»   » 'ದೊಡ್ಮನೆ ಹುಡ್ಗ' ಆಡಿಯೋ ಹಬ್ಬ ಇಂದಿನಿಂದ ಶುರು

'ದೊಡ್ಮನೆ ಹುಡ್ಗ' ಆಡಿಯೋ ಹಬ್ಬ ಇಂದಿನಿಂದ ಶುರು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ದೊಡ್ಮನೆ ಹುಡ್ಗ'.

ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡ್ಗ' ಚಿತ್ರದ ಆಡಿಯೋ ಹಬ್ಬ ಇಂದಿನಿಂದ ಶುರುವಾಗಲಿದೆ. ಅರ್ಥಾತ್, 'ದೊಡ್ಮನೆ ಹುಡ್ಗ' ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆ ಆಗಲಿದೆ. [ಆಗಸ್ಟ್ 14 ರಿಂದ ಎಲ್ಲರ ಬಾಯಲ್ಲೂ 'ದೊಡ್ಮನೆ ಹುಡುಗ'ನ ಗುಣಗಾನ]


Puneeth Rajkumar starrer 'Dodmane Huduga' first song releases today

ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ದೊಡ್ಮನೆ ಮಕ್ಕಳಾದ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಹಾಡಿರುವ 'ಅಭಿಮಾನಿಗಳೇ ನಮ್ಮನೆ ದೇವ್ರು....' ಹಾಡು ಇಂದು ರಿಲೀಸ್ ಆಗಲಿದೆ. ['ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ಜೊತೆ ಶಿವರಾಜ್ ಕುಮಾರ್.?]


ಈಗಾಗಲೇ 'ದೊಡ್ಮನೆ ಹುಡ್ಗ' ಆಡಿಯೋ ಕೇಕ್ ಕಟ್ ಮಾಡುವ ಮೂಲಕ 'ದೊಡ್ಮನೆ ಸಂಗೀತ ಹಬ್ಬ'ಕ್ಕೆ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದ್ದಾರೆ.


Puneeth Rajkumar starrer 'Dodmane Huduga' first song releases today

'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇವತ್ತು 'ನಡೆದಾಡುವ ದೇವರು' ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಬಿಡುಗಡೆ ಮಾಡಲಿದ್ದಾರೆ.


ಆಗಸ್ಟ್ 17 ರಂದು ಎರಡನೇ ಹಾಡು, ಆಗಸ್ಟ್ 20 ರಂದು ಮೂರನೇ ಹಾಡು, ಆಗಸ್ಟ್ 23 ರಂದು ನಾಲ್ಕನೇ ಹಾಡು ಮತ್ತು ಆಗಸ್ಟ್ 26 ರಂದು ಕೊನೆಯ ಹಾಡು ಹಾಗೂ 'ದೊಡ್ಮನೆ ಹುಡ್ಗ' ಟ್ರೈಲರ್ ರಿಲೀಸ್ ಆಗಲಿದೆ.


'ದುನಿಯಾ' ಸೂರಿ ಆಕ್ಷನ್ ಕಟ್ ಹೇಳಿರುವ 'ದೊಡ್ಮನೆ ಹುಡ್ಗ' ಚಿತ್ರದ ಹಾಡುಗಳು ಹೇಗಿರಲಿವೆಯೋ ಅಂತ ಕಾತರದಿಂದ ಕಾಯುತ್ತಿದ್ದವರಿಗೆ ಇಂದು ಮೊದಲ ಝಲಕ್ ಸಿಗಲಿದೆ. ಕಾಯ್ತಿರಿ....

English summary
Kannada Actor, Rebel Star, Congress Politician, Ambareesh and Puneeth Rajkumar starrer 'Dodmane Huduga' first song 'Abhimanigale Nammane Devru...' to be released today (August 14th)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X