»   » ಹುಡುಗಿಯರ ಮನ ಗೆದ್ದ 'ಮುಗುಳುನಗೆ' ಚಿತ್ರದ ಈ ಹಾಡು

ಹುಡುಗಿಯರ ಮನ ಗೆದ್ದ 'ಮುಗುಳುನಗೆ' ಚಿತ್ರದ ಈ ಹಾಡು

Posted By:
Subscribe to Filmibeat Kannada

'ಮುಗುಳುನಗೆ' ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ರಿಲೀಸ್ ಆಗಿದೆ. ಈ ಪೈಕಿ 'ನಿನ್ನ ಸ್ನೇಹದಿಂದ...' ಹಾಡು ಎಲ್ಲರಿಗೂ ಬಹಳ ಇಷ್ಟ ಆಗಿತ್ತು. ಇದೀಗ ಇದೇ ಹಾಡಿನ ವಿಡಿಯೋ ಅವತರಣಿಕೆ ರಿಲೀಸ್ ಆಗಿದೆ.

ಇಂದು ರಿಲೀಸ್ ಆಗಲಿದೆ 'ಮುಗುಳುನಗೆ' ಟ್ರೇಲರ್

ಜೊತೆಗೆ ಈ ಹಾಡು ಬಿಡುಗಡೆಯಾದ ಎರಡೇ ದಿನಗಳಲ್ಲಿ ಯೂ ಟ್ಯೂಬ್ ನಲ್ಲಿ 2 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಈ ಹಿಂದೆ ಬರಿ ಆಡಿಯೋ ಕೇಳಿದ್ದ ಪ್ರೇಕ್ಷಕರಿಗೆ ವಿಡಿಯೋ ನೋಡಿದ ಮೇಲೆ ಹಾಡು ಮತ್ತಷ್ಟು ಇಷ್ಟ ಆಗಿದೆ.

'Mugulu Nage' movie video song released.

ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡು ಹುಡುಗಿಯರಿಗೆ ತುಂಬ ಹತ್ತಿರವಾಗುವಂತಿದೆ. ಹಾಡಿನಲ್ಲಿ ಗಣೇಶ್ ಮತ್ತು ನಟಿ ಆಶಿಕಾ ಇಬ್ಬರ ಲುಕ್ ತುಂಬ ಮುದ್ದಾಗಿದೆ. ಜೊತೆಗೆ ಹಾಡಿನಲ್ಲಿ ಇಬ್ಬರ ಎಕ್ಸ್‌ಪ್ರೆಶನ್ ಮತ್ತೆ ಮತ್ತೆ ಹಾಡನ್ನು ನೋಡಬೇಕೆನಿಸುವಂತೆ ಮಾಡುತ್ತದೆ.

'ನಿನ್ನ ಸ್ನೇಹದಿಂದ...' ಹಾಡು ಸಖತ್ ಮೆಲೋಡಿ ಆಗಿದೆ. ಸಿಂಪಲ್ ಪದಗಳನ್ನು ಬಳಸಿ ಸೊಗಸಾದ ಹಾಡನ್ನು ಭಟ್ಟರು ಬರೆದಿದ್ದಾರೆ. ಹರಿಕೃಷ್ಣ ವಿಭಿನ್ನವಾದ ಸಂಗೀತ ಹಾಡಿನಲ್ಲಿ ಗಮನ ಸೆಳೆಯುತ್ತದೆ. 'ಮುಗುಳು ನಗೆ' ಚಿತ್ರದ ಈ ಮುದ್ದಾದ ಹಾಡನ್ನು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Golden star Ganesh starring 'Mugulu Nage' mannada movie video song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada