»   » ಕ್ರೇಜಿಸ್ಟಾರ್ ಗೆ 'ಲಹರಿ' ಸಂಸ್ಥೆ ಕೊಟ್ಟಿದ್ದು ಬ್ಲ್ಯಾಂಕ್ ಚೆಕ್!

ಕ್ರೇಜಿಸ್ಟಾರ್ ಗೆ 'ಲಹರಿ' ಸಂಸ್ಥೆ ಕೊಟ್ಟಿದ್ದು ಬ್ಲ್ಯಾಂಕ್ ಚೆಕ್!

By: ಹರಾ
Subscribe to Filmibeat Kannada

'ಕನಸುಗಾರ'ನ ಹೊಸ ಕನಸು 'ಅಪೂರ್ವ' ಚಿತ್ರದ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಅನೇಕ ವಿಚಾರಗಳನ್ನ ತಿಳಿದುಕೊಂಡಿದ್ರಿ. 'ಅಪೂರ್ವ' ಚಿತ್ರದ ಫಸ್ಟ್ ಲುಕ್ ಫೋಟೋಗಳು, ಟೈಟಲ್ ಟೀಸರ್ ನ ಇದೇ ಪುಟದಲ್ಲಿ ನೀವು ಕಣ್ತುಂಬಿಕೊಂಡಿದ್ರಿ.

ಇದೀಗ, 'ಅಪೂರ್ವ' ಚಿತ್ರದ ಬಗ್ಗೆ, ಅದ್ರಲ್ಲೂ ಕ್ರೇಜಿ ಸ್ಟಾರ್ ರವಿಚಂದ್ರನ್ ಬಗ್ಗೆ ನೀವು ಕೇಳಿರದ ವಿಷಯವನ್ನ ಓದುವ ಸಮಯ. 'ಅಪೂರ್ವ' ಚಿತ್ರದ ಆಡಿಯೋ ಹಕ್ಕುಗಳು ವರ್ಷಗಳ ಬಳಿಕ 'ಲಹರಿ' ಸಂಸ್ಥೆಯ ಪಾಲಾಗಿದೆ.


Apoorva Audio Rights sale

'ಈಶ್ವರಿ' ಆಡಿಯೋ ತಲೆಯೆತ್ತಿದ ಮೇಲೆ ಅದೇ ಸಂಸ್ಥೆ ಅಡಿಯಲ್ಲಿ ಹಾಡುಗಳನ್ನ ಹೊರತರುತ್ತಿದ್ದ ರವಿಮಾಮ, ಇದೀಗ ವರ್ಷಗಳ ನಂತರ 'ಲಹರಿ' ಸಂಸ್ಥೆಗೆ 'ಅಪೂರ್ವ' ಆಡಿಯೋ ಹಕ್ಕನ್ನ ನೀಡಿದ್ದಾರೆ. ಇದೇ ಖುಷಿಯಲ್ಲಿ 'ಲಹರಿ' ಸಂಸ್ಥೆ ಅಮೋಘ 72 ಲಕ್ಷ ರೂಪಾಯಿಗೆ ಖರೀದಿಸಿತು ಅನ್ನುವ ಮಾಹಿತಿ ಕೂಡ ಎಲ್ಲೆಡೆ ಹಬ್ಬಿತ್ತು. [ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ]


'ಲಹರಿ' ಸಂಸ್ಥೆ 'ಅಪೂರ್ವ' ಚಿತ್ರದ ಹಾಡುಗಳನ್ನ 72 ಲಕ್ಷ ರೂಪಾಯಿಗೆ ಕೊಂಡುಕೊಂಡಿರುವುದು ನಿಜ. ಆದ್ರೆ, ಅದರ ಹಿಂದೆ ಒಂದು ಎಮೋಷನಲ್ ಸ್ಟೋರಿ ಕೂಡ ಇದೆ.


Apoorva Audio Rights sale

'ಪ್ರೇಮಲೋಕ', 'ರಣಧೀರ' ಮುಂತಾದ ಚಿತ್ರಗಳ ಆಡಿಯೋದಲ್ಲಿ ದಾಖಲೆ ಬರೆದ 'ಲಹರಿ' ಸಂಸ್ಥೆ ಮತ್ತು ರವಿಚಂದ್ರನ್ ಅನುಬಂಧ ಸುಮಾರು ಎರಡು ದಶಕಗಳಷ್ಟು ಹಳೆಯದ್ದು. ಆ ಸ್ನೇಹ, ಒಡನಾಟವನ್ನ ನೆನೆದು ರವಿಚಂದ್ರನ್ ಮರಳಿ 'ಲಹರಿ' ಸಂಸ್ಥೆಗೆ ಆಡಿಯೋ ಹಕ್ಕನ್ನ ನೀಡಿದ್ದಕ್ಕೆ, ಫುಲ್ ಖುಷ್ ಆದ 'ಲಹರಿ' ಸಂಸ್ಥೆಯ ಮಾಲೀಕರು ರವಿಚಂದ್ರನ್ ಗೆ ಬ್ಲಾಂಕ್ ಚೆಕ್ ನೀಡಿದರು! [ಅಲೆ ಅಲೆಯಾಗಿ ತೇಲಿಬಂದ 'ಅಪೂರ್ವ' ದೃಶ್ಯ ಕಾವ್ಯ]


ಎಷ್ಟು ಬೇಕಾದರೂ ಕೋಟ್ ಮಾಡಿ ಅಂತ 'ಲಹರಿ' ಸಂಸ್ಥೆ ಹೇಳಿದ್ದಕ್ಕೆ 72 ಲಕ್ಷ ರೂಪಾಯಿಯನ್ನ ರವಿಮಾಮ ಬರೆದರಂತೆ. ಇದಕ್ಕೂ ಒಂದು ಕಾರಣ ಇದೆ. ರವಿಚಂದ್ರನ್ ಲಕ್ಕಿ ನಂಬರ್ 9. 7+2=9 ಆಗಿರುವುದರಿಂದ ನಂಬರ್ 72 ರವಿಮಾಮನ ತಲೆಯಲ್ಲಿ ತಕ್ಷಣ ಹೊಳೆದಿದೆ. ಆದ ಕಾರಣ ಆ ನಂಬರ್ ಆಯ್ಕೆ ಮಾಡಿದರಂತೆ.


Apoorva Audio Rights sale

ಬ್ಲಾಂಕ್ ಚೆಕ್ ನಲ್ಲಿ ರವಿಮಾಮ ಕೋಟಿಯನ್ನೇ ಕೋಟ್ ಮಾಡಬಹುದಿತ್ತು. ಆದ್ರೆ, ಕ್ರೇಜಿ ಸ್ಟಾರ್ ಹಾಗೆ ಮಾಡ್ಲಿಲ್ಲ. 'ಸ್ನೇಹ ಫಸ್ಟು...ದುಡ್ಡು ನೆಕ್ಸ್ಟು' ಅಂತ ಎಷ್ಟು ಬೇಕೋ ಅಷ್ಟನ್ನ ಮಾತ್ರ ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಕೊಡುವ ಕೈ' ಅಂತಲೇ ಖ್ಯಾತಿ ಪಡೆದಿರುವ ರವಿಚಂದ್ರನ್, 'ಲಹರಿ' ಸಂಸ್ಥೆ ಜೊತೆ ಸೇರಿ 'ಅಪೂರ್ವ' ಆಡಿಯೋ ಮೂಲಕ ಹೊಸ ದಾಖಲೆ ಮಾಡುವುದಕ್ಕೆ ಹೊರಟಿದ್ದಾರೆ. ['ಪ್ರೇಮಿಗಳ ದಿನ'ದಂದು ರವಿಚಂದ್ರನ್ ಬಂಪರ್ ಉಡುಗೊರೆ]


ಇದೇ ಪ್ರೇಮಿಗಳ ದಿನ 'ಅಪೂರ್ವ' ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಲಹರಿ-ರವಿಚಂದ್ರನ್ 'ಅಪೂರ್ವ' ಸಂಗಮದ ಕಮಾಲ್ ಗಾಗಿ ಕ್ರೇಜಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

English summary
Crazy Star Ravichandran starrer most awaited movie 'Apoorva' Audio Rights was bagged by Lahari Audio Company. Here is the secret behind the sale of 'Apoorva' Audio rights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada