. 'ಮಡದಿಯೋ ಗೆಳತಿಯೋ ಏನೆಂದು ಕರೆಯಲಿ ನಿನ್ನ' ಎಂಬ ಹಾಡನ್ನು ರಚಿಸಿ ಯ್ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದಾರೆ.

  ''ನಾನು ಹಕ್ಕಿಯಾಗಿ ಹಾರಾಡಿದೆ, ಆದರೆ ನೀನು ಹಾರಲಿಲ್ಲ, ಸದಾ ನನ್ನ ಜೊತೆಯಲ್ಲಿಯೇ ಇದ್ದೆ, ಆಕಾಶದಂತೆ'' ಎಂದು ಪ್ರಿಯಾ ಅವರ ಬಗ್ಗೆ ಸುದೀಪ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  ಕಿಚ್ಚ ಕ್ರಿಯೇಷನ್ಸ್ ಯ್ಯೂಟ್ಯೂಬ್ ಚಾನಲ್‌ನಲ್ಲಿ ಪ್ರಿಯಾ ಸುದೀಪ್ ಅವರ ಬರ್ತಡೇ ಹಾಡು ಅಪ್‌ಲೌಡ್ ಆಗಿದ್ದು, ಹಾಡಿ ಕೇಳಿದ ಸುದೀಪ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಪತ್ನಿಗೆ ಇದಕ್ಕಿಂತ ಸರ್ಪ್ರೈಸ್, ಉಡುಗೊರೆ ನೀಡಲು ಸಾಧ್ಯವಿಲ್ಲ ಎಂದು ಕಿಚ್ಚನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಕಿಚ್ಚ ಸುದೀಪ್ ಮತ್ತು ಪ್ರಿಯಾ 2001ರ ಅಕ್ಟೋಬರ್ 18 ರಂದು ವಿವಾಹವಾಗಿದ್ದರು. ಈ ದಂಪತಿಗೆ ಸಾನ್ವಿ ಎಂಬ ಹೆಣ್ಣು ಮಗಳಿದ್ದಾಳೆ.

  English summary
  Kannada actor Kichcha Sudeep Dedicated Special Song to His Wife Priya's Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X