»   » ಶಿವಣ್ಣ ಮೆಚ್ಚಿದ 'ಗೊಂಬೆ ಹೇಳುತೈತೆ' ಕವರ್ ಸಾಂಗ್ ಇದು

ಶಿವಣ್ಣ ಮೆಚ್ಚಿದ 'ಗೊಂಬೆ ಹೇಳುತೈತೆ' ಕವರ್ ಸಾಂಗ್ ಇದು

Posted By:
Subscribe to Filmibeat Kannada

'ರಾಜಕುಮಾರ' ಸಿನಿಮಾದ 'ಗೊಂಬೆ ಹೇಳುತೈತೆ...' ಹಾಡು ಕನ್ನಡಿಗರು ಎಂದಿಗೂ ಮರೆಯದಷ್ಟು ಹತ್ತಿರವಾಗಿ ಬಿಟ್ಟಿದೆ. ಈಗಾಗಲೇ ಈ ಹಾಡಿನ ಅನೇಕ ಕವರ್ ಸಾಂಗ್ ಗಳು ಬಂದಿವೆ. ಆದರೆ ಈಗ ಈ ಹಾಡಿನ ಹೊಸ ರೀತಿಯ ಒಂದು ಕವರ್ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ.

ಈ ಕವರ್ ಹಾಡು ನಿನ್ನೆ ರಿಲೀಸ್ ಆಗಿದ್ದು, ಕಾರ್ಯಕ್ರಮದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಿರ್ಮಾಪಕಿ ಶೈಲಜಾ ನಾಗ್ ಭಾಗಿಯಾಗಿದ್ದರು. ಜೊತೆಗೆ ಯೂ ಟ್ಯೂಬ್ ನಲ್ಲಿ ಈ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

Raajakumara movie 'Gombe Heluthaithe' cover song released

ಈ ಕವರ್ ಹಾಡಿನಲ್ಲಿ ಯೋಧರ ತ್ಯಾಗವನ್ನು ಸಾರಿದ್ದಾರೆ. ಯುವ ಕಲಾವಿದರಾದ ನಂದನ್ ಗೌಡ, ಶಶಾಂಕ್ ಶರ್ಮ, ಚೈತ್ರ ಜೆ ಆಚಾರ್ಯ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಿತಿನ್ ಕ್ಯಾಮರಾ ಕೈಚಳಕ ತೋರಿಸಿದ್ದು, ಲೋಹಿತ್ ಜಯಣ್ಣ ನಿರ್ದೇಶನ ಮಾಡಿದ್ದಾರೆ.

Raajakumara movie 'Gombe Heluthaithe' cover song released
Shivarajkumar Upcoming Movies List | Watch Video | Filmibeat Kannada

ಈ ಹಾಡನ್ನು ಯೋಧರಿಗೆ ಮತ್ತು ಡಾ.ರಾಜ್ ಕುಮಾರ್ ಕುಟುಂಬಕ್ಕೆ ಅರ್ಪಿಸಲಾಗಿದೆ. ವಿಶೇಷ ಎಂದರೆ ಹಾಡಿನಲ್ಲಿ ನಟ ಶಿವಣ್ಣ ಕೂಡ ಕಾಣಿಸಿಕೊಂಡಿದ್ದಾರೆ. ಹಾಡಿನ ಮೂಲಕ ದೇಶಪ್ರೇಮವನ್ನು ತೋರಿದ ಈ ಯುವಕರ ತಂಡ ಯೋಧರ ಬಗ್ಗೆ ಅದ್ಭುತವಾಗಿ ಹೇಳಿದ್ದಾರೆ. 'ಗೊಂಬೆ ಹೇಳುತೈತೆ' ಕವರ್ ಸಾಂಗ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Raajakumara movie 'Gombe Heluthaithe' cover song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada