For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬಲ್ಲಿ ಮತ್ತೊಂದು ಕನ್ನಡ ಹಾಡು ಸೂಪರ್ ಹಿಟ್

  By Rajendra
  |

  ಬಿಡುಗಡೆಗೂ ಮುನ್ನವೇ ಕೆಲವು ಚಿತ್ರಗಳು ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬಲ್ಲಿ ಗದ್ದಲ ಎಬ್ಬಿಸುತ್ತಿರುವುದು ಗೊತ್ತೇ ಇದೆ. 'ಗೋವಿಂದಾಯ ನಮಃ' ಚಿತ್ರದ "ಪ್ಯಾರ್ ಗೆ ಆಗ್ಬುಟ್ಟೈತೆ" ಹಾಡು ಭರ್ಜರಿ ಸದ್ದು ಮಾಡಿತ್ತು. ಅದಾದ ಬಳಿಕ 'ಲೂಸಿಯಾ' ಚಿತ್ರದ "ತಿನ್ ಬೇಡ ಕಮ್ಮಿ" ಹಾಡಿಗೂ ಜನ ಮುಗಿಬಿದ್ದಿದ್ದರು. ಈಗ ಆ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.

  ತರುಣ್ ಚಂದ್ರ ಅಭಿನಯದ ಇನ್ನೂ ಬಿಡುಗಡೆಯಾಗದ 'ಪದೇ ಪದೇ' ಚಿತ್ರದ ಹಾಡೊಂದು ಸೂಪರ್ ಹಿಟ್ ಆಗಿದೆ. ಇದುವರೆಗೂ ಆ ಹಾಡು ಯೂಟ್ಯೂಬಲ್ಲಿ 11 ಲಕ್ಷಕ್ಕೂ ಹೆಚ್ಚು ಹಿಟ್ ಗಳನ್ನು ದಾಖಲಿಸಿದೆ. "ಮನಸಾಗಿದೆಯೋ ಮನಸಾಗಿದೆಯೋ ಯಾಕಾಗಿದೆಯೋ ಕಾಣೆ..." ಎಂಬ ಹಾಡನ್ನು ಶ್ರೇಯಾ ಘೋಷಾಲ್ ಹಾಗೂ ಕೂನಾಲ್ ಗಾಂಜಾವಾಲಾ ಹಾಡಿದ್ದಾರೆ.

  ಕೇಳಲು ಇಂಪಾಗಿರುವ ನೋಡಲು ನಯನಮನೋಹರವಾಗಿರುವ ಈ ಹಾಡಿಗೆ ಚಿತ್ರರಸಿಕರು ಮುಗಿಬೀಳುತ್ತಿದ್ದಾರೆ. ಈ ಹಾಡಿನ ಇನ್ನೊಂದು ವಿಶೇಷ ಎಂದರೆ ಪಾಕಿಸ್ತಾನದ ಗಡಿ ಪ್ರದೇಶ ಭುಜ್ ನಲ್ಲಿ ಚಿತ್ರೀಕರಿಸಿರುವುದು. ಪೀಣ್ಯಾ ನಾಗರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕಿ ಅಕಿಲಾ ಕಿಶೋರ್. ಸತೀಶ್ ಆರ್ಯನ್ ಎಂಬುವವರು ಸಂಗೀತ ಸಂಯೋಜಿಸಿರುವ ಚೊಚ್ಚಲ ಚಿತ್ರವಿದು.

  ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿ ಮೃದುಲಾ. ಪಾತ್ರವರ್ಗದಲ್ಲಿ ವಿಜಯಕಾಶಿ, ವೀಣಾ ಸುಂದರ್, ಸಂಕೇತ್ ಕಾಶಿ, ಕಾರ್ತಿಕ್, ಗಿರಿಜಾ ಲೋಕೇಶ್ ಮುಂತಾದವರಿದ್ದಾರೆ. ಈ 'ಪದೇ ಪದೇ' ಚಿತ್ರದ ನಿರ್ಮಾಪಕರು ವಿಜಯ್ ಮತ್ತು ಆನಂದ್ ಕುಮಾರ್. ಪದೇ ಪದೇ ಹಾಡಿನ ವಿಡಿಯೋ ನೋಡಿ.

  "ಈ ಹಿಂದೆ ಇಂತಹ ಸಿನಿಮಾ ಬಂದಿಲ್ಲ ಎಂದಲ್ಲ. ಆದರೆ, ಇಂತಹ ಫೀಲ್ ಇರುವ ಸಿನಿಮಾ ಬಂದಿಲ್ಲ ಎಂಬುದು ನನ್ನ ಅನಿಸಿಕೆ. ಇದೊಂಥರ ಮ್ಯೂಸಿಕಲ್ ಲವ್‌ಸ್ಟೋರಿ. ಕಥೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಈ ಚಿತ್ರದ ಸಂಗೀತಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ" ಎಂಬುದು ನಿರ್ದೇಶಕರ ಮಾತು. (ಒನ್ಇಂಡಿಯಾ ಕನ್ನಡ)

  English summary
  Tarun Chandra, Akila Kishor Romantic Song from Kannada movie 'Pade Pade' has crossed over 10 lakh hits in the Youtube. The song sung by Shreya Goshal and Kunal Ganjawala and music composed by Satish Aryan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X