For Quick Alerts
  ALLOW NOTIFICATIONS  
  For Daily Alerts

  ಜಯಂತ್ ಕಾಯ್ಕಿಣಿ ಪುತ್ರನಿಂದ ಹಾಡು ಬರೆಸಿದ ಸೂರಿ

  |
  Jayanth Kaykini's son pens down for the first time for Popcorn monkey | RITWIK KAIKINI | PMT|CHARAN

  'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೊದಲ ಹಾಡು ನಿನ್ನೆ (ಜನವರಿ 17) ಬಿಡುಗಡೆಯಾಗಿದೆ. 'ಮಾದೇವಾ..' ಎನ್ನುವ ಹಾಡು ತುಂಬ ಡಿಫರೆಂಟ್ ಆಗಿದೆ.

  ಹಾಡಿನಲ್ಲಿ ಇಂಗ್ಲೀಷ್ ಪದಗಳೆ ತುಂಬಿವೆ. ಹಾಡಿನ ಸಂಗೀತ ವಿಭಿನ್ನವಾಗಿದೆ. ಚರಣ್ ರಾಜ್ ಮತ್ತೊಂದು ಪ್ರಯೋಗ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಧ್ವನಿ ಹಾಡಿಗೆ ಹೊಸ ರೂಪ ನೀಡಿದೆ.

  ಅಂದಹಾಗೆ, ಈ ಹಾಡಿನ ಸಾಹಿತ್ಯ ಬರೆದವರು ಯಾರು ಎನ್ನುವುದು ಕೇಳಿದರೆ, ಕೊಂಚ ಅಚ್ಚರಿ ಆಗಬಹುದು. ಕಾರಣ ಈ ಹಾಡಿಗೆ ಸಾಹಿತ್ಯ ಒದಗಿಸಿರುವುದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ.

  ತಂದೆಯ ರೀತಿಯೇ ಸಾಹಿತ್ಯ ಪ್ರೇಮ ಹೊಂದಿರುವ ರಿತ್ವಿಕ್ ಕಾಯ್ಕಿಣಿ 'ಪಾಪ್ ಕಾರ್ನ್ ಮಂಕಿ ಟೈಗರ್'ಗೆ ಹಾಡು ಬರೆದಿದ್ದಾರೆ. ಈ ಹಿಂದೆ ಸೂರಿ ನಿರ್ದೇಶನದ ಅನೇಕ ಸಿನಿಮಾಗಳ ಹಾಡಿನಲ್ಲಿ ಜಯಂತ್ ಕಾಯ್ಕಿಣಿ ಸಾಹಿತ್ಯವಿತ್ತು. ಇದೀಗ ಸೂರಿ ಕಾಯ್ಕಿಣಿ ಪುತ್ರನ ಕೈನಲ್ಲಿ ಹಾಡು ಬರೆಸಿದ್ದಾರೆ.

  ಈ ಹಾಡಿನ ಶೈಲಿ ತುಂಬ ಹೊಸದಾಗಿದೆ, ಇದು ಹೊಸ ಟ್ರೆಂಡ್ ಎಂದು ಅನೇಕರು ಮೆಚ್ಚಿಕೊಂಡಿದ್ದಾರೆ. ಕೆಲವರು ಹಾಡು ಓಕೆ ಓಕೆ ಅಷ್ಟೇ ಎನ್ನುತ್ತಿದ್ದಾರೆ.

  'ಪಾಪ್ ಕಾರ್ನ್ ಮಂಕಿ ಟೈಗರ್' ಧನಂಜಯ್ ನಟನೆಯ ಸಿನಿಮಾ. ನಿವೇದಿತಾ, ಅಮೃತ ಐಯ್ಯರ್, ಸಪ್ತಮಿ ನಾಯಕಿಯರಾಗಿದ್ದಾರೆ.

  English summary
  Popcorn Monkey Tiger Madeva song written by Jayanth Kaikini son Ritwik Kaikini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X