For Quick Alerts
  ALLOW NOTIFICATIONS  
  For Daily Alerts

  'ಬೆಂಗಳೂರು ಗಣೇಶ ಉತ್ಸವ'ದಲ್ಲಿ ಅಣ್ಣಾವ್ರ ಹಾಡು ಹಾಡಿದ ಸಂಸದ ತೇಜಸ್ವಿ ಸೂರ್ಯ

  |

  ಕೊರೊನಾ ವೈರಸ್ ಭೀತಿ ಇಲ್ಲದೇ ಹೋಗಿದ್ದರೇ ಇಷ್ಟೊತ್ತಿಗೆ ಸಿಲಿಕಾನ್ ಸಿಟಿ ಜನರು 'ಬೆಂಗಳೂರು ಗಣೇಶ ಉತ್ಸವ' ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಆದರೆ, ಈ ಸಲ ಬೆಂಗಳೂರು ಗಣೇಶ ಉತ್ಸವ ಸಾರ್ವಜನಿವಾಗಿ ನಡೆಸಲು ಸಾಧ್ಯವಾಗಿಲ್ಲ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಹಾಗಂತ, ಕಾರ್ಯಕ್ರಮವನ್ನು ರದ್ದು ಮಾಡಿಲ್ಲ. ಆನ್‌ಲೈನ್ ಮೂಲಕ ಉತ್ಸವ ನಡೆಸಲಾಯಿತು. ಒಟ್ಟು 11 ದಿನಗಳ ಉತ್ಸವದಲ್ಲಿ 10ನೇ ದಿನ ಗಾಯಕ ವಿಜಯ್ ಪ್ರಕಾಶ್ ಸಾರಥ್ಯದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

  ಗಣೇಶ ಉತ್ಸವ: 10ನೇ ದಿನ ಗಾಯಕ ವಿಜಯ್ ಪ್ರಕಾಶ್ ಸಂಗೀತ ಸಂಜೆ

  ಆಗಸ್ಟ್ 31ರ ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅತಿಥಿಯಾಗಿ ವೇದಿಕೆ ಹಂಚಿಕೊಂಡ ತೇಜಸ್ವಿ ಸೂರ್ಯ, ಡಾ ರಾಜ್ ಕುಮಾರ್ ಅವರ ಹಾಡೊಂದನ್ನು ಹಾಡುವ ಮೂಲಕ ಸಂಗೀತ ಪ್ರಿಯರ ಮನ ಗೆದ್ದರು.

  ಪ್ರೇಮದ ಕಾಣಿಕೆ ಚಿತ್ರದ "ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ.. ಏಕೆ ಕನಸು ಕಾಣುವೆ..ನಿಧಾನಿಸು ... ನಿಧಾನಿಸು..'' ಹಾಡನ್ನು ಗಾಯಕ ವಿಜಯ ಪ್ರಕಾಶ್ ಜೊತೆ ಸೇರಿ ತೇಜಸ್ವಿ ಸೂರ್ಯ ಹಾಡಿದ್ದು ವಿಶೇಷವಾಗಿತ್ತು.

  ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸಂತಸ ಹಂಚಿಕೊಂಡಿರುವ ಸಂಸದ ''ಬೆಂಗಳೂರು ಗಣೇಶ ಉತ್ಸವ"ದ ಕಾರ್ಯಕ್ರಮಗಳನ್ನು ವೀಕ್ಷಿಸಲು ಒಂದೊಮ್ಮೆ ಹಾತೊರೆಯುತ್ತಿದ್ದ ನನಗೆ, ಇಂದು ಇದೇ ವೇದಿಕೆಯ ವರ್ಚುವಲ್ ಸಂಚಿಕೆಯಲ್ಲಿ ಸುಪ್ರಸಿದ್ಧ ಗಾಯಕ ಶ್ರೀ ವಿಜಯ್ ಪ್ರಕಾಶ್ ರೊಂದಿಗೆ ಧ್ವನಿಗೂಡಿಸಲು ಅವಕಾಶ ಸಿಕ್ಕಿದ್ದು ವಿಶೇಷ'' ಎಂದಿದ್ದಾರೆ.

  ಸೆಪ್ಟೆಂಬರ್ 1ರ ತನಕ ಜರುಗಲಿರುವ ಬೆಂಗಳೂರು ಗಣೇಶ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಬುಕ್ , ಯೂ ಟ್ಯೂಬ್ , ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ಮೂಡಿ ಬರುತ್ತಿದೆ.

  English summary
  Bengaluru south MP Tejasvi surya sang one of kannada most evergreen song 'Baanigondu Elle Ellide' from the movie Premada Kanike.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X