»   » 'ವಾಲೆಂಟೈನ್ಸ್ ಡೇ' ಪ್ರಯುಕ್ತ 'ಮನಸು ಮಲ್ಲಿಗೆ' ಆಡಿಯೋ ಬಿಡುಗಡೆ

'ವಾಲೆಂಟೈನ್ಸ್ ಡೇ' ಪ್ರಯುಕ್ತ 'ಮನಸು ಮಲ್ಲಿಗೆ' ಆಡಿಯೋ ಬಿಡುಗಡೆ

Posted By:
Subscribe to Filmibeat Kannada

ಮರಾಠಿ ಭಾಷೆಯ ಬ್ಲಾಕ್ ಬಸ್ಟರ್ 'ಸೈರಾಟ್' ಚಿತ್ರದ ರೀಮೇಕ್ ಆಗಿರುವ 'ಮನಸು ಮಲ್ಲಿಗೆ' ಆಡಿಯೋ ವಾಲೆಂಟೈನ್ಸ್ ಡೇ ಪ್ರಯುಕ್ತ (ಫೆಬ್ರವರಿ 14) ಬಿಡುಗಡೆ ಆಗಲಿದೆ.

ಹೇಳಿ ಕೇಳಿ 'ಮನಸು ಮಲ್ಲಿಗೆ' ನವಿರಾದ ಪ್ರೇಮಕಥೆ ಹೊಂದಿರುವ ಸಿನಿಮಾ. ಅಂದ್ಮೇಲೆ, ಚಿತ್ರದ ಹಾಡುಗಳು ಕೂಡ ಮಧುರವಾಗಿ ಇರಲೇಬೇಕು. ಅನುಭವಿ ಗೀತರಚನೆಕಾರರಾದ ಕೆ.ಕಲ್ಯಾಣ್, ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ 'ಮನಸು ಮಲ್ಲಿಗೆ' ಚಿತ್ರಕ್ಕೆ ಅಜಯ್-ಅತುಲ್ ಸಂಗೀತ ಸಂಯೋಜಿಸಿದ್ದಾರೆ.

manasu-mallige-audio-release-on-february-14th

ಹಾಗ್ನೋಡಿದ್ರೆ, ವಾಲೆಂಟೈನ್ಸ್ ಡೇ ಪ್ರಯುಕ್ತ 'ಮನಸು ಮಲ್ಲಿಗೆ' ಬಿಡುಗಡೆ ಆಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.[ಫೆಬ್ರವರಿ ತಿಂಗಳಲ್ಲಿ 'ಸೈರಾಟ್' ರೀಮೇಕ್ 'ಮನಸು ಮಲ್ಲಿಗೆ' ಬಿಡುಗಡೆ]

ಕಲಾಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ ನಿರ್ಮಿಸುತ್ತಿರುವ ಸಿನಿಮಾ 'ಮನಸು ಮಲ್ಲಿಗೆ'. ಈ ಚಿತ್ರದಲ್ಲಿ ನಿಶಾಂತ್ ನಾಯಕನಾಗಿ ಅಭಿನಯಿಸಿದ್ದರೆ, ನಾಯಕಿ ಪಾತ್ರದಲ್ಲಿ ರಿಂಕು ರಾಜಗುರು ಕಾಣಿಸಿಕೊಂಡಿದ್ದಾರೆ.

English summary
S.Narayan directorial Kannada Movie 'Manasu Mallige' Audio Release is scheduled on February 14th. 'Manasu Mallige' is the remake of Marathi Hit Film 'Sairat'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada