ಕುರುಕ್ಷೇತ್ರ 50ನೇ ದಿನದ ಸಂಭ್ರಮ: ಇಂದು ಸಂಜೆ ಸಿಗಲಿದೆ ಸರ್ಪ್ರೈಸ್

Recommended Video

Kurukshetra : ಕುರುಕ್ಷೇತ್ರ 50ನೇ ದಿನದ ಸಂಭ್ರಮಕ್ಕೆ ಸಿಗಲಿದೆ ದೊಡ್ಡ ಸರ್ಪ್ರೈಸ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಸದ್ಯದಲ್ಲೇ 50 ದಿನ ಪೂರೈಸಲಿದೆ. ಈ ಸಂಭ್ರಮಕ್ಕೆ ಡಿ ಬಾಸ್ ಭಕ್ತರು ಸಜ್ಜಾಗುತ್ತಿದ್ದಾರೆ. 'ಕುರುಕ್ಷೇತ್ರ ವಿಜಯೋತ್ಸವ' ಎಂಬ ಹೆಸರಿನಲ್ಲಿ ಡಿ-ಬಾಸ್ ಚಿತ್ರದ ಯಶಸ್ಸನ್ನ ಆಚರಿಸಲು ಪ್ಲಾನ್ ಮಾಡಲಾಗಿದೆ.

ಇದೇ ಸಂತಸದಲ್ಲಿ ಕುರುಕ್ಷೇತ್ರ ತಂಡವೂ ಸರ್ಪ್ರೈಸ್ ನೀಡಿದೆ. ಚಿತ್ರದ ಶೀರ್ಷಿಕೆ ಗೀತೆ 'ಸಾಹೋರೆ ಸಾಹೋ....' ವಿಡಿಯೋ ವರ್ಷನ್ ಬಿಡುಗಡೆಯಾಗುತ್ತಿದೆ. ಇಂದು ಸಂಜೆ 5 ಗಂಟೆಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಲಿದೆ.

ವಿ ನಾಗೇಂದ್ರ ಪ್ರಸಾದ್ ಈ ಗೀತೆಗೆ ಸಾಹಿತ್ಯ ಬರೆದಿದ್ದು, ವಿಜಯ ಪ್ರಕಾಶ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

Saahore Saaho Song Will Release On September 20th

ಸದ್ಯ ಟಿ-ಸಿರೀಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು ಲಿರಿಕಲ್ ವಿಡಿಯೋ ಹಾಡು 5.3 ಮಿಲಿಯನ ವೀಕ್ಷಣೆ ಕಂಡಿತ್ತು. ಹಾಡು ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.

ದರ್ಶನ್ ದುರ್ಯೋಧನನಾಗಿ ನಟಿಸಿದ್ದ ಕುರುಕ್ಷೇತ್ರ ಆಗಸ್ಟ್ 9 ರಂದು ತೆರೆಕಂಡಿತ್ತು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಂದಿತ್ತು. ಹಿಂದಿಯಲ್ಲೂ ಬಿಡುಗಡೆಯಾಗಬೇಕಿದ್ದು, ಸದ್ಯಕ್ಕೆ ಬಿಡುಗಡೆ ದಿನಾಂಕ ಪಕ್ಕಾ ಆಗಿಲ್ಲ. ಇನ್ನುಳಿದಂತೆ ನಾಗಣ್ಣ ಈ ಚಿತ್ರ ನಿರ್ದೇಶನ ಮಾಡಿದ್ದು, ಮುನಿರತ್ನ ನಿರ್ಮಿಸಿದ್ದರು.

English summary
Kurukshetra's Saahore Saaho title movie will release on september 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X