twitter
    For Quick Alerts
    ALLOW NOTIFICATIONS  
    For Daily Alerts

    ಡಿಸ್ಕೋ ರಾಣಿ ದೋನ್ನಾರನ್ನು ಬಲಿತೆಗುಕೊಂಡ ಕ್ಯಾನ್ಸರ್‌

    By Rajendra
    |

    Donna Summer
    ಎಪ್ಪತ್ತು ಎಂಬತ್ತರ ದಶಕದ ಜನಪ್ರಿಯ ಡಿಸ್ಕೋ ಗಾಯಕಿ ದೋನ್ನಾ ಸಮ್ಮರ್ ಮೃತಪಟ್ಟಿದ್ದಾರೆ. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ 63 ವರ್ಷ ವಯಸ್ಸಾಗಿತ್ತು. ಪತಿ ಬ್ರೂಸ್, ಮೂವರು ಮಕ್ಕಳು ಹಾಗೂ ನಾಲ್ಕು ಮಂದಿ ಮೊಮ್ಮಕ್ಕಳನ್ನು ದೊನ್ನಾ ಅಗಲಿದ್ದಾರೆ. 'ಕ್ವೀನ್ ಆಫ್ ಡಿಸ್ಕೋ' ಎಂದೇ ಖ್ಯಾತರಾದ ಇವರು ಗ್ರ್ಯಾಮಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

    ಐ ಫೀಲ್ ಲವ್, ಲಾಸ್ಟ್ ಡಾನ್ಸ್, ಬ್ಯಾಡ್ ಗರ್ಲ್ಸ್, ಲವ್ ಟು ಲವ್ ಯು ಬೇಬಿ ಮುಂತಾದವು ದೊನ್ನಾ ಅವರ ಜನಪ್ರಿಯ ಹಿಟ್ ಗೀತೆಗಳು. ತಮ್ಮ ವೃತ್ತಿಜೀವನದಲ್ಲಿ 5 ಬಾರಿ ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಘನತೆ ದೊನ್ನಾ ಅವರದು. 1980ರಲ್ಲಿ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದಿದ್ದರು.

    ಅಮೆರಿಕ ಮೂಲದ ಈ ಗಾಯಕಿ 9/11 ಉಗ್ರರ ದಾಳಿಯ ಸಂದರ್ಭದಲ್ಲಿ ವಿಷಗಾಳಿ ಸೇವಿಸಿದ ಪರಿಣಾಮ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಲು ಕಾರಣವಾಗಿತ್ತು.
    ದೊನ್ನಾ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)

    English summary
    Queen of Disco" Donna Summer, who shot to fame with iconic hits like "Last Dance", "Bad Girls" and "Love to Love You Baby" in the '70s, died after losing her battle with lung cancer. Summer, 63, whose real name is LaDonna Adrian Gaines, died at her Naples, Florida home yesterday.
    Friday, May 18, 2012, 17:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X