»   » ಶಿವಣ್ಣರ 'ಶಿವ' ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ

ಶಿವಣ್ಣರ 'ಶಿವ' ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಾಗಿಣಿ ಜೋಡಿಯ 'ಶಿವ' ಚಿತ್ರದ ಆಡಿಯೋ ಬಿಡುಗಡೆ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದಿದೆ. ಶಿವಣ್ಣರ ಜೋಗಿ, ಮೈಲಾರಿ ಚಿತ್ರಗಳ ಆಡಿಯೋ ಬಿಡುಗಡೆ ಕೂಡ ಚಿತ್ರದುರ್ಗದಲ್ಲೇ ಆಗಿತ್ತು. ಆ ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತು.

ಅದೇ ಕಾರಣಕ್ಕೆ ದಾಖಲೆ ಗೊತ್ತೇ ಇದೆ. ಶಿವ ಚಿತ್ರದ ಧ್ವನಿಸುರುಳಿ ಕೂಡ ಅಲ್ಲೇ ಬಿಡುಗಡೆಯಾಗಿದೆ. ಶಿವ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ 'ಶಿವ' ಚಿತ್ರದ ಆಡಿಯೋ ಬಿಡುಗಡೆಯನ್ನು ಬರೋಬ್ಬರಿ 50 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮಾಡಿದ್ದಾರೆ. ಅದೃಷ್ಟದ ಮೇಲಿನ ನಂಬಿಕೆಯೇ ಇದಕ್ಕೆ ಕಾರಣವಂತೆ.

ಕಳೆದ ಶನಿವಾರ (16 ಜೂನ್ 2012) ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭ ಸಿನಿಅಭಿಮಾನಿಗಳಿಂದ ತುಂಬಿಹೋಗಿತ್ತು. ಭಾರೀ ಮಳೆ ಬಂದಿದ್ದರೂ ಸೇರಿದ್ದ ಸಾವಿರಾರು ಅಭಿಮಾನಿಗಳು ನಿರಾತಂಕವಾಗಿ ನೋಡುತ್ತಿದ್ದರು.

ಶಿವ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿದ್ದು ಸೂಪರ್ ಸ್ಟಾರ್ ಉಪೇಂದ್ರ. ನಟ ದುನಿಯಾ ವಿಜಯ್ ಶಿವ ಚಿತ್ರದ 'ಪ್ರೋಮೋ' ಬಿಡುಗಡೆ ಮಾಡಿದರು. ನಟರಾದ ಪಟ್ರೆ ಅಜಿತ್, ಯಜ್ಞಾ ಶೆಟ್ಟಿ, ಪಂಕಜ್, ವಿಜಯ ರಾಘವೇಂದ್ರ, ನೀತು ಮುಂತಾದವರು ಹಲವು ಹಾಡುಗಳಿಗೆ ನರ್ತಿಸಿ ಪ್ರೇಕ್ಷಕರ ಮನಸ್ಸನ್ನು ಸೆಳೆದರು.

ಅಷ್ಟೇ ಅಲ್ಲ, ಶಿವ ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ಕೆಲವು ಹಾಡುಗಳನ್ನು ಹಾಡಿದರು. ದುನಿಯಾ ವಿಜಯ್ 'ಜೋಗಿ' ಚಿತ್ರದ 'ಹೊಡಿ ಮಗ ಹೊಡಿ ಮಗ..' ಹಾಡಿಗೆ ಹೆಜ್ಜೆ ಹಾಕಿದರೆ ನಟ ರವಿಶಂಕರ್ ತಮ್ಮ ಅಪೂರ್ವ ಕಂಠಸಿರಿಯಿಂದ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು. ಸುಮಾರು ಮೂರು ಗಂಟೆಗಳ ಕಾಲ ಅದ್ದೂರಿ ಮನರಂಜನಾ ಕಾರ್ಯಕ್ರಮ ನಡೆಯಿತು.

ಈ ರೀತಿಯಾಗಿ ಶಿವ ಚಿತ್ರದ ಆಡಿಯೋ ಬಿಡುಗಡೆ, ಇಡೀ ಚಿತ್ರದುರ್ಗವನ್ನು ಸಂಪೂರ್ಣ ಸಂಭ್ರಮದಲ್ಲಿ ತೇಲಿಸಿತು. ಶಿವಣ್ಣನ ಅಭಿಮಾನಿಗಳಂತೂ ಅಕ್ಷರಶಃ ಖುಷಿಪಟ್ಟರು. ಅಂದಹಾಗೆ, ಶಿವಣ್ಣರ 101 ನೇ ಚಿತ್ರವೆಂಬ ಹಣೆಪಟ್ಟಿಯ ಈ ಶಿವ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿರ್ದೇಶಕರು. ಇತ್ತೀಚಿಗೆ ಅವರ ನಿರ್ದೇಶನದ 'ಭೀಮಾ ತೀರದಲ್ಲಿ' (ಬದಲಾದ ಶೀರ್ಷಿಕೆ- ಚಂದಪ್ಪ) ಬಿಡುಗಡೆಯಾಗಿತ್ತು. (ಒನ್ ಇಂಡಿಯಾ ಕನ್ನಡ)

English summary
Shiva Movie Audio Released in Chitradurga on 16th June 2012. Shivarajkumar and Ragini Lead this movie is directed by Om Prakash Rao. This movie produced by KP Srikanth. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada