»   » 'ಕನ್ನಡವೇ ನಿತ್ಯ' ರಘು ದೀಕ್ಷಿತ್ ರಿಂದ ಆರ್ ಜೆಗೆ ಪಾಠ

'ಕನ್ನಡವೇ ನಿತ್ಯ' ರಘು ದೀಕ್ಷಿತ್ ರಿಂದ ಆರ್ ಜೆಗೆ ಪಾಠ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬೆಂಗಳೂರಿನ ಎಫ್ ಎಂ ರೇಡಿಯೋ ವಾಹಿನಿಗಳು ಅಲ್ಲಿನ ಆರ್ ಜೆ ಗಳ ಅದ್ಭುತ ಕನ್ನಡದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರು ಹೇಗಾದರೂ ಮಾತಾಡಿಕೊಳ್ಳಲಿ, ಅದರೆ, ಅತಿಥಿಗಳಿಗೂ ಭಾಷೆಯ ಬೇಲಿ ಹಾಕಲು ಹೊರಟರೆ ಹೇಗೆ? ಇಂಥ ಪರಿಸ್ಥಿತಿ ಎದುರಿಸಿದ ಕನ್ನಡದ ಹೆಮ್ಮೆಯ ಗಾಯಕ, ಸಂಗೀತಗಾರ ರಘು ದೀಕ್ಷಿತ್ ಅವರು ಸಕತ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ರೆಡ್ ಎಫ್ ಎಂ ವಾಹಿನಿಯ ರೇಡಿಯೋ ಜಾಕಿಯೊಬ್ಬರು ಥೇಮ್ಸ್ ನದಿ ನೀರು ಕುಡಿಯೋಣ ಬನ್ನಿ ಎಂದಿದ್ದಾರೆ. ಅದಕ್ಕೆ ರಘು ಅವರು 'ಕಾವೇರಿ ನಮ್ಮಮ್ಮ' 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಎಂದು ಸರಿಯಾಗಿ ಜಾಡಿಸಿದ್ದಾರೆ. ಬೆಂಗಳೂರಿನ ರೇಡಿಯೋ ಸ್ಟೇಷನ್ ಎಂದ್ರೆ ಇಂಗ್ಲೀಷ್ ನಲ್ಲೇ ಮಾತನಾಡಬೇಕು ಎಂದು ಹೇಳಿದರೆ ಯಾವನ್ ಕೇಳ್ತಾನೆ, ಮುಚ್ಕೊಂಡ್ ಹೋಗು ಎಂದು ಹೇಳಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದಿ ಚಿತ್ರ ಬೇವಕೂಫಿಯಾ ನಂತರ ರಘು ದೀಕ್ಷಿತ್ ಅವರು ತೆಲುಗಿನಲ್ಲಿ ಮಹೇಶ್ ಬಾಬು ನಟನೆಯ ಶ್ರೀಮಂತುಡು ಚಿತ್ರದಲ್ಲಿ ಒಂದು ಹಾಡು ಹಾಡಿದ್ದಾರೆ. ಇತ್ತೀಚೆಗೆ ರಂಗಿತರಂಗ ನೋಡಿ ಮೆಚ್ಚಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿರುವ ರಘು ಅವರ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ...

ಸೈಕೋ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ದೀಕ್ಷಿತ್

ಕನ್ನಡದ ಸೈಕೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ದೀಕ್ಷಿತ್ ಅವರು ಕೋಟೆ, ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿಂದಿಯಲ್ಲಿ ಬೇವಕೂಫಿಯಾನ್ ನಂತರ ಈಗ ತೆಲುಗಿನಲ್ಲಿ ಗಾಯಕರಾಗಿ ದೇವಿಶ್ರೀ ಪ್ರಸಾದ್ ಸಂಯೋಜನೆಯಲ್ಲಿ ಮಹೇಶ್ ಬಾಬು ಅವರಿಗೆ ದನಿಯಾಗಿದ್ದಾರೆ. ಇದಲ್ಲದೆ ದೇಶ ವಿದೇಶಗಳಲ್ಲಿ ಸಂಗೀತ ಸಂಜೆಗಳನ್ನು ನಡೆಸಿಕೊಡುತ್ತಿದ್ದಾರೆ.

ಆರ್ ಜೆಗೆ ತಕ್ಕ ಉತ್ತರ ಕೊಟ್ಟ ದೀಕ್ಷಿತ್

ರೆಡ್ ಎಫ್ ಎಂ ಆರ್ ಜೆ ತಕ್ಕ ಉತ್ತರ ಕೊಟ್ಟ ದೀಕ್ಷಿತ್ ಅವರು ಟ್ವೀಟ್ ಮಾಡಿದ್ದು ಹೀಗೆ..

ಭಾಷೆ ಜೊತೆ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ

ನಾನು ಯಾವ ಭಾಷೆಯಲ್ಲಿ ಸಂಭಾಷಿಸಬೇಕು ಕನ್ನಡ/ಇಂಗ್ಲೀಷ್/ ಹಿಂದಿ..ಇತ್ಯಾದಿ ಎಂಬುದಕ್ಕಿಂತ ನನ್ನ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ. ಹೀಗಾಗಿ ನನಗೆ ಕಿರಿಕಿರಿಯಾಯಿತು ಎಂದ ದೀಕ್ಷಿತ್.

ಆರ್ ಜೆ ಏನ್ಮಾಡ್ತಾರೆ ಬಿಡಿ

ಆರ್ ಜೆ ಏನ್ಮಾಡ್ತಾರೆ ಬಿಡಿ, ಪೋಗ್ರಾಂ ಡೈರೆಕ್ಟರ್ ನ ಹಿಡ್ಕೊಂಡು ತದುಕಬೇಕು ಎಂದು ಪ್ರತಿಕ್ರಿಯಿಸಿದ ಅಭಿಮಾನಿಗಳು.

ಇಂಥವರನ್ನು ಬೆಂಡ್ ಎತ್ತಬೇಕು

ಇಂಥವರನ್ನು ಬೆಂಡ್ ಎತ್ತಬೇಕು, ನಿಮ್ಮ ಪ್ರತಿಕ್ರಿಯೆ ಸೂಪರ್ ಎಂದ ಫ್ಯಾನ್ಸ್.

English summary
Musician, Singer Raghu Dixit gives rocking reply to Bengaluru's RED FM RJ. RED FM RJ insists I should not speak Kannada but in English for a Bengloor station! asked him 2 f***off. am sure he thinks I am arrogant tweeted Raghu Dixit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada